ಬೆಂಗಳೂರು: ವಾಸವಿ ಜಯಂತಿ ಪ್ರಯುಕ್ತ ಶಾಸಕರು , ಕರ್ನಾಟಕ ವಿಧಾನ ಪರಿಷತ್ ಹಾಗು ಕರ್ನಾಟಕ ಆರ್ಯ ವೈಶ್ಯ ಮಹಾಮಂಡಳಿ ರಾಜ್ಯಾಧ್ಯಕ್ಷರಾದ ಟಿ. ಎ. ಶರವಣ ಅವರು ಬೆಂಗಳೂರು ನಗರದ ಹಲವೆಡೆ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ, ರಾಜ್ಯದ ಜನ ಸುಖ ನೆಮ್ಮದಿ ಮತ್ತು ಶಾಂತಿಯುತವಾಗಿ ಬದುಕಲು ಪ್ರಾರ್ಥಿಸಿದರು.
ಈ ವೇಳೆ ಇಂದು ನಡೆದ ‘ಆಪರೇಷನ್ ಸಿಂಧೂರ’ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ ದೇಶದ ಸೇನಾ ಪಡೆ ಪರಾಕ್ರಮ ಮೆರೆದಿದೆ.
ಆದ್ದರಿಂದ ಭಯೋತ್ಪಾದಕರನ್ನು ಮಟ್ಟಹಾಕುವ ಯುದ್ಧದಲ್ಲಿ ಭಾರತಕ್ಕೆ ಜಯ ಸಿಗಲಿ ಎಂದು ಪೂಜೆ ಸಲ್ಲಿಸಲಾಯಿತು ಹೇಳಿದ್ದಾರೆ.
ಇನ್ನೂ ಇಂದು ಜಸ್ಟ್ 23 ನಿಮಿಷದಲ್ಲಿ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ಏಕಕಾಲಕ್ಕೆ ಧ್ವಂಸ ಮಾಡಿರುವ ಆಪರೇಷನ್ ಸಿಂಧೂರ ಭಾರತೀಯರ ಮೈ ಜುಮ್ಮೆನ್ನುವಂತೆ ಮಾಡಿದೆ. ಕೇವಲ 23 ನಿಮಿಷಗಳಲ್ಲೇ ಪಾಕಿಸ್ತಾನದ ರಕ್ತಪಿಪಾಸುಗಳ ‘ಉಗ್ರ’ ನೆಲೆ ನಾಮಾವಶೇಷವಾಗಿವೆ.