ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ IPL ಪಂದ್ಯದಲ್ಲಿ CSK ವಿರುದ್ಧ RCB ಗೆದ್ದು ಬೀಗಿದೆ. ಧೋನಿ ಪಡೆಯನ್ನು ಆರ್ ಸಿಬಿ 50 ರನ್ ಗಳ ಅಂತರದಿಂದ ಸೋಲಿಸಿ ಗೆಲುವಿನ ಸರಣಿಯನ್ನು ಮುಂದೂವರೆಸಿದೆ.
ಯುಗಾದಿ ಹಬ್ಬಕ್ಕೆ ಊರುಗಳತ್ತ ಮುಖ ಮಾಡಿದ ಜನ: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್!
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಾಯಕ ರಜತ್ ಪಾಟಿದಾರ್ ಅರ್ಧಶತಕದ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಕಲೆಹಾಕಿತು. ಆರ್ ಸಿಬಿ ನೀಡಿದ 197 ರನ್ ಗಳ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 146 ರನ್ ಬಾರಿಸಲಷ್ಟೇ ಶಕ್ತವಾಗಿದ್ದು ಸೋಲು ಕಂಡಿತು.
ಚೆನ್ನೈ ಪರ ರಚಿನ್ ರವೀಂದ್ರ 41, ಶಿವಂ ದುಬೆ 19, ರವೀಂದ್ರ ಜಡೇಜಾ 25 ರನ್ ಹಾಗೂ ಎಂಎಸ್ ಧೋನಿ ಅಜೇಯ 30 ರನ್ ಬಾರಿಸಿದ್ದಾರೆ. ಆರ್ ಸಿಬಿ ಪರ ಜೋಶ್ ಹೆಜಲ್ಪುಡ್ 3, ಯಶ್ ದಯಾಳ್ ಮತ್ತು ಲಿವಿಂಗ್ಸ್ಟೋನ್ ತಲಾ 2 ವಿಕೆಟ್ ಪಡೆದರು.
ಆರ್ ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಜೋಡಿ ಮೊದಲ ವಿಕೆಟ್ ಗೆ 45 ರನ್ ಚಚ್ಚಿದರು. ಪ್ರಮುಖವಾಗಿ ಸ್ಫೋಟಕ ಆರಂಭ ನೀಡಿದ ಫಿಲಿಪ್ ಸಾಲ್ಟ್ ಕೇವಲ 16 ಎಸೆತಗಳಲ್ಲಿ 1 ಸಿಕ್ಸರ್, 5 ಬೌಂಡರಿ ಸಹಿತ 32 ರನ್ ಕಲೆ ಹಾಕಿ ಆರ್ ಸಿಬಿಗೆ ಭರ್ಜರಿ ಆರಂಭ ನೀಡಿದರು.
ಆದರೆ ಈ ಹಂತದಲ್ಲಿ ನೂರ್ ಅಹ್ಮದ್ ಬೌಲಿಂಗ್ ನಲ್ಲಿ ಎಂಎಸ್ ಧೋನಿ ಮಾಡಿದ ಅದ್ಭುತ ಸ್ಟಪಿಂಗ್ ಗೆ ಸಾಲ್ಟ್ ಬಲಿಯಾದರು. ಧೋನಿ ಕೇವಲ 0.14 ಸೆಕೆಂಡ್ ನಲ್ಲೇ ಸ್ಟಂಪೌಟ್ ಮಾಡಿದ್ದು ಇದು ಈವರೆಗೂ ನಡೆದ ಪಂದ್ಯಗಳ ಪೈಕಿ 2ನೇ ವೇಗದ ಸ್ಟಂಪೌಟ್ ಆಗಿದೆ. ನೂರ್ ಅಹ್ಮದ್ ಎಸೆದ 5ನೇ ಓವರ್ನ ಕೊನೆಯ ಎಸೆತದಲ್ಲಿ ಸಾಲ್ಟ್ರ ವಿಕೆಟ್ ಪತನವಾಯಿತು. ಬಳಿಕ ಕ್ರೀಸ್ ಗೆ ಬಂದ ದೇವದತ್ ಪಡಿಕ್ಕಲ್ ಕೂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 14 ಎಸೆತಗಳನ್ನು ಎದುರಿಸಿ 2 ಸಿಕ್ಸರ್ ಮತ್ತು 2 ಬೌಂಡರಿ ನೆರವಿನಿಂದ 27 ರನ್ ಗಳಿಸಿ ಅಶ್ವಿನ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ವಿರಾಟ್ ಕೊಹ್ಲಿ ಜೊತೆಗೂಡಿದ ನಾಯಕ ರಜತ್ ಪಾಟಿದರ್ 32 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 51 ರನ್ ಗಳಿಸಿದರು
ಈ ಹಂತದಲ್ಲಿ 31 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ನೂರ್ ಅಹ್ಮದ್ ಬೌಲಿಂಗ್ ನಲ್ಲಿ ಔಟಾದರು. ಕೊಹ್ಲಿ ಬೆನ್ನಲ್ಲೇ 10 ರನ್ ಗಳಿಸಿ ಲಿವಿಂಗ್ ಸ್ಟೋನ್ ಕೂಡ ಮತ್ತದೇ ನೂರ್ ಅಹ್ಮದ್ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆದರು. ಜಿತೇಶ್ ಶರ್ಮಾ 12 ರನ್ ಗಳಿಸಿ ಔಟಾದರೆ, ಕೃನಾಲ್ ಪಾಂಡ್ಯ ಶೂನ್ಯ ಸುತ್ತಿದರು. ಇನ್ನು ಆರ್ ಸಿಬಿ ಇನ್ನಿಂಗ್ಸ್ ನ ಕೊನೆಯ ಓವರ್ ನಲ್ಲಿ ಟಿಮ್ ಡೇವಿನ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ಆರ್ ಸಿಬಿ ಮೊತ್ತವನ್ನು 190ರ ಗಡಿ ದಾಟಿಸಿದರು. ಕೇವಲ 8 ಎಸೆತ ಎದುರಿಸಿದ ಟಿಮ್ ಡೇವಿಡ್ 3 ಸಿಕ್ಸರ್ ಮತ್ತು 1 ಬೌಂಡರಿ ನೆರವಿನಿಂದ ಅಜೇಯ 22 ರನ್ ಸಿಡಿಸಿ ಆರ್ ಸಿಬಿ ಬೃಹತ್ ಮೊತ್ತಕ್ಕೆ ಕಾರಣರಾದರು.