RCB ವಿರುದ್ಧದ ಪಂದ್ಯಕ್ಕೂ ಮುನ್ನ ರಾಜಸ್ಥಾನ್ ರಾಯಲ್ಸ್ ಗೆ ಬಿಗ್ ಶಾಕ್ ಎದುರಾಗಿದೆ. ಇಂಜುರಿಯಿಂದ ಬಳಲುತ್ತಿರುವ ತಂಡದ ಖಾಯಂ ನಾಯಕ ಸಂಜು ಸ್ಯಾಮ್ಸನ್ ಇದೀಗ ಆರ್ಸಿಬಿ ವಿರುದ್ಧದ ಮುಂದಿನ ಪಂದ್ಯದಿಂದ ಹೊರಗುಳಿದಿದ್ದಾರೆ.
Gold Rate: ಭಾರತದಲ್ಲಿ ಚಿನ್ನದ ದರ ಮತ್ತೆ ಭಾರೀ ಏರಿಕೆ: 1 ಲಕ್ಷ ಸಮೀಪ!
ಏಪ್ರಿಲ್ 24 ರಂದು ಆರ್ಸಿಬಿ ವಿರುದ್ಧದ ಪಂದ್ಯದಿಂದ ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ. ಸಂಜು ಸ್ಯಾಮ್ಸನ್ ಪ್ರಸ್ತುತ ಚೇತರಿಕೆಯ ಹಂತದಲ್ಲಿದ್ದು, ಅವರು ತಂಡದ ತವರು ನೆಲೆಯಲ್ಲಿಯೇ ಉಳಿಯಲಿದ್ದಾರೆ ಎಂದು ರಾಜಸ್ಥಾನ ರಾಯಲ್ಸ್ ತಂಡದ ಆಡಳಿತ ಮಂಡಳಿ ತಿಳಿಸಿದೆ.
ಮುಂದಿನ ಪಂದ್ಯಕ್ಕಾಗಿ ರಾಜಸ್ಥಾನ್ ರಾಯಲ್ಸ್ ತಂಡ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು, ಸಂಜು ಸ್ಯಾಮ್ಸನ್ ಮಾತ್ರ ತಂಡದಲ್ಲಿ ಕಾಣಿಸಿಕೊಂಡಿಲ್ಲ. ತಂಡದ ಆಡಳಿತ ಮಂಡಳಿಯು ಸಂಜು ಸ್ಯಾಮ್ಸನ್ ಅವರ ಗಾಯದ ಮೇಲೆ ನಿಗಾ ಇಟ್ಟಿದ್ದು, ಅವರು ಸಂಪೂರ್ಣ ಫಿಟ್ ಆದ ನಂತರವೇ ತಂಡಕ್ಕೆ ಮರಳುತ್ತಾರೆ ಎಂಬ ಮಾಹಿತಿ ನೀಡಿದೆ. ಇದರರ್ಥ ಆರ್ಸಿಬಿ ವಿರುದ್ಧದ ಮುಂದಿನ ಪಂದ್ಯದಲ್ಲೂ ರಿಯಾನ್ ಪರಾಗ್ ತಂಡವನ್ನು ಮುನ್ನಡೆಸಲಿದ್ದಾರೆ.