ಬೆಂಗಳೂರು: ಅಮಾಯಕ ಪ್ರವಾಸಿಗರ ಹತ್ಯೆಯ ಪ್ರತೀಕಾರವನ್ನು ಭಾರತೀಯ ಸೇನೆ ತೆಗೆದುಕೊಂಡಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಪಾಕಿಸ್ತಾನದ 9 ನೆಲೆಗಳನ್ನ ಟಾರ್ಗೆಟ್ ಮಾಡಿ 90ಕ್ಕೂ ಹೆಚ್ಚು ಉಗ್ರರನ್ನ ಭಾರತೀಯ ಸೇನೆ ಉಡಾಯಿಸಿದೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ಯಶಸ್ವಿ ಕಾರ್ಯಾಚರಣೆ ಮಾಡಿರುವ ಭಾರತೀಯ ಸೇನೆಗೆ ಇಡೀ ದೇಶದಾದ್ಯಂತ ಅಭಿನಂದಿಸಲಾಗುತ್ತಿದೆ.
ಪ್ರಧಾನಿ ನರೇಂದ್ರ ಮೋದಿ ಜಿ ಅವರ ನೇತೃತ್ವದಲ್ಲಿ ಭಾರತದ ಸೇನೆ, ನೌಕಾ ಪಡೆ ಹಾಗೂ ವಾಯು ಪಡೆ ಉಗ್ರರ ನೆಲೆಯ ಮೇಲೆ ದಾಳಿ ಮಾಡಿ ಪಹಲ್ಗಾಮ್ ನಲ್ಲಿ ನಡೆದ ಅಮಾಯಕ ಪ್ರವಾಸಿಗರ ಹತ್ಯೆಯ ಪ್ರತೀಕಾರ ತೆಗೆದುಕೊಂಡಿದೆ. ಇದು ಪ್ರಾರಂಭವಷ್ಟೇ. ಉಗ್ರ ಪೋಷಕ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸುತ್ತದೆ. ಸಮಸ್ತ ಭಾರತೀಯರ ಪರವಾಗಿ ಈ ದಾಳಿಯನ್ನು… https://t.co/fNalxofGbs
— Basanagouda R Patil (Yatnal) (@BasanagoudaBJP) May 7, 2025
ಇನ್ನೂ ಈ ವಿಚಾರವಾಗಿ ಎಕ್ಸ್ನಲ್ಲಿ ಪೋಸ್ಟ್ ಹಾಕಿಕೊಂಡಿರುವ ಅವರು, ಭಾರತೀಯ ಸೇನೆಯಿಂದ ನಡೆದ ಏರ್ಸ್ಟ್ರೈಕ್`ಆಪರೇಷನ್ ಸಿಂಧೂರ’ ಪ್ರತೀಕಾರದ ದಾಳಿಯನ್ನು ಸ್ವಾಗತಿಸಿದ್ದಾರೆ. ಪ್ರಧಾನಿ ಮೋದಿಯವರ (PM Modi) ನೇತೃತ್ವದಲ್ಲಿ ಭಾರತೀಯ ಸೇನೆ, ನೌಕಾ ಪಡೆ ಹಾಗೂ ವಾಯು ಪಡೆಗಳು ಉಗ್ರರ ನೆಲೆಯ ಮೇಲೆ ದಾಳಿ ನಡೆಸಿದೆ ಎಂದು ಉಲ್ಲೇಖಿಸಿದ್ದಾರೆ.
ಏ.22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್ನ ಬೈಸರನ್ ಕಣಿವೆಯಲ್ಲಿ ನಡೆದಿದ್ದ ಅಮಾಯಕ ಪ್ರವಾಸಿಗರ ಹತ್ಯೆಯ ಪ್ರತೀಕಾರವನ್ನು ಭಾರತೀಯ ಸೇನೆ ತೆಗೆದುಕೊಂಡಿದೆ. ಇದು ಪ್ರಾರಂಭವಷ್ಟೇ. ಉಗ್ರ ಪೋಷಕ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸುತ್ತದೆ. ಸಮಸ್ತ ಭಾರತೀಯರ ಪರವಾಗಿ ಈ ದಾಳಿಯನ್ನು ಸ್ವಾಗತಿಸುತ್ತೇನೆ. ಸೇನೆ ಮತ್ತು ಸರ್ಕಾರದ ಜೊತೆ ನಾವೆಲ್ಲರೂ ನಿಲ್ಲೋಣ. ಭಾರತ ಮಾತೆಗೆ ಜಯವಾಗಲಿ, ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.