ಪ್ರಸಕ್ತ ಐಪಿಎಲ್ ರೋಚಕತೆ ಹೆಚ್ಚಿಸಿದ್ದು, ಈಗಾಗಲೇ ಎಲ್ಲ ತಂಡಗಳು ಕನಿಷ್ಠ 8 ಪಂದ್ಯಗಳನ್ನು ಆಡಿವೆ. ಈ ವೇಳೆ ಸ್ಟಾರ್ ಆಟಗಾರರು ತಮ್ಮ ಸ್ಥಿರ ಪ್ರದರ್ಶನದ ಬಲದಿಂದ ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಈ ಆಟಗಾರರ ವೈಯಕ್ತಿಕ ಸಾಧನೆಯ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿರಲಿದೆ.
ಭೀಕರ ರಸ್ತೆ ಅಪಘಾತ: ಕಂಟೇನರ್ʼಗೆ ಕಾರು ಡಿಕ್ಕಿ – ಐವರು ಸಾವು! ಇಬ್ಬರಿಗೆ ಗಂಭೀರ ಗಾಯ
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಹಲವು ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅದರಲ್ಲಿ ಎಲ್ಲರ ಕಣ್ಣುಗಳು ಆ ಎರಡು ಪ್ರಶಸ್ತಿಯ ಮೇಲೆ ನೆಟ್ಟಿರಲಿವೆ. ಅವುಗಳೆಂದರೆ ಆರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್. ಈ ಎರಡೂ ಕ್ಯಾಪ್‌ಗಳನ್ನು ಪಡೆದು ರಾಜನಂತೆ ಮೆರೆಯಲು ಆಟಗಾರರು ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಆರೆಂಜ್ ಕ್ಯಾಪ್ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರಿಗೆ ನೀಡಲಾಗುತ್ತದೆ. ಇನ್ನು ಗರಿಷ್ಠ ವಿಕೆಟ್ ಪಡೆದ ಪ್ಲೇಯರ್‌ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಆರೆಂಜ್ ಕ್ಯಾಪ್ ರೇಸ್‌ನಲ್ಲಿರುವ ಮೂವರು ಆಟಗಾರರು ಕಣ್ಣು ನೆಟ್ಟಿದ್ದಾರೆ.
2025ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಆಡಿರುವ 10 ಪಂದ್ಯದಲ್ಲಿ 7 ಪಂದ್ಯವನ್ನು ಗೆದ್ದಿರುವ ಆರ್ ಸಿಬಿ ಮೂರರಲ್ಲಿ ಸೋಲು ಕಂಡಿದೆ.
ಇನ್ನೂ ಆಟಗಾರರ ಪ್ರದರ್ಶನ ನೋಡಿದ್ರೆ ಈ ಸಲ ಕಪ್ ನಮ್ಮದೇ ಎನ್ನುತ್ತಿದ್ದಾರೆ ಫ್ಯಾನ್ಸ್. ಈವರೆಗೆ ಆಡಿದ 10 ಪಂದ್ಯಗಳಲ್ಲಿ 7 ಗೆಲುವು ದಾಖಲಿಸಿರುವ ಆರ್ಸಿಬಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಹಾಗೆಯೇ ಆ್ಯರೆಂಜ್ ಕ್ಯಾಪ್ ಹಾಗೂ ಪರ್ಪಲ್ ಕ್ಯಾಪ್ ಪಟ್ಟಿಯಲ್ಲೂ ಆರ್ಸಿಬಿ ಆಟಗಾರರು ಅಗ್ರಸ್ಥಾನದಲ್ಲಿದ್ದಾರೆ.
ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ ಆರ್ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 51 ರನ್ ಬಾರಿಸುವುದೊಂದಿಗೆ ಕೊಹ್ಲಿ ಎಲ್ಲರನ್ನು ಹಿಂದಿಕ್ಕಿದ್ದಾರೆ. ಈವರೆಗೆ 10 ಇನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 6 ಅರ್ಧಶತಕಗಳೊಂದಿಗೆ ಒಟ್ಟು 443 ರನ್ ಕಲೆಹಾಕಿದ್ದಾರೆ.
ಇನ್ನು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವುದು ಮುಂಬೈ ಇಂಡಿಯನ್ಸ್ ತಂಡದ ಸೂರ್ಯಕುಮಾರ್ ಯಾದವ್. ಈವರೆಗೆ 10 ಇನಿಂಗ್ಸ್ ಆಡಿರುವ ಸೂರ್ಯ 3 ಅರ್ಧಶತಕಗಳೊಂದಿಗೆ 427 ರನ್ ಕಲೆಹಾಕಿದ್ದಾರೆ. ಈ ಮೂಲಕ ಆರೆಂಜ್ ಕ್ಯಾಪ್ ರೇಸ್ನಲ್ಲಿ ವಿರಾಟ್ ಕೊಹ್ಲಿಗೆ ಉತ್ತಮ ಪೈಪೋಟಿ ನೀಡುತ್ತಿದ್ದಾರೆ.
ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಆರ್ಸಿಬಿ ತಂಡದ ವೇಗಿ ಜೋಶ್ ಹ್ಯಾಝಲ್ವುಡ್ ಮೊದಲ ಸ್ಥಾನದಲ್ಲಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 10 ಇನಿಂಗ್ಸ್ಗಳಲ್ಲಿ 36.5 ಓವರ್ಗಳನ್ನು ಎಸೆದಿರುವ ಹ್ಯಾಝಲ್ವುಡ್ 18 ವಿಕೆಟ್ಗಳನ್ನು ಕಬಳಿಸಿ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ.