ಗದಗ: ಪಾಕ್ ಉಗ್ರರ ವಿರುದ್ಧ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ನಡೆಸಿದೆ. ಮಾಹಿತಿಗಳ ಪ್ರಕಾರ 80ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ. ಬೆನ್ನಲ್ಲೇ ಭಾರತದಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಇದರ ಜೊತೆಗೆ ಗದಗನಲ್ಲಿ ಮಾಜಿ ಸೈನಿಕರ ಸಂಭ್ರಮ ಮನೆಮಾಡಿದ್ದು, ಮಾಜಿ ಸೈನಿಕರು ಸೇನಾ ಕಾರ್ಯಾಚರಣೆಯನ್ನು ಸಿಹಿ ಹಂಚುವ ಮೂಲಕ ಸಂಭ್ರಮಿಸುತ್ತಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಸೈನಿಕರು, ಉಗ್ರರ ನೆಲೆಗಳನ್ನು ನೆಲಸಮ ಮಾಡುವ ಕೆಲಸ ಭಾರತಸ ಸೇನೆ ಶುರುಮಾಡಿದ್ದು ಬಹಳ ಖುಷಿಯಾಗುತ್ತಿದೆ, ಪಾಪಿ ಪಾಕಿಸ್ತಾನದ ನೀಚ ಕೃತ್ಯಗಳಿಗೆ ಕಡಿವಾಣ ಹಾಕಲೇಬೇಕಿತ್ತು, ಭಾರತದ ಬಲಿಷ್ಠ ಸೇನೆಯನ್ನು ಎದುರು ಹಾಕಿಕೊಳ್ಳುವ ಕೆಲಸ ಮಾಡಿದೆ, ಹೇಡಿಗಳಿಗೆ ತಕ್ಕ ಶಾಸ್ತಿಯಾಗಲಿದೆ ಎಂದರು.
ಅದಲ್ಲದೆ ಎಷ್ಟೋ ಬಾರಿ ಯುದ್ದದಲ್ಲಿ ಪಾಕಿಸ್ತಾನವನ್ನ ಬಗ್ಗು ಬಡಿದಿದ್ದೇವೆ. ಭಾರತದ ಜೊತೆಗೆ ಯುದ್ಧ ಮಾಡಿದ್ರೆ ಅರ್ಧ ಪಾಕಿಸ್ತಾನ ಮುಳುಗುತ್ತೆ ಅನ್ನೋ ಭಯ ಇದೆ. ಭಾರತಮಾತೆ ಮೇಲೆ ಕಣ್ಣು ಹಾಕಿದವ್ರನ್ನ ಸುಮ್ಮೆ ಬಿಡಬಾರ್ದು ಎಂದು ಹೇಳಿದರು.