ಕನ್ನಡ ಚಿತ್ರರಂಗ ಕಂಪ್ಲೀಟ್ ಡಲ್ ಆಗಿದೆ. ಹೀಗೆ ಬಂದ್ ಸಿನಿಮಾಗಳು ಹಂಗೆ ಹೋಗ್ತಿವೆ. ಸ್ಟಾರ್ಸ್ ಸಿನಿಮಾಗಳು ಇಲ್ಲೇ ಸ್ಯಾಂಡಲ್‌ವುಡ್ ಸೊರಗಿದೆ. ಬೆಳ್ಳಿಪರದೆಯಲ್ಲಿ ಕಳೆ ತುಂಬಬೇಕು ಅಂದ್ರೆ ದೊಡ್ಡವರು ಅಖಾಡಕ್ಕೆ ಇಳಿಯಬೇಕು. ಫಸ್ಟ್ ಫ್ ಮುಗಿಯತ್ತಾ ಬರ್ತಿದೆ. ಹೀಗಿದ್ರೂ ಕನ್ನಡದಲ್ಲಿ ಈವರೆಗೂ ಸೂಪರ್ ಹಿಟ್ ಸಿನಿಮಾ ಕಂಡೇ ಇಲ್ಲ. ಸಕ್ಸಸ್ ಅನ್ನೋದು ಮರಿಚಿಕೆಯಾಗಿದೆ. ಆದ್ರೆ ಸೆಕೆಂಡ್ ಆಫ್‌ನಲ್ಲಿ ಧೂಳ್ ಎಬ್ಬಿಸೋದಿಕ್ಕೆ ಸ್ಯಾಂಡಲ್ ವುಡ್ ಸಜ್ಜಾಗಿದೆ.
ಕಾಂತಾರ ಪ್ರೀಕ್ವೆಲ್ ಅಕ್ಟೋಬರ್ ಗೆ ತೆರೆಗೆ ಬರ್ತಿದೆ. ಅದಕ್ಕೂ ಮುನ್ನ ಶಿವಣ್ಣ-ಉಪ್ಪಿ-ರಾಜ್ ಬಿ ಶೆಟ್ಟಿ ನಟನೆಯ 45 ಸಿನಿಮಾ ಆಗಸ್ಟ್‌ನಲ್ಲಿ ಬಿಡುಗಡೆಯಾಗಲಿದೆ. ಧ್ರುವ ಪ್ರೇಮ್ ಕಾಂಬೋದ ಕೆಡಿ ಕೂಡ ಈ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಹಬ್ಬಕ್ಕೂ ಮುನ್ನ ಇಂಡಸ್ಟ್ರೀಯಲ್ಲಿ ಮುಹೂರ್ತದ ಸಂಭ್ರಮಗಳು ಕಳೆಕಟ್ಟುತ್ತಿದೆ. ನಅಲೆ ಅಕ್ಷಯ ತೃತೀಯದ ವಿಶೇಷವಾಗಿ ಯುವರಾಜ್‌ಕುಮಾರ್ ಹಾಗೂ ಸುಕ್ಕ ಸೂರಿಯ ಹೊಸ ಸಿನಿಮಾ ಸೆಟ್ಟೇರಲಿದೆ.
ಪಿಆರ್‌ಕೆ-ಕೆಆರ್‌ಜಿ-ಜಯಣ್ಣ ಫಿಲ್ಮಂ ಬ್ಯಾನರ್‌ನಡಿ ಸೂರಿ ಸಾರಥ್ಯದಲ್ಲಿ ಯುವ ನಾಯಕನಾಗಿ ಹಾಗೂ ದುನಿಯಾ ವಿಜಯ್ ಪುತ್ರಿ ರಿತನ್ಯಾ ನಾಯಕಿಯಾಗಿ ನಟಿಸಲಿದ್ದಾರೆ. ಅಶ್ವಿನಿ ಪುನೀತ್ ರಾಜ್ ಕುಮಾರ್, ಕಾರ್ತಿಕ್ ಗೌಡ, ಯೋಗಿ ಜಿ ರಾಮ್ ಹಾಗೂ ಜಯಣ್ಣ-ಭೋಗೇಂದ್ರ ಈ ಚಿತ್ರ ನಿರ್ಮಾಣ ಮಾಡಲಿದ್ದಾರೆ.
ಮೇ2ಕ್ಕೆ ಶಿವಣ್ಣ “A for ಆನಂದ್” ಮುಹೂರ್ತ!
ಶಿವರಾಜ್ ಕುಮಾರ್ ಭೋದಕನಾಗಿ ನಟಿಸಲಿರುವ A for ಆನಂದ್” ಚಿತ್ರದ ಮುಹೂರ್ತ May 02 ಶುಕ್ರವಾರದಂದು “ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ” ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ. ನಿರ್ದೇಶಕ ಶ್ರೀನಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಶಿವಣ್ಣನಿಗೆ ಅವರು ಘೋಸ್ಟ್ ಸಿನಿಮಾ ಮಾಡಿದ್ದರು. ಶಿವಣ್ಣನ ಹೋಮ್ ಬ್ಯಾನರ್ ಗೀತಾ ಪಿಕ್ಚರ್ಸ್ ನಡಿ “A for ಆನಂದ್” ನಿರ್ಮಾಣವಾಗಲಿದೆ.
https://x.com/lordmgsrinivas/status/1917209327699656920
ಮೇ 7ಕ್ಕೆ ಧೀರೇನ್ ಹೊಸ ಚಿತ್ರದ ಟೈಟಲ್ ಲಾಂಚ್!
ಗೀತಾ ಪಿಕ್ಚರ್ಸ್ ನಡಿ ಮೂಡಿ ಬರ್ತಿರುವ ನಾಲ್ಕನೇ ಸಿನಿಮಾದಲ್ಲಿ ಧೀರೇನ್ ರಾಮ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದು, ಶಾಖಾಹಾರಿ ನಿರ್ದೇಶಕ ಸಂದೀಪ್ ಸುಕಂದ್ ನಿರ್ದೇಶನದಲ್ಲಿ ಈ ಚಿತ್ರ ತಯಾರಾಗುತ್ತಿದೆ. ಮೇ 7ಕ್ಕೆ ಈ ಚಿತ್ರದ ಟೈಟಲ್ ರಿವೀಲ್ ಆಗಲಿದ್ದು, ಅದೇ ದಿನ ಚಿತ್ರತಂಡ ಮೂಹೂರ್ತ ಮಾಡೋದಿಕ್ಕೂ ಯೋಜನೆ ಹಾಕಿಕೊಂಡಿದೆ.