ಮಂಡ್ಯ:- ಸಾಮಾಜಿಕ ಜಾಲತಾಣ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಬಳಸುತ್ತಾರೆ. ಗೊತ್ತು ಗುರಿ ಇಲ್ಲದವರನ್ನು ಆಪ್ತರಾಗುವಂತೆ ಮಾಡುವ ಇನ್ಸ್ಟಾ, ಫೇಸ್ಬುಕ್ ಇವುಗಳನ್ನು ಯುವಜನತೆ ಹೆಚ್ಚು ಉಪಯೋಗಿಸುತ್ತಾರೆ. ಅದರಂತೆ ಇಲ್ಲೋರ್ವ ಗೃಹಿಣಿ, ಇನ್ಸ್ಟಾದಲ್ಲಿ ಪರಿಚಯ ವ್ಯಕ್ತಿ ನಂಬಿ ಸುತ್ತಾಡಲು ಬಂದವಳು ಮಸಣ ಸೇರಿದ್ದಾಳೆ.
ಹಳೆಯ ದ್ವೇಷ: ತಡರಾತ್ರಿ ಮೂವರ ಬರ್ಬರ ಕೊಲೆ.. ಬೆಚ್ಚಿಬಿದ್ದ ಕಲಬುರಗಿ ಮಂದಿ!
ಮಂಡ್ಯದ ಕೆಆರ್ ಪೇಟೆಯ ಕರೋಟಿ ಗ್ರಾಮದಲ್ಲಿ ಲವ್, ಸೆಕ್ಸ್, ಮರ್ಡರ್ ನಡೆದಿದೆ. ಹಾಸನದ ಹೊಸಕೊಪ್ಪಲು ಗ್ರಾಮದ ಪ್ರೀತಿ (30) ಕೊಲೆಯಾದ ಮಹಿಳೆ. ಮದುವೆಯಾಗಿದ್ರು ಮತ್ತೊರ್ವ ಯುವಕನ ಜೊತೆ ಲವ್ವಿ ಡವ್ವಿ ಬಿದ್ದ ಗೃಹಿಣಿ ಕೊಲೆಯಾಗಿದ್ದಾಳೆ. ಎಸ್, ಮಂಡ್ಯದ ಕೆಆರ್ ಪೇಟೆಯ ಕರೋಠಿ ಗ್ರಾಮದ ಪುನೀತ್ ಜೊತೆ ಪ್ರೀತಿ ಎಂಬ ಗೃಹಿಣಿ ಲವ್ ಮಾಡುತ್ತಿದ್ದಳು. ಇನ್ಸ್ಟಾದಲ್ಲಿ ಪರಿಚಯವಾಗಿ ನಂತ್ರ ಇಬ್ಬರ ನಡುವೆ ಲವ್ & ಆಫೇರ್ ಇತ್ತು. ಕಳೆದ ಮೂರು ದಿನಗಳ ಹಿಂದೆ ಲವರ್ ಪುನೀತ್ ನೋಡಲು ಮಂಡ್ಯಕ್ಕೆ ಪ್ರೀತಿ ಬಂದಿದ್ದ. ಪ್ರೀತಿಗೆ ಮೈಸೂರು, KRS ತೋರಿಸಿ ಪುನೀತ್ ಪ್ರೀತಿ ತೋರಿಸಿದ್ದ. ನಂತರ ಕೆಆರ್ ಪೇಟೆಯ ಕತ್ತರಘಟ್ಟ ಅರಣ್ಯದಲ್ಲಿ ಇಬ್ಬರ ನಡುವೆ ಜಗಳವಾಗಿದೆ.
ಜಗಳದ ಬಳಿಕ ಪುನೀತ್ ಪ್ರೀತಿಯನ್ನು ಹತ್ಯೆ ಮಾಡಿದ್ದಾನೆ. ಯಾರಿಗೂ ತಿಳಿಯದಂತೆ ತನ್ನ ಜಮೀನಿನಲ್ಲೆ ಭೂಪ ಊತಿದ್ದರು. ಅತ್ತ ಪ್ರೀತಿ ಗಂಡನಿಂದ ಹಾಸನದಲ್ಲಿ ಮಿಸ್ಸಿಂಗ್ ದೂರು ದಾಖಲಾಗಿದೆ. ಪ್ರೀತಿ ಗಂಡನ ದೂರು ಆದರಿಸಿ ತನಿಖೆ ಕೈಗೊಂಡ ಪೊಲೀಸರಿಗೆ ಮೊಬೈಲ್ ನೆಟ್ವರ್ಕ್ ನಿಂದ ಹಂತಕನ ಪತ್ತೆಯಾಗಿದೆ. ಇಂದು ಪುನೀತ್ ವಶಕ್ಕೆ ಪಡೆದು ವಿಚಾರಣೆ ನಡೆದಾಗ ಪ್ರಕರಣ ಬಯಲಿಗೆ ಬಂದಿದೆ. ಊತಿದ್ದ ಶವ ಹೊರಕ್ಕೆ ತೆಗೆದಿದ್ದು, ಆದಿಚುಂಚನಗಿರಿ ಆಸ್ಪತ್ರೆ ಶವಾಗಾರಕ್ಕೆ ಪ್ರೀತಿ ಮೃತ ದೇಹ ಶಿಫ್ಟ್ ಮಾಡಲಾಗಿದೆ. ವೈದ್ಯರಿಂದ ಪ್ರೀತಿಯ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ.