ನವದೆಹಲಿ:- ತವರು ಮೈದಾನದಲ್ಲಿಯೇ ಡೆಲ್ಲಿಗೆ ಮತ್ತೊಂದು ಆಘಾತ ಎದುರಾಗಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೀನಾಯವಾಗಿ ಸೋತಿದೆ. ಏಪ್ರಿಲ್ ಮೇ 27 ರಂದು ತವರಲ್ಲಿ RCB ವಿರುದ್ಧ ಸೋತಿತ್ತು. ಆ ಬಳಿಕ ಅಂದ್ರೆ ಮಂಗಳವಾರ ಕೋಲ್ಕತ್ತಾ ವಿರುದ್ಧ ಸೋಲು ಕಂಡಿದೆ.
ಈ ರಾಶಿಯವರು ಉದ್ಯೋಗದ ಸಮಸ್ಯೆಯಿಂದ ಕೋರ್ಟ್ ಕಚೇರಿ ಅಲೆದಾಟ: ಬುಧವಾರದ ರಾಶಿ ಭವಿಷ್ಯ 30 ಏಪ್ರಿಲ್ 2025!
ಡೆಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಭರ್ಜರಿ ಗೆಲುವು ಕಂಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 20 ಓವರ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿತ್ತು. ನಂತರ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್‌ನಲ್ಲಿ 190ರನ್ ಗಳಿಸಿ ಕೆಕೆಆರ್ ತಂಡಕ್ಕೆ ಶರಣಾಯಿತು.
205 ರನ್ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. 45 ಬಾಲ್‌ಗೆ 62 ರನ್ (7 ಬೌಂಡರಿ, 2 ಸಿಕ್ಸ್) ಸಿಡಿಸುವ ಮೂಲಕ ಆಕರ್ಷಕ ಅರ್ಧಶತಕ ಬಾರಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಬ್ಯಾಟರ್‌ಗಳು ಕೆಕೆಆರ್ ಬೌಲರ್‌ಗಳ ದಾಳಿಗೆ ತತ್ತರಿಸಿದರು.
ಕರುಣ್ ನಾಯರ್ ಕೇವಲ 15 ರನ್ ಗಳಿಸಿ ಔಟಾದರೆ, ಕನ್ನಡಿಗ ಕೆ.ಎಲ್ ರಾಹುಲ್ 7 ರನ್‌ಗಳಿಸಿ ರನೌಟ್ ಆಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಬಳಿಕ ಬಂದ ತಂಡದ ನಾಯಕ ಅಕ್ಷರ್ ಪಟೇಲ್ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಶ್ರಮಿಸಿದರು. ಅಕ್ಷರ್ 23 ಬಾಲ್‌ಗೆ 43 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ವಿಪ್ರಜ್ ನಿಗಮ್ 19 ಬಾಲ್‌ಗೆ 38ರನ್ ಸಿಡಿಸಿದರು.
ಸುನಿಲ್ ನರೈನ್ 3 ವಿಕೆಟ್ ಕಬಳಿಸಿದರೆ, ವರುಣ್ ಚಕ್ರವರ್ತಿ 2 ವಿಕೆಟ್ ಕಿತ್ತರು. ಅನುಕುಲ್ ರಾಯ್ ಹಾಗೂ ವೈಭವ್ ಅರೋರ ತಲಾ 1 ವಿಕೆಟ್ ಪಡೆಯುವ ಮೂಲಕ ಡೆಲ್ಲಿ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.