ಹುಬ್ಬಳ್ಳಿ:- ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಹುಬ್ಬಳ್ಳಿಯಲ್ಲಿಯೂ ಯೋಗ ಆಚರಣೆ ಮಾಡಲಾಗಿದೆ. ಹುಬ್ಬಳ್ಳಿ ಮಂದಿ ಯೋಗದಲ್ಲಿ ಮಿಂದೆದ್ದಾರೆ.
ಹುಬ್ಬಳ್ಳಿಯ ವಿವಿಧೆಡೆ 11 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹುಬ್ಬಳ್ಳಿಯ ನೃಪತುಂಗ ಬೆಟ್ಟದಲ್ಲಿ ಆಚರಣೆ ಮಾಡಲಾಗಿದೆ. ಶಾಸಕ ಮಹೇಶ ಟೆಂಗಿನಕಾಯಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದಾರೆ. ಒಂದು ಭೂಮಿ ಒಂದೇ ಆರೋಗ್ಯಕ್ಕಾಗಿ ಯೋಗ ವ್ಯಾಖ್ಯದಡಿ ಯೋಗ ದಿನಾಚರಣೆ ಮಾಡಲಾಗುತ್ತಿದೆ.
ಯೋಗದ ವಿವಿಧ ಆಯಾಮವನ್ನು ಇದೇ ವೇಳೆ ಜನತೆ ಮಾಡಿದ್ದಾರೆ.