ನವದೆಹಲಿ: ಮಂಗಳವಾರ ರಾತ್ರಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿತ್ತು. ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ಭಾರತ ವೈಮಾನಿಕ ದಾಳಿಯ ಮೂಲಕ ಧ್ವಂಸಗೊಳಿಸಿತ್ತು. ಇದೀಗ ಪಾಕಿಸ್ತಾನ ಭಾರತದ ಮೇಲೆ ಪ್ರಯೋಗಿಸಿದ ಕ್ಷಿಪಣಿಯನ್ನು ಅರ್ಧದಲ್ಲೇ ಧ್ವಂಸ ಮಾಡಲಾಗಿದೆ.
ಹೌದು. ಪಾಕ್ ರಾತ್ರಿ 1:20 ರಿಂದ 1:30 ರೊಳಗಡೆ ಪಂಜಾಬ್‌ನ ಅಮೃತಸರವನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿತ್ತು. ಹೀಗಿದ್ದರೂ ಭಾರತದಲ್ಲಿರುವ ಮುಂದುವರಿದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ತಕ್ಷಣವೇ ಪ್ರತಿಕ್ರಿಯಿಸಿ ಪಾಕಿಸ್ತಾನದ ಕ್ಷಿಪಣಿಯನ್ನು ಆಕಾಶದಲ್ಲಿಯೇ ಉಡೀಸ್ ಮಾಡಿದೆ.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರಲು ನೀರಿಗೆ ಒಂದು ಚಿಟಿಕೆ ಈ ಪುಡಿ ಹಾಕಿ ಕುಡಿಯಿರಿ.. ಆಮೇಲೆ ರಿಸಲ್ಟ್ ನೋಡಿ!
ಕ್ಷಿಪಣಿಯ ಮೂರು ತುಂಡುಗಳಾಗಿ ಛಿದ್ರಗೊಂಡಿದ್ದು ಅವಶೇಷಗಳು ಗ್ರಾಮದಲ್ಲಿ ಬಿದ್ದಿದೆ. ಕೆಲವು ಭಾಗಗಳು ಛಾವಣಿಗಳ ಮೇಲೆ ಬಿದ್ದರೆ ಹತ್ತಿರ ಹೊಲದಲ್ಲಿ 6 ಅಡಿ ಉದ್ದದ ದೊಡ್ಡ ಭಾಗ ಪತ್ತೆಯಾಗಿದ್ದು ಸಣ್ಣ ಕುಳಿ ನಿರ್ಮಾಣವಾಗಿದೆ.
ಆಕಾಶದಲ್ಲಿ ಧ್ವಂಸ ಮಾಡಿದ್ದರಿಂದ ಹಳ್ಳಿಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ದುರಂತವನ್ನು ತಡೆದಿದೆ. ಪಾಕ್ ಸೇನೆ ಕ್ಷಿಪಣಿ ಹಾರಿಸಿದ್ದನ್ನು ಪಂಜಾಬ್ ಪೊಲೀಸರು ಅಧಿಕೃತವಾಗಿ ದೃಢಪಡಿಸಿದ್ದಾರೆ. ಪಾಕಿಸ್ತಾನ ಹಾರಿಸಿದ್ದು PL-15E ಚೀನಾ ನಿರ್ಮಿತ ಕ್ಷಿಪಣಿಯಾಗಿದ್ದು ಯುದ್ಧ ವಿಮಾನದಿಂದ ಹಾರಿಸಿರುವ ಬಗ್ಗೆ ಪ್ರಾಥಮಿಕ ಮಾಹಿತಿ ಲಭ್ಯವಾಗುತ್ತಿದೆ.