ನವದೆಹಲಿ:- ಇತ್ತೀಚೆಗೆ ಪಹಲ್ಗಾಮ್ ನಲ್ಲಿ ಹಿಂದುಗಳ ಮೇಲೆ ಉಗ್ರರು ನಡೆಸಿದ ಕ್ರೌರ್ಯ ಅದು ಭಾರತ ಮರೆಯುವಂತದ್ದಲ್ಲ. ಇದೇ ಪ್ರತೀಕಾರದ ಜ್ವಾಲೆಯಲ್ಲಿ ಉರಿಯುತ್ತಿರುವ ಭಾರತ ಪಾಕಿಸ್ತಾನದ ಮೇಲೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಅಲ್ಲದೇ ಯಾವುದೇ ಕ್ಷಣದಲ್ಲಾದರೂ ಎರಡು ದೇಶಗಳ ಮಧ್ಯೆ ಯುದ್ಧ ನಡೆಯುವ ಸಾಧ್ಯತೆ ಇದೆ.
ಇಂದು ದೇಶದಾದ್ಯಂತ ಮಾಕ್ ಡ್ರಿಲ್: ಬೆಂಗಳೂರಲ್ಲೂ ಮೊಳಗಲಿದೆ ಯುದ್ಧದ ಸೈರನ್! ಇಲ್ಲಿದೆ ಕಂಪ್ಲೀಟ್ ಮಾಹಿತಿ!
ಅದರ ಭಾಗವಾಗಿ ತಡರಾತ್ರಿ ಭಾರತ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರ ತೀರಿಸಿದೆ.
ಉಗ್ರರ 9 ನೆಲೆಗಳ ಮೇಲೆ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಳಗಡೆ ನುಗ್ಗಿ ಏರ್ಸ್ಟ್ರೈಕ್ ಮಾಡಿ ಧ್ವಂಸ ಮಾಡಿದೆ. ಭಾರತ ಪಾಕಿಸ್ತಾನದ ಯಾವುದೇ ಮಿಲಿಟರಿ ನೆಲೆಗಳನ್ನು ಗುರಿಯಾಗಿಸದೇ ಕೇವಲ ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಿ ದಾಳಿ ನಡೆಸಿದ್ದು ವಿಶೇಷ.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರಬಲ ಪ್ರತಿಕಾರವಾಗಿ, ಭಾರತೀಯ ಸಶಸ್ತ್ರ ಪಡೆಗಳು ಇಂದು ಮುಂಜಾನೆ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿರುವ 9 ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿವೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ನಡೆಸಿದ “ಆಪರೇಷನ್ ಸಿಂಧೂರ” ಎಂಬ ಕಾರ್ಯಾಚರಣೆಯು ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ನೆಲೆ ಮತ್ತು ಲಾಹೋರ್ ಮತ್ತು ಸಿಯಾಲ್ಕೋಟ್ ಬಳಿಯ ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾದ ಮರ್ಕಾಜ್ನಂತಹ ಪ್ರಮುಖ ಭಯೋತ್ಪಾದಕ ನೆಲೆಗಳ ಮೇಲೆ ನಡೆದಿದೆ.
9 ಉಗ್ರರ ನೆಲೆಗಳ ಪೈಕಿ ಕೆಲವು 100 ಕಿ.ಮೀ ದೂರದಲ್ಲಿ ಇದ್ದವು. ದಾಳಿಗೊಳಗಾದ ಶಿಬಿರಗಳು ಭಾರತದ ವಿರುದ್ಧದ ಹಿಂದಿನ ಅನೇಕ ದಾಳಿಗಳಿಗೆ ನೇರವಾಗಿ ಸಂಬಂಧಿಸಿವೆ. ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ದಾಳಿ ಎಲ್ಲೆಲ್ಲಿ?
ಮುರಿಡ್ಕೆ: ಸಾಂಬಾ ಎದುರಿನ ಗಡಿಯಿಂದ 30 ಕಿ.ಮೀ ದೂರದಲ್ಲಿದ್ದು ಇದು ಲಷ್ಕರ್-ಎ-ತೈಬಾ ಸಂಘಟನೆ ಉಗ್ರರ ಶಿಬಿರ ನಡೆಸುತ್ತಿತ್ತು. ಮುಂಬೈ ದಾಳಿ ನಡೆಸಿದ ಉಗ್ರರಿಗೆ ಇಲ್ಲಿ ತರಬೇತಿ ನೀಡಲಾಗಿತ್ತು.
ಗುಲ್ಪುರ್ : ಗಡಿ ನಿಯಂತ್ರಣ ರೇಖೆ ಪೂಂಚ್-ರಾಜೌರಿಯಿಂದ 35 ಕಿ.ಮೀ ದೂರದಲ್ಲಿದೆ. ಪೂಂಚ್ನಲ್ಲಿ ಏಪ್ರಿಲ್ 20, 2023 ರಂದು ನಡೆದ ದಾಳಿ ಮತ್ತು ಜೂನ್ 24 ರಂದು ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಅಮಾಯಕ ಯಾತ್ರಿಕರ ಮೇಲೆ ಇಲ್ಲಿ ತರಬೇತಿ ಪಡೆದ ಉಗ್ರರು ದಾಳಿ ನಡೆಸಿದ್ದರು.
ಸವಾಯಿ: ಲಷ್ಕರ್ ಉಗ್ರರ ಕ್ಯಾಂಪ್ ಇದಾಗಿದ್ದು ಗಡಿ ನಿಯಂತ್ರಣ ರೇಖೆಯಿಂದ 30 ಕಿ.ಮೀ ದೂರದಲ್ಲಿದೆ. ಕಳೆದ ವರ್ಷ ಅಕ್ಟೋಬರ್ 20, 24 ರಂದು ಸೋನ್ಮಾರ್ಗ್, ಅಕ್ಟೋಬರ್ 24 ರಂದು ಗುಲ್ಮಾರ್ಗ್ ಮತ್ತು ಏಪ್ರಿಲ್ 22 ರಂದು ಪಹಲ್ಗಾಮ್ ಮೇಲೆ ದಾಳಿ ನಡೆಸಿದ ಉಗ್ರರು ಇಲ್ಲಿ ತರಬೇತಿ ಪಡೆದಿದ್ದರು.
ಬಹವಾಲ್ಪುರ್: ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಬಹವಾಲ್ಪುರ್ ಮೇಲೆ ದಾಳಿ ನಡೆದಿದೆ. ಇದು ಜೈಷ್ ಉಗ್ರ ಸಂಘಟನೆಯ ಪ್ರಧಾನ ಕಚೇರಿಯಾಗಿತ್ತು.
ಬಿಲಾಲ್: ಉಗ್ರ ಸಂಘಟನೆ ಜೈಷ್–ಎ–ಮೊಹಮದ್ ಲಾಂಚ್ ಪ್ಯಾಡ್ ಇದಾಗಿದ್ದು ಉಗ್ರರು ಇಲ್ಲಿ ಕೊನೆಯ ಹಂತದ ತರಬೇತಿ ಪಡೆದು ಭಾರತಕ್ಕೆ ನುಗ್ಗುತ್ತಿದ್ದರು.
ಕೋಟ್ಲಿ: ಗಡಿ ನಿಯಂತ್ರಣ ರೇಖೆಯಿಂದ 15 ಕಿ.ಮೀ ದೂರದಲ್ಲಿದೆ. ಲಷ್ಕರ್ ಉಗ್ರರ ಕ್ಯಾಂಪ್ ಇದಾಗಿದ್ದು 50 ಉಗ್ರರಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿತ್ತು
ಕೋಟ್ಲಿ: ಗಡಿ ನಿಯಂತ್ರಣ ರೇಖೆಯಿಂದ 15 ಕಿ.ಮೀ ದೂರದಲ್ಲಿದೆ. ಲಷ್ಕರ್ ಉಗ್ರರ ಕ್ಯಾಂಪ್ ಇದಾಗಿದ್ದು 50 ಉಗ್ರರಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿತ್ತು.
ಬರ್ನಾಲಾ: ಭಾರತ ಗಡಿಯಿಂದ 10 ಕಿ.ಮೀ ದೂರದಲ್ಲಿದೆ. ಇಲ್ಲೂ ಲಷ್ಕರ್ ಉಗ್ರರಿಗೆ ತರಬೇತಿ ನೀಡಲಾಗುತ್ತಿತ್ತು.
ಸರ್ಜಲ್: ಸಾಂಬಾ ಕಟುವಾ ಬಳಿ ಅಂತಾರಾಷ್ಟ್ರೀಯ ಗಡಿಯಿಂದ 8 ಕಿಲೋಮೀಟರ್ ದೂರದಲ್ಲಿ ಜೈಶ್ ಎ ಮೊಹಮದ್ ಕ್ಯಾಂಪ್.