ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಫೈನಲ್ ಫೈಟ್ ನಡೆಯುತ್ತಿದೆ. ಮೊದಲಿಗೆ ಟಾಸ್ ಸೋತಿರುವ RCB ಬ್ಯಾಟಿಂಗ್ ಆರಂಭಿಸಿದೆ. ಅದರಂತೆ ಫಿಲ್ ಸಾಲ್ಟ್ ಮೊದಲು ಔಟ್ ಆಗಿದ್ದಾರೆ.
ಇದು ಬೆಂಗಳೂರಿನ ನಾಲ್ಕನೇ ಐಪಿಎಲ್ ಫೈನಲ್ ಆಗಲಿದೆ. ಇದಕ್ಕೂ ಮೊದಲು ತಂಡವು 3 ಬಾರಿ ಸೋಲನ್ನು ಎದುರಿಸಿದೆ. 2009 ರಲ್ಲಿ ಮೊದಲು ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸೋಲನುಭವಿಸಿತು. ನಂತರ 2011 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋತಿತು. ನಂತರ 2016 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ಬೆಂಗಳೂರು ತಂಡವನ್ನು ಕೇವಲ 8 ರನ್ಗಳ ಅಂತರದಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಇದು ಐಪಿಎಲ್ನ 18 ನೇ ಸೀಸನ್ ಆಗಿದ್ದು, ಕಳೆದ 17 ಸೀಸನ್ಗಳಲ್ಲಿ 3 ತಂಡಗಳು ಪ್ರಾಬಲ್ಯ ಸಾಧಿಸಿವೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಲಾ 5 ಪ್ರಶಸ್ತಿಗಳನ್ನು ಗೆದ್ದಿದ್ದರೆ, ಕೋಲ್ಕತ್ತಾ ನೈಟ್ ರೈಡರ್ಸ್ 3 ಬಾರಿ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಇವುಗಳನ್ನು ಹೊರತುಪಡಿಸಿ, ಉಳಿದ 4 ತಂಡಗಳು ಐಪಿಎಲ್ ಟ್ರೋಫಿಯಲ್ಲಿ ತಮ್ಮ ಹೆಸರನ್ನು ಕೆತ್ತಿವೆ-
ರಾಜಸ್ಥಾನ ರಾಯಲ್ಸ್ – 2008
ಡೆಕ್ಕನ್ ಚಾರ್ಜರ್ಸ್ – 2009
ಸನ್ರೈಸರ್ಸ್ ಹೈದರಾಬಾದ್ – 2016
ಗುಜರಾತ್ ಟೈಟಾನ್ಸ್ – 2022