ಚಂಡೀಗಢ:- ಚಿಲ್ಲರೆ ಕಾಸಿಗಾಗಿ ಪಾಕ್ ಐಎಸ್‌ಐಗೆ ಭಾರತೀಯ ಮಿಲಿಟರಿ ಮಾಹಿತಿ ಲೀಕ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪಂಜಾಬ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು ಸೇರಿ ಕರ್ನಾಟಕದ ಇಲ್ಲೆಲ್ಲಾ ನಾಳೆಯಿಂದ ಒಂದು ವಾರ ಭಾರೀ ಮಳೆ!
ಶೇರ್ ಮಸಿಹ್ ಮತ್ತು ಸೂರಜ್ ಮಸಿಹ್ ಬಂಧಿತರು. ಇವರಿಬ್ಬರು ಪಂಜಾಬ್‌ನ ಅಮೃತಸರದಲ್ಲಿರುವ ಸೇನಾ ಸೂಕ್ಷ್ಮ ವಲಯ ಮತ್ತು ವಾಯುನೆಲೆಯ ಸೂಕ್ಷ್ಮ ಮಾಹಿತಿಗಳು ಮತ್ತು ಫೋಟೋಗಳನ್ನು ಪಾಕಿಸ್ತಾನದ ಐಎಸ್‌ಐಗೆ ಸೋರಿಕೆ ಮಾಡುತ್ತಿದ್ದರು.
ಈ ಕುರಿತು ಮಾಹಿತಿ ನೀಡಿರುವ ಅಮೃತಸರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಣೀಂದರ್ ಸಿಂಗ್, ಭಾರತದ ವಾಯುನೆಲೆ ಮತ್ತು ಸೂಕ್ಷ್ಮ ಪ್ರದೇಶಗಳ ಬಗ್ಗೆ ಪಾಕ್‌ನ ಐಎಸ್‌ಐಗೆ ಮಾಹಿತಿ ಸೋರಿಕೆ ಮಾಡುತ್ತಿದ್ದ ಆರೋಪದ ಮೇಲೆ ಪಾಲಕ್ ಶೇರ್ ಮಸಿಹ್ ಮತ್ತು ಸೂರಜ್ ಮಸಿಹ್ ಇಬ್ಬರನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಹರ್‌ಪ್ರೀತ್ ಎಂಬ ಸಹವರ್ತಿ ಇವರಿಬ್ಬರನ್ನು ಪಾಕ್‌ನ ಐಎಸ್‌ಐ ಜೊತೆಗೆ ಲಿಂಕ್ ಮಾಡಿಸಿದ್ದಾನೆ. ಆತನ ವಿರುದ್ಧ ಈಗಾಗಲೇ ಎನ್‌ಡಿಪಿಎಸ್ ಪ್ರಕರಣ ದಾಖಲಾಗಿದೆ ಎಂದು ವಿವರಿಸಿದ್ದಾರೆ.
ಅಲ್ಲದೇ ಆರೋಪಿಗಳಿಗೆ ಸಣ್ಣ ಮಾಹಿತಿಗಾಗಿ 5,000 ರೂ. ಮತ್ತು ಮಿಲಿಟರಿ ಚಲನವಲನಗಳ ಬಗ್ಗೆ ಸೂಕ್ಷ್ಮ ಮಾಹಿತಿ ನೀಡಿದ್ರೆ 10,000 ರೂ.ಗಳನ್ನ ನೀಡಲಾಗುತ್ತಿತ್ತು. ಹಾಗಾಗಿ ಅಧಿಕೃತ ರಹಸ್ಯ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದರು.