ಬೆಂಗಳೂರು: ಪಹಲ್ಗಾಮ್ ನಲ್ಲಿ ೨೬ ಭಾರತೀಯರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ನಾನು ಬಾಂಬ್ ಕಟ್ಟಿಕೊಂಡು ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ರೆಡಿ ಎಂದಿದ್ದ ಸಚಿವ ಜಮೀರ್ ಅಹಮದ್ ಖಾನ್ ಗೆ ವಿಪಕ್ಷ ನಾಯಕ ಆರ್ ಅಶೋಕ್ ಟಕ್ಕರ್ ನೀಡಿದ್ದಾರೆ.
ಜಮೀರ್ ಅಹಮದ್ ಖಾನ್ ಪಾಕಿಸ್ತಾನದ ಬದಲು, ಕಾಂಗ್ರೆಸ್ ನ ಐಟಿ ಸೆಲ್ ಗೆ ಬಾಂಬ್ ಕಟ್ಟಿಕೊಂಡು ಹೋಗಲಿ ಎಂದು ಲೇವಡಿ ಮಾಡಿದ್ದಾರೆ.
ಪಾಕಿಸ್ತಾನಕ್ಕೆ ಜಮ್ಮೀರ್ ಅಹಮದ್ ಬಾಂಬ್ ಕಟ್ಟಿಕೊಂಡು, ರಾಕೆಟ್ ಕಟ್ಟಿಕೊಂಡು ಹೋದ್ರು ಅವರನ್ನು ಅಲ್ಲಿ ಏನು ಮಾಡಲ್ಲ. ಜಮೀರ್ ಮೊದಲು ಭಾರತದಲ್ಲಿರುವ ಪಾಕಿಸ್ತಾನಿಗಳಿಗೆ ಹೊಡೆಯಲಿ. ಅದಕ್ಕೂ ಮೊದಲು ಕಾಂಗ್ರೆಸ್ ಆಫೀಸ್ ನ ಐಟಿ ಸೆಲ್ ಗೆ ಬಾಂಬ್ ಕಟ್ಟಿಕೊಂಡು ಹೋಗಲಿ ಎಂದು ಶಾಂತಿಮಂತ್ರ ಜಪಿಸಿದ ಕಾಂಗ್ರೆಸ್ ಗೆ ಟ್ವೀಟ್ ಮಾಡಿದ್ದಾರೆ.
ಪಾಕ್ ಉಗ್ರ ತಾಣಗಳ ಮೇಲೆ ಸಿಂಧೂರ ದಾಳಿ: ಡಿಸಿಎಂ ಡಿ ಕೆ ಶಿವಕುಮಾರ್ ಮುಕ್ತಕಂಠದ ಶ್ಲಾಘನೆ
ಶಾಂತಿಮಂತ್ರದ ಟ್ವೀಟ್ ಮಾಡಿರೋದು ಕಾಂಗ್ರೆಸ್ ಗೆ ಶೋಭೆ ತರುವುದಿಲ್ಲ. ಎಐಸಿಸಿ ಅಧ್ಯಕ್ಷ ಖರ್ಗೆ ಇವರ ಮೇಲೆ ಕ್ರಮ ಕೈಗೊಳ್ಳಲಿ. ಕಾಂಗ್ರೆಸ್ಸಿನ ಒರಿಜಿನಲ್ ಫೇಸ್ ಜನರಿಗೆ ಗೊತ್ತಾಗಬೇಕು ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.