ಬೆಂಗಳೂರು: ಕೇಂದ್ರ ಸರ್ಕಾರದ ಕೆಲವೊಂದು ಕ್ರಮಗಳ ಭಾಗವಾಗಿ ಕರ್ನಾಟಕದಲ್ಲಿರುವ ಪಾಕಿಸ್ತಾನಿಗಳನ್ನು ವಾಪಸ್ ಕಲುಹಿಸಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಧಿಕೃತವಾಗಿ ಇರುವವರು, ಅನಧಿಕೃತವಾಗಿ ಇರುವವರ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ.
ಈ ಹಿಂದೆ ಅಧಿವೇಶನದಲ್ಲಿ ಪ್ರಶ್ನೆ ಕೇಳಿದಾಗ ಉತ್ತರ ನೀಡಿದ್ದೇವೆ. ಅದರಲ್ಲಿ ಪಾಕಿಸ್ತಾನಿ ಪ್ರಜೆಗಳು ಯಾರಿದ್ದಾರೆ, ಅಧಿಕೃತವಾಗಿ ಯಾರಿದ್ದಾರೆ ಎಂದು ತಿಳಿದು ಅವರನ್ನೆಲ್ಲ ವಾಪಸ್ ಕಳುಹಿಸಲೇಬೇಕಾಗುತ್ತದೆ” ಎಂದರು.
Mango Benefits: ನಿಮಗೆ ಗೊತ್ತೆ..? ತೂಕ ಹೆಚ್ಚಾಗುವುದನ್ನು ತಡೆಯುತ್ತವಂತೆ ಮಾವಿನ ಹಣ್ಣು!
“ಕೇಂದ್ರ ಸರ್ಕಾರ ವಾಪಸ್ ಕಳಿಸುವ ತೀರ್ಮಾನ ತೆಗೆದುಕೊಂಡಿದೆ. ಅನಧಿಕೃತವಾಗಿ ಇರುವುದರ ಬಗ್ಗೆ ಪರಿಶೀಲಿಸಬೇಕು. ಅಧಿಕೃತವಾಗಿ ಇರೋರನ್ನು ಕಳಿಸುವುದಕ್ಕೆ ತಕರಾರಿಲ್ಲ. ಈಗಾಗಲೇ ವೀಸಾ ಕ್ಯಾನ್ಸಲೇಷನ್ ಮಾಡಲಾಗಿದೆ, ವಾಪಸ್ ಹೋಗಿ ಅಂತ ಹೇಳಿ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ವಾಪಸ್ ಹೋಗಿ ಅಂತ ಹೇಳೋದಷ್ಟೇ ನಮ್ಮ ಕೆಲಸ. ಅನಧಿಕೃತವಾಗಿ ಇಲ್ಲಿ ಇರುವವರನ್ನು ಪೊಲೀಸರು ಹುಡುಕ್ತಿದ್ದಾರೆ” ಎಂದು ಹೇಳಿದರು.