ವಿಶಾಖಪಟ್ಟಣ:- ಲಕ್ನೋ ವಿರುದ್ಧ ಡೆಲ್ಲಿ ತಂಡವು 1 ವಿಕೆಟ್ ಗಳ ರೋಚಕ ಜಯ ಸಾಧಿಸಿದೆ. 7 ರನ್ಗಳಿಗೆ 3 ವಿಕೆಟ್ ಪತನಗೊಂಡಿದ್ದರೂ ಕೊನೆಯಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕ್ರೀಸ್ಗ ಬಂದ ಅಶುತೋಷ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ನಿಂದ ಡೆಲ್ಲಿ ಗೆದ್ದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಲಕ್ನೋ 8 ವಿಕೆಟ್ ನಷ್ಟಕ್ಕೆ 209 ರನ್ ಹೊಡೆಯಿತು. ಕಠಿಣ ಸವಾಲು ಬೆನ್ನತ್ತಿದ ಡೆಲ್ಲಿ ಆರಂಭದಲ್ಲೇ ವಿಕೆಟ್ ಕಳೆದುಕೊಂಡರೂ ಅಂತಿಮವಾಗಿ 19.3 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 211 ರನ್ಗಳಿಸಿ ಗೆಲುವು ಸಾಧಿಸಿತು.
ಡೆಲ್ಲಿ 7 ರನ್ಗಳಿಸುವಷ್ಟರಲ್ಲೇ 3 ವಿಕೆಟ್ ಕಳೆದುಕೊಂಡಿತ್ತು. ನಾಯಕ ಅಕ್ಷರ್ ಪಟೇಲ್ 22 ರನ್ (11 ಎಸೆತ, 3 ಬೌಂಡರಿ, 1 ಸಿಕ್ಸ್), ಡುಪ್ಲೆಸಿಸ್ 29 ರನ್(18 ಎಸೆತ, 3 ಬೌಂಡರಿ, 2 ಸಿಕ್ಸ್) ಸಿಡಿಸಿ ಸ್ವಲ್ಪ ಚೇತರಿಕೆ ನೀಡಿದರು. ಟ್ರಿಸ್ಟಾನ್ ಸ್ಟಬ್ಸ್ 34 ರನ್(22 ಎಸೆತ, 1 ಬೌಂಡರಿ, 3 ಸಿಕ್ಸ್) ಸಿಡಿಸಿ ಔಟಾದಾಗ ಪಂದ್ಯ ಲಕ್ನೋ ಪರ ವಾಲಿತ್ತು.
7ನೇ ವಿಕೆಟಿಗೆ ಅಶುತೋಷ್ ಮತ್ತು ನಿಗಮ್ 22 ಎಸೆತಗಳಲ್ಲಿ 55 ರನ್ ಹೊಡೆಯುವ ಮೂಲಕ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಡೆಲ್ಲಿ ಪರ 16ನೇ ಓವರ್ನಲ್ಲಿ 20 ರನ್, 17 ನೇ ಓವರ್ನಲ್ಲಿ 3 ರನ್, 18ನೇ ಓವರ್ನಲ್ಲಿ 17 ರನ್, 19ನೇ ಓವರ್ನಲ್ಲಿ 16 ರನ್ ಬಂದಿತ್ತು. 20ನೇ ಓವರ್ನಲ್ಲಿ 6 ರನ್ ಬೇಕಿತ್ತು. ಸ್ಟ್ರೈಕ್ನಲ್ಲಿದ್ದ ಮೋಹಿತ್ ಶರ್ಮಾ ಮೊದಲ ಎಸೆತದಲ್ಲಿ ಸ್ಟಂಪ್ ಔಟಾಗುವ ಸಾಧ್ಯತೆ ಇತ್ತು. ಎರಡನೇ ಎಸೆತದಲ್ಲಿ 1 ರನ್ ಓಡಿ ಅಶುತೋಷ್ಗೆ ಸ್ಟ್ರೈಕ್ ನೀಡಿದರು.3ನೇ ಎಸೆತವನ್ನು ಅಶುತೋಶ್ ಸಿಕ್ಸ್ಗೆ ಅಟ್ಟುವ ಮೂಲಕ ಡೆಲ್ಲಿ ತಂಡಕ್ಕೆ ಜಯವನ್ನು ತಂದುಕೊಟ್ಟರು.