Close Menu
Ain Live News
    Facebook X (Twitter) Instagram YouTube
    Friday, June 27
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Aditya L1: ಸೂರ್ಯನ ಚಿತ್ರಗಳನ್ನು ಸೆರೆ ಹಿಡಿದ ಭಾರತದ ಆದಿತ್ಯ-ಎಲ್1 ಮಿಷನ್..!

    By AIN AuthorDecember 10, 2023
    Share
    Facebook Twitter LinkedIn Pinterest Email
    Demo

    ಸೂರ್ಯನನ್ನು ಅಧ್ಯಯನ ಮಾಡುವ ಭಾರತದ ಮೊದಲ ಬಾಹ್ಯಾಕಾಶ-ಆಧಾರಿತ ಮಿಷನ್ ಆದಿತ್ಯ-ಎಲ್ 1 (Aditya L1) ಬಾಹ್ಯಾಕಾಶ ನೌಕೆಯು ಸೂರ್ಯನ ಪೂರ್ಣ ಚಿತ್ರಣವನ್ನು ಸೆರೆಹಿಡಿದಿದೆ. ಆದಿತ್ಯ ಎಲ್‌-1 ಬಾಹ್ಯಾಕಾಶ ನೌಕೆಯಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (ಸೋಲಾರ್ ಅಲ್ಟ್ರಾ ವಯೊಲೆಟ್‌ ಇಮೇಜ್‌ ಟೆಲಿಸ್ಕೋಪ್‌- SUIT) ಸೂರ್ಯನ ಡಿಸ್ಕ್‌ನ ಆರಂಭಿಕ ಸಂಪೂರ್ಣ ಚಿತ್ರಗಳನ್ನು ಸೆರೆಹಿಡಿಯುವ ಶ್ಲಾಘನೀಯ ಸಾಧನೆಯನ್ನು ಮಾಡಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಈ ಮಾಹಿತಿಯನ್ನು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

    Aditya-L1 Mission:
    The SUIT payload captures full-disk images of the Sun in near ultraviolet wavelengths

    The images include the first-ever full-disk representations of the Sun in wavelengths ranging from 200 to 400 nm.

    They provide pioneering insights into the intricate details… pic.twitter.com/YBAYJ3YkUy

    — ISRO (@isro) December 8, 2023

    ಸೂರ್ಯನನ್ನು ನೇರಳಾತೀತ ವರ್ಣಪಟಲದೊಳಗೆ ವೀಕ್ಷಿಸಲು ವಿನ್ಯಾಸಗೊಳಿಸಲಾದ ಮಹತ್ವದ ಸಾಧನವಾಗಿರುವ SUIT ಪೇಲೋಡ್ ಅನ್ನು ಕಳೆದ ತಿಂಗಳು ನವೆಂಬರ್ 20 ರಂದು ಸಕ್ರಿಯಗೊಳಿಸಲಾಗಿದೆ. ಇದು ಸೂರ್ಯನ ಕ್ರೋಮೋಸ್ಪಿಯರ್ ಮತ್ತು ಪರಿವರ್ತನೆಯ ಪ್ರದೇಶದ ಪರೀಕ್ಷೆಯಲ್ಲಿ ಸಹಾಯ ಮಾಡುತ್ತದೆ.

    ಸೂರ್ಯಶಿಕಾರಿಗೆ ಹೊರಟಿರುವ ಆದಿತ್ಯ-ಎಲ್1 ಮಿಷನ್ ಮೂಲಕ ಸೂರ್ಯನ ಮೊದಲ ಪೂರ್ಣ-ಡಿಸ್ಕ್ ಚಿತ್ರಗಳನ್ನು ಸೆರೆಹಿಡಿಯಲಾಗಿದೆ ಎಂದು ಇಸ್ರೋ ತಿಳಿಸಿದೆ. ಫೋಟೋಗಳು – ಸಮೀಪದ ನೇರಳಾತೀತ ತರಂಗಾಂತರಗಳಲ್ಲಿ – ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಸಂಕೀರ್ಣ ವಿವರಗಳಿಗೆ ಪ್ರವರ್ತಕ ಒಳನೋಟಗಳನ್ನು ಒದಗಿಸುತ್ತವೆ ಎಂದು ಇಸ್ರೋ ಎಕ್ಸ್‌ ಖಾತೆಯಲ್ಲಿ ತಿಳಿಸಿದೆ.

    ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯಲ್ಲಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ ಅಥವಾ SUIT ಉಪಕರಣವು 200-400 nm (ನ್ಯಾನೋಮೀಟರ್) ತರಂಗಾಂತರ ವ್ಯಾಪ್ತಿಯಲ್ಲಿ ಚಿತ್ರಗಳನ್ನು ಸೆರೆಹಿಡಿದಿದೆ. ವಿವಿಧ ವೈಜ್ಞಾನಿಕ ಶೋಧಕಗಳನ್ನು ಬಳಸಿಕೊಂಡು ಈ ತರಂಗಾಂತರ ವ್ಯಾಪ್ತಿಯಲ್ಲಿ ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಚಿತ್ರಗಳನ್ನು SUIT ಸೆರೆಹಿಡಿಯುತ್ತದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.

    Demo
    Share. Facebook Twitter LinkedIn Email WhatsApp

    Related Posts

    Bomb Threat: ಏರ್ ಇಂಡಿಯಾ ವಿಮಾನಕ್ಕೆ ಟಿಶ್ಯೂ ಪೇಪರ್ ನಲ್ಲಿ ‘ಬಾಂಬ್’ ಬೆದರಿಕೆ..! ಕೆಲಹೊತ್ತು ಭೀತಿ

    June 27, 2025

    ಇನ್ಮುಂದೆ ಭಾರತದಲ್ಲಿ ಈ ಕಂಪನಿಯ ಫ್ರಿಡ್ಜ್, ವಾಷಿಂಗ್ ಮಿಷನ್ ಬ್ಯಾನ್..!

    June 27, 2025

    Donald Trump: ಭಾರತದೊಂದಿಗೆ ದೊಡ್ಡ ಡೀಲ್: ವ್ಯಾಪಾರ ಒಪ್ಪಂದದ ಬಗ್ಗೆ ಟ್ರಂಪ್ ಸುಳಿವು

    June 27, 2025

    UPI ಬಳಕೆದಾರರಿಗೆ ಗಮನಿಸಿ: ಜುಲೈ 15 ರಿಂದ ಜಾರಿಗೆ ಬರಲಿದೆ ಹೊಸ ನಿಯಮಗಳು!

    June 27, 2025

    Guarantee Scheme: 3 ತಿಂಗಳಿ0ದ ಬರದ ಗೃಹಲಕ್ಷ್ಮೀ ಹಣ: ಕಂಗಾಲಾದ ಮಹಿಳೆಯರು!

    June 26, 2025

    Shubhanshu Shukla: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಿದ ಶುಭಾಂಶು ಶುಕ್ಲಾ..!

    June 26, 2025

    Shubhanshu Shukla: ನಡೆಯಲು ಕಲಿಯುತ್ತಿರುವ ಮಗುವಿನಂತೆ.. ಬಾಹ್ಯಾಕಾಶದಲ್ಲಿರುವ ಶುಭಾಂಶು ಶುಕ್ಲಾ ಕಳುಹಿಸಿದ ಮೊದಲ ಸಂದೇಶ!

    June 26, 2025

    Indian railways: RAC, ವೇಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ಗುಡ್ ನ್ಯೂಸ್: ರೈಲ್ವೆ ಇಲಾಖೆಯಿಂದ ಭಾರೀ ಬದಲಾವಣೆ

    June 26, 2025

    ಬಳಸದ ವಿದ್ಯುತ್​ಗೆ ಗ್ರಾಹಕರು ತೆರಿಗೆ ಕಟ್ಟಬೇಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು!

    June 26, 2025

    Home Loan: ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ಬೇಕೇ..? ಹಾಗಾದ್ರೆ ಈ ಬ್ಯಾಂಕ್’ಗಳ ಆಫರ್ ಬಗ್ಗೆ ತಿಳಿಯಿರಿ

    June 26, 2025

    ಮೊಬೈಲ್ ಬ್ಯಾಟರಿ ಬೇಗ ಖಾಲಿಯಾಗುತ್ತದೆಯೇ?: ಹಾಗಿದ್ರೆ ಈ ಸಲಹೆ ಅನುಸರಿಸಿ!

    June 25, 2025

    Shubhanshu Shukla: ಬಾಹ್ಯಾಕಾಶ ನೌಕೆಗೆ ಹೋಗುವ ಮುನ್ನ ತನ್ನ ನೆಚ್ಚಿನ ಹಾಡನ್ನು ಕೇಳಿದ ಸುಭಾಂಶು ಶುಕ್ಲಾ..!

    June 25, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.