ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿದೆ.
“ಬ್ಯಾಟಿಂಗ್ ದೈತ್ಯ’ ಸನ್ರೈಸರ್ ಹೈದರಾಬಾದ್ ತಂಡವನ್ನು ಅವರದೇ ಅಂಗಳದಲ್ಲಿ 7 ವಿಕೆಟ್ಗಳಿಂದ ಮಗುಚಿದ ಮುಂಬೈ ಇಂಡಿಯನ್ಸ್ ಒಮ್ಮೆಲೇ ಆರರಿಂದ ಮೂರನೇ ಸ್ಥಾನಕ್ಕೆ ನೆಗೆದಿದೆ. ಇದು 9 ಪಂದ್ಯಗಳಲ್ಲಿ ಪಾಂಡ್ಯ ಪಡೆಗೆ ಒಲಿದ 5ನೇ ಜಯವಾಗಿದೆ. ಆದರೆ ಮುಂಬೈ ಗೆಲುವಿನಿಂದ RCB ಅಂಕಪಟ್ಟಿಯಲ್ಲಿ ಕುಸಿತ ಕಂಡಿದೆ. ಅಂದ್ರೆ 3ನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ IPL ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆಯೇ ಮೊದಲು ಬ್ಯಾಟ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ನಿಗದಿತ 20 ಓವರ್ಗಳ್ಲಿ 8 ವಿಕೆಟ್ಗಳ ಕಳೆದುಕೊಂಡು 143 ರನ್ಗಳನ್ನು ಕಲೆಹಾಕಿ 144 ರನ್ಗಳ ಗುರಿ ನೀಡಿತು. ಈ ಗುರಿ ಬೆನ್ನತ್ತಿದ್ದ ಮುಂಬೈ ಇಂಡಿಯನ್ಸ್ ಕೇವಲ 15.4 ಓವರ್ಗಳಿಗೆ 3 ವಿಕೆಟ್ ಕಳೆದುಕೊಂಡು 146 ರನ್ ಕಲೆಹಾಕುವ ಮೂಲಕ ಗೆದ್ದು ಬೀಗಿತು.
Crime News: RSS ಮುಖಂಡನ ಮನೆಗೆ ನುಗ್ಗಿ ಹಲ್ಲೆ ಮಾಡಿದ ಮುಸ್ಲಿಂ ಯುವಕರು!
ಸನ್ರೈಸರ್ಸ್ ಹೈದರಾಬಾದ್ ಪರ ಬ್ಯಾಟ್ ಬೀಸಿದ ಟ್ರಾವಿಸ್ ಹೆಡ್ 0, ಅಭಿಷೇಕ್ ಶರ್ಮಾ 8, ಇಶಾನ್ ಕಿಶನ್ 1, ನಿತಿಶ್ ಕುಮಾರ್ ರೆಡ್ಡಿ 2, ಹೆನ್ರಿಚ್ ಕಾಲ್ಸೆನ್ 71, ಅನಿಕೇತ್ ವರ್ಮಾ 12, ಅಭಿನವ್ ಮನೋಹರ್ 43, ಪ್ಯಾಟ್ ಕಮಿನ್ಸ್ 1, ಹರ್ಷಲ್ ಪಟೇಲ್ 1 ರನ್ ಕಲೆಹಾಕಿದರು. ಈ ಮೂಲಕದ ಹೈದಾರಾಬಾದ್ ತಂಡದ ಮೊತ್ತವನ್ನು 140ರ ಗಡಿ ದಾಟಿಸಿದರು. ಎಸ್ಆರ್ಎಚ್ ಇಷ್ಟು ರನ್ಗಳ ಕಲೆಹಾಕಲು ನೆರವಾಗಿದ್ದೇ ಹೆನ್ರಿಚ್ ಕಾಲ್ಸೆನ್ ಹಾಗೂ ಅಭಿನವ್ ಸ್ಫೋಟಕ ಬ್ಯಾಟಿಂಗ್.
ಮುಂಬೈ ಪರ ಬೌಲಿಂಗ್ ಮಾಡಿದ ಟ್ರೆಂಟ್ ಬೋಲ್ಟ್ 4, ದೀಪಕ್ ಚಹಾರ್ 2 ವಿಕೆಟ್ ಪಡೆದರು. ಇನ್ನು ಜಸ್ಪ್ರಿತ್ ಬೂಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 143 ರನ್ಗಳಿಗೆ ಕಟ್ಟಿಹಾಕಿದರು.
ಮತ್ತೊಂದೆಡೆ ಮುಂಬೈ ಪರ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ಆಡುವ ಮೂಲಕ 70 ರನ್ ಬಾರಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಅಷ್ಟೇ ಅಲ್ಲದೆ, ಸೂರ್ಯ ಕುಮಾರ್ ಯಾದವ್ 40 ರನ್ ಕಲೆಹಾಕಿ ನಾಟ್ ಆಗಿ ಉಳಿಯುವ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು