ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಪತರುಗಟ್ಟಿರುವ ಪಾಪಿ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಿದೆ. ಆದರೆ ಆ ದಾಳಿಯನ್ನು ಭಾರತೀಯ ಸೇನೆ ವಿಫಲ ಮಾಡುವಲ್ಲಿ ಯಶಸ್ಸು ಸಾಧಿಸಿ ಪಾಕ್ ಸೇನೆಗೆ ದಿಟ್ಟ ಉತ್ತರ ಕೊಟ್ಟಿದೆ.
ಮೇ 7ರ ಮಧ್ಯರಾತ್ರಿ ಭಾರತದ 15 ಸ್ಥಾನಗಳನ್ನು ಟಾರ್ಗೆಟ್ ಮಾಡಿ ಪಾಕಿಸ್ತಾನ ದಾಳಿ ನಡೆಸಿದೆ. ಪಾಕ್ ದಾಳಿ ಬಗ್ಗೆ ಮೊದಲೇ ತಿಳಿಸಿದ್ದ ಸೇನೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಅದನ್ನು ವಿಫಲ ಮಾಡಿದೆ.
ಭಾರತದ ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿದಂತೆ ಹಲವಾರು ಮಿಲಿಟರಿ ಗುರಿಗಳ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿ ದಾಳಿ ಮಾಡಲು ಪಾಕ್ ಯತ್ನಿಸಿದೆ. ಭಾರತ ಯುಎಎಸ್ ಗ್ರಿಡ್, ಏರ್‌ಡಿಫೇನ್ಸ್ ಸಿಸ್ಟಮ್ ಸಹಾಯದಿಂದ ದಾಳಿಯನ್ನು ತಡೆದಿದೆ. ಮುಂದುವರೆದು ಲಾಹೋರ್‌ನಲ್ಲಿದ್ದ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಗಳ ಮೇಲೆ ಭಾರತ ಸೇನೆಯ ದಾಳಿ ನಡೆದಿದೆ.