ಇಸ್ಲಾಮಾಬಾದ್: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ದಶಕಗಳಿಂದ ನೆಲೆಯೂರಿದ್ದ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ಆಪರೇಷನ್ ಸಿಂಧೂರ್ ನಡೆಸಿದೆ. ಬೆನ್ನಲ್ಲೇ ಎರಡು ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣ ಆಗಿದೆ. ಉಗ್ರರ ಸದೆಬಡಿದಿರೋದನ್ನು ಸಹಿಸದ ಪಾಕಿಸ್ತಾನ, ಭಾರತದತ್ತ ಕಾಲು ಕೆದರಿ ಯುದ್ಧಕ್ಕೆ ಬರುತ್ತಿದೆ.
ಇದೀಗ ಬೆಳಗ್ಗೆಯಿಂದ ನಡೆಯುತ್ತಿರುವ ಆತ್ಮಹತ್ಯಾ ಡ್ರೋನ್ ದಾಳಿಯಲ್ಲಿ ಈ ವರೆಗೂ 26 ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪ್ರಮುಖವಾಗಿ ಈ ಆತ್ಮಹತ್ಯಾ ಡ್ರೋನ್ ದಾಳಿಗಳು ಲಾಹೋರ್ ನ ವಾಲ್ಟನ್ ವಿಮಾನ ನಿಲ್ದಾಣದ ಬಳಿಯ ಗೋಪಾಲ್ ನಗರ ಮತ್ತು ನಸೀರಾಬಾದ್ ಪ್ರದೇಶಗಳಲ್ಲಿ ನಡೆದಿವೆ ಎನ್ನಲಾಗಿದೆ.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರಲು ನೀರಿಗೆ ಒಂದು ಚಿಟಿಕೆ ಈ ಪುಡಿ ಹಾಕಿ ಕುಡಿಯಿರಿ.. ಆಮೇಲೆ ರಿಸಲ್ಟ್ ನೋಡಿ!
ಇನ್ನು ಡ್ರೋನ್ ದಾಳಿ ನಡೆದ ಈ ಪ್ರದೇಶವು ಲಾಹೋರ್ನ ಐಷಾರಾಮಿ ಕೇಂದ್ರ ವ್ಯಾಪಾರ ಜಿಲ್ಲೆ ಮತ್ತು ಲಾಹೋರ್ ಸೇನಾ ಕಂಟೋನ್ಮೆಂಟ್ಗೆ ಹೊಂದಿಕೊಂಡಿದೆ. ಸಿಯಾಲ್ಕೋಟ್, ಕರಾಚಿ ಮತ್ತು ಲಾಹೋರ್ ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.
ಅಂತೆಯೇ ದಾಳಿ ನಡೆಸಲು ಬಂದ ಡ್ರೋನ್ ಗಳ ಪೈಕಿ ಸುಮಾರು 12 ಡ್ರೋನ್ ಗಳನ್ನು ಹೊಡೆದುರುಳಿಸಿರುವುದಾಗಿ ಪಾಕ್ ಸೇನೆ ಹೇಳಿಕೊಂಡಿದೆ. ವ್ಯವಸ್ಥೆಯನ್ನು ಜ್ಯಾಮ್ ಮಾಡುವ ಮೂಲಕ ಡ್ರೋನ್ ಅನ್ನು ಹೊಡೆದುರುಳಿಸಲಾಗಿದೆ ಎಂದು ಸೇನೆ ಸಮ್ಮಾ ಟಿವಿಗೆ ಮಾಹಿತಿ ನೀಡಿದೆ. ಆದಾಗ್ಯೂ ಡ್ರೋನ್ ಗಳ ಮೂಲ ಪತ್ತೆ ಮಾಡಲು ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.