ಇಂದ್ರಜಿತ್ ಲಂಕೇಶ್ ನಿರ್ಮಾಣ ಹಾಗೂ ನಿರ್ದೇಶನದಲ್ಲಿ, ಸಮರ್ಜಿತ್ ಲಂಕೇಶ್ ನಾಯಕನಾಗಿ ನಟಿಸಿರುವ “ಗೌರಿ” ಸಿನಿಮಾ ಕಳೆದವರ್ಷ ತೆರೆ ಕಂಡು ಜನಪ್ರಿಯವಾಗಿತ್ತು ಹಾಗೂ ವಿಮರ್ಶಕರ ಮೆಚ್ಚುಗೆಗೂ ಪಾತ್ರವಾಗಿತ್ತು. ಯುವಜನತೆಯಂತೂ ಸಮರ್ಜಿತ್ ಅಭಿನಯಕ್ಕೆ ಫಿದಾ ಆಗಿದ್ದರು. ಆನಂತರ ಈ ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾಗಿತ್ತು. ಅಲ್ಲೂ ಸಹ ಈ ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ..
ಅಮೇಜಾನ್ ಪ್ರೈಮ್ ನಲ್ಲಿ ಬಿಡುಗಡೆಯದಾಗಿನಿಂದ ಹಿಡಿದು ಈವರೆಗೂ ಎರಡುವರೆ ಲಕ್ಷ ಗಂಟೆಗಳ ಕಾಲ ಈ ಚಿತ್ರ ವೀಕ್ಷಣೆಯಾಗಿದೆ. ಅಧಿಕ ಸಂಖ್ಯೆಯಲ್ಲಿ ಜನರು ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ಸಮರ್ಜಿತ್ ಲಂಕೇಶ್ ಅವರಿಗೆ ಕನ್ನಡ ಸೇರಿದಂತೆ ಅನೇಕ ಭಾಷೆಗಳಿಂದ ನಟಿಸಲು ಅವಕಾಶಗಳು ಬರುತ್ತಿದೆ. ನಾಯಕನಾಗಲೂ ಸಮರ್ಜಿತ್ ಪಟ್ಟ ಶ್ರಮಕ್ಕೆ ಪ್ರತಿಫಲ ದೊರಕುತ್ತಿದೆ.
ಬಾಲಿವುಡ್‌ಗೆ ಸಮರ್ಜಿತ್?
ಸಮರ್ಜಿತ್ ಸ್ಯಾಂಡಲ್ ವುಡ್ ಹೃತಿಕ್ ರೋಷನ್ ಎಂಬ ಬೋರ್ಡ್ ಬೆದ್ದಿದೆ. ಮೊದಲ ಚಿತ್ರದಲ್ಲಿಯೂ ಒಳ್ಳೆ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಸಮರ್ಜಿತ್ ಲಂಕೇಶ್ ಡ್ಯಾನ್ಸ್, ಲುಕ್, ಮ್ಯಾನರಿಸಂ ಎಲ್ಲರಿಗೂ ಇಷ್ಟವಾಗಿದೆ. ಅದ್ಭುತ ಪರ್ಫಾಮೆನ್ಸ್‌ನಿಂದ ಸಮರ್ಜಿತ್ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ ಎಂಬ ಸುದ್ದಿ ಬಹಳ ದಿನಗಳಿಂದ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲಿಯೂ ಚರ್ಚೆಯಲ್ಲಿದೆ.
ಕರಣ್ ಜೋಹರ್ ಒಡೆತನದ ಧರ್ಮಾ ಪ್ರೊಡಕ್ಷನ್ಸ್ ಸಮರ್ಜಿತ್‌ಗೆ ಸಿನಿಮಾ ಮಾಡಲು ಮುಂದಾಗಿದ್ದಾರಂತೆ, ಧರ್ಮ ಪ್ರೊಡಕ್ಷನ್ ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ಹೀಗಾಗಿ ಬಾಲಿವುಡ್‌ಗೆ ಸಮರ್ಜಿತ್ ಲಂಕೇಶ್ ಕಾಲಿಡುವುದು ಬಹುತೇಕ ಖಚಿತವಂತೆ. ಸ್ಟಾರ್ ಕಿಡ್‌ಗಳನ್ನು ಯಶಸ್ವಿಯಾಗಿ ಪರಿಚಯಿಸಿರುವ ಕರಣ್ ಜೊಹರ್ ಸಂಸ್ಥೆ ಜೊತೆ ಸಮರ್ಜಿತ್ ಈಗಾಗಗಲೇ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಒಂದ್ಕಡೆ ಕರಣ್ ಜೋಹರ್ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್, ಇನ್ನೊಂದು ಕಡೆ ದಕ್ಷಿಣ ಭಾರತದ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್ ಸಮರ್ಜಿತ್‌ಗೆ ಸಿನಿಮಾ ಮಾಡುವುದಕ್ಕೆ ಮುಂದೆ ಬಂದಿದೆ ಎಂಬ ಮಾಹಿತಿ ಹರಿದಾಡ್ತಿದೆ.