ನವದೆಹಲಿ:- ಭಾರತವು ಪಾಕಿಸ್ತಾನದ ಹಲವು ಉಗ್ರರ ಹತ್ಯೆಗೈದಿರುವ ಘಟನೆ ಸಾಂಬಾದಲ್ಲಿ ಜರುಗಿದೆ.
ಗುರುವಾರ ಹಲವು ಗಂಟೆಗಳ ಕಾಲ ನಡೆದ ದಾಳಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯಲ್ಲಿ ಪ್ರಮುಖ ಒಳನುಸುಳುವಿಕೆ ಪ್ರಯತ್ನವನ್ನು ಬಿಎಸ್‌ಎಫ್ ವಿಫಲಗೊಳಿಸಿದೆ ಎಂದು ಭಾರತದ ಗಡಿ ಭದ್ರತಾ ಪಡೆ ತಿಳಿಸಿದೆ.
ಸಾಂಬಾದ ಅಂತರರಾಷ್ಟ್ರೀಯ ಗಡಿಯಲ್ಲಿ ಅನೇಕ ಪಾಕಿಸ್ತಾನಿ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಇನ್ನೂ ಭಾರತೀಯ ವಾಯು ಸೇನೆಯು, ಪಾಕ್‌ನ ಪ್ರಮುಖ ಎಫ್-16 ಹೊಡೆದುರುಳಿಸಿ ತಕ್ಕ ಶಾಸ್ತಿ ಮಾಡಿದೆ. ಪಾಕಿಸ್ತಾನದ ವಾಯುಪಡೆಯ ಪ್ರಮುಖ ವಾಯುಪಡೆಯ ಕೇಂದ್ರವಾದ ಪಾಕಿಸ್ತಾನದ ಸರ್ಗೋಧಾ ವಾಯುನೆಲೆಯಿಂದ ಎಫ್ -16 ಹಾರಾಟ ನಡೆಸಿತು. ಈ ವೇಳೆ ಭಾರತೀಯ SAM ಸರ್ಗೋಧಾ ವಾಯುನೆಲೆಯ ಬಳಿ ಫೈಟರ್ ಜೆಟ್ ಅನ್ನು ಹೊಡೆದುರುಳಿಸಿತು.
ಸರ್ಗೋಧಾ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಮುಂಚೂಣಿಯ ವಾಯುನೆಲೆಯಾಗಿದ್ದು, ದೇಶದಲ್ಲಿ ಅತ್ಯಂತ ಹೆಚ್ಚು ರಕ್ಷಣೆ ಹೊಂದಿರುವ ವಾಯುನೆಲೆಗಳಲ್ಲಿ ಒಂದಾಗಿದೆ.