2025ರ ಐಪಿಎಲ್ ನಲ್ಲಿ ಆರ್ ಸಿಬಿ ಉತ್ತಮ ಪ್ರದರ್ಶನ ನೀಡುತ್ತಿದೆ. ಆಡಿರುವ 8 ಪಂದ್ಯಗಳಲ್ಲಿ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿ 3 ಪಂದ್ಯಗಳಲ್ಲಿ ಸೋಲು ಕಂಡಿದೆ.
ಓಂ ಪ್ರಕಾಶ್ ಕೊಲೆ ಪ್ರಕರಣ: ಕಣ್ಣಿಗೆ ಖಾರದ ಪುಡಿ ಹಾಕಿ ಕೊಲೆ ಮಾಡಿದ್ರಾ..!? ಸ್ಫೋಟಕ ಮಾಹಿತಿ ಬಯಲು
ಪಂಜಾಬ್ ವಿರುದ್ಧ ಗೆಲ್ತಿದ್ದಂತೆಯೇ ಆರ್ಸಿಬಿ ಅಂಕಪಟ್ಟಿಯಲ್ಲಿ ಬಡ್ತಿ ಪಡೆದುಕೊಂಡಿದೆ. ಐದನೇ ಸ್ಥಾನಕ್ಕೆ ಕುಸಿದ್ದಿದ್ದ ಆರ್ಸಿಬಿ, ದಿಢೀರ್ ಅಂತಾ ಮೂರನೇ ಸ್ಥಾನಕ್ಕೆ ಜಿಗಿದಿದೆ. ಇನ್ನು, ನಿನ್ನೆ ಸೋತಿರುವ ಪಂಜಾಬ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಒಟ್ಟು 8 ಪಂದ್ಯಗಳನ್ನು ಆಡಿರುವ ಆರ್ಸಿಬಿ, ಐದು ಪಂದ್ಯಗಳನ್ನು ಗೆದ್ದು, ರನ್ರೇಟ್ ಆಧಾರದ ಮೇಲೆ ಮೂರನೇ ಸ್ಥಾನ ಅಲಂಕರಿಸಿದೆ.
ಇನ್ನು 7 ಪಂದ್ಯಗಳಲ್ಲಿ ಐದು ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿವೆ. ಪಂತ್ ನೇತೃತ್ವದ ಎಲ್ಎಸ್ಜಿ ಐದನೇ ಸ್ಥಾನದಲ್ಲಿದ್ದರೆ, ಮುಂಬೈ ನಾಲ್ಕು ಪಂದ್ಯ ಗೆದ್ದು ಆರನೇ ಸ್ಥಾನದಲ್ಲಿದೆ. ಕೆಕೆಆರ್ 7, ರಾಜಸ್ಥಾನ್ ರಾಯಲ್ಸ್ 8, ಸನ್ ರೈಸರ್ಸ್ ಹೈದ್ರಾಬಾದ್ 9 ಹಾಗೂ ಚೆನ್ನೈ ಸೂಪರ್ ಕಿಂಗ್ಸ್ 10ನೇ ಸ್ಥಾನದಲ್ಲಿದೆ.