ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.
2025ರ ಐಪಿಎಲ್ ಸೀಸನ್- 18 ಪುನರಾರಂಭವಾಗುತ್ತಿದ್ದು ಅಭಿಮಾನಿಗಳಲ್ಲಿ ಖುಷಿ ತಂದಿದೆ. ವಿದೇಶಕ್ಕೆ ತೆರಳಿದಂತ ಕೆಲ ಆಟಗಾರರು ಮತ್ತೆ ತಮ್ಮ ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಆರ್ಸಿಬಿಗೂ ಗುಡ್ನ್ಯೂಸ್ ಸಿಕ್ಕಿದ್ದು ತಂಡಕ್ಕೆ ವಿದೇಶದ ಸ್ಟಾರ್ ಪೇಸ್ ಬೌಲರ್ ಹಿಂದಿರುಗುತ್ತಿದ್ದಾರೆ.
ಆರ್ಸಿಬಿಯ ಭರವಸೆ ಬೌಲರ್ ಎಂದರೆ ಅದು ಜೋಶ್ ಹ್ಯಾಜಲ್ವುಡ್. ಈ ಸಲದ ಆರ್ಸಿಬಿ ತಂಡದಲ್ಲಿ ಜೋಶ್ ಹ್ಯಾಜಲ್ವುಡ್ ಅವರ ಬೌಲಿಂಗ್ ನಿರ್ಣಾಯಕ ಪಾತ್ರ ವಹಿಸಿತ್ತು. ಹೇಗೆಂದರೆ ಜೋಶ್ ಹ್ಯಾಜಲ್ವುಡ್ ಆಡಿದ 10 ಪಂದ್ಯಗಳಿಂದ 18 ವಿಕೆಟ್ಗಳನ್ನು ಉರುಳಿಸಿ ಪರ್ಪಲ್ ಕ್ಯಾಪ್ ಅನ್ನು ಈಗಾಗಲೇ ಧರಿಸಿದ್ದರು. ಇದೀಗ ಪರ್ಪಲ್ ಕ್ಯಾಪ್ ಕನ್ನಡಿಗ ಗುಜರಾತ್ ತಂಡದ ಬೌಲರ್ ಪ್ರಸಿದ್ಧ್ ಕೃಷ್ಣ ಬಳಿ ಇದೆ. ಸದ್ಯ ಹ್ಯಾಜಲ್ವುಡ್ 3ನೇ ಸ್ಥಾನದಲ್ಲಿದ್ದಾರೆ.
ಬೌಲಿಂಗ್ ವಿಭಾಗದ ದೈತ್ಯ ಶಕ್ತಿ ಆಗಿರುವ ಜೋಶ್ ಹೇಜಲ್ವುಡ್ ಫುಲ್ ಫಿಟ್ ಆಗಿದ್ದು, ನೆಟ್ಸ್ನಲ್ಲಿ ಬೆವರಿಳಿಸಿದ್ದಾರೆ.
Digvesh Rathi: ಲಕ್ನೋಗೆ ಬ್ಯಾಡ್ ನ್ಯೂಸ್: IPL ಪಂದ್ಯದಿಂದ ದಿಗ್ವೇಶ್ ರಾಥಿ ಅಮಾನತು..!
ಮೇ 23 ರಂದು ಲಕ್ನೋದಲ್ಲಿ ಹೈದರಾಬಾದ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಬೌಲಿಂಗ್ ಮಾಡೋದು ಪಕ್ಕಾ ಆಗಿದೆ. ಗಾಯದ ಸಮಸ್ಯೆ ಹಿನ್ನೆಲೆಯಲ್ಲಿ ಹೇಜಲ್ವುಡ್ ಕಳೆದ ಪಂದ್ಯಗಳನ್ನು ಆಡಿರಲಿಲ್ಲ. ಅಲ್ಲದೇ, ಐಪಿಎಲ್ ಪಂದ್ಯಾವಳಿಗಳು ತಾತ್ಕಾಲಿಕವಾಗಿ ರದ್ದುಗೊಂಡ ನಂತರ ಅವರು, ಆಸ್ಟ್ರೇಲಿಯಾಗೆ ವಾಪಸ್ ಆಗಿದ್ದರು. ಇದೀಗ ಬೆಂಗಳೂರಿಗೆ ಮರಳಿದ್ದು, ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಅಲ್ಲದೇ ನೆಟ್ಸ್ನಲ್ಲಿ ಪ್ರ್ಯಾಕ್ಟೀಸ್ ಮಾಡ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೇಜಲ್ವುಡ್ ಮೇ 9 ಆರ್ಸಿಬಿ ಕ್ಯಾಂಪ್ ತೊರೆದಿದ್ದರು. ನಂತರ ಅವರು ಆರ್ಸಿಬಿ ಮ್ಯಾಚ್ಗೆ ಲಭ್ಯರಾಗುವುದರ ಬಗ್ಗೆ ಖಚಿತತೆ ಇರಲಿಲ್ಲ. ಈ ಬಾರಿಯ ಐಪಿಎಲ್ನಲ್ಲಿ ಹೇಜಲ್ವುಡ್, ಅತ್ಯಧಿಕ ವಿಕೆಟ್ ಕಬಳಿಸಿದ್ದಾರೆ. 10 ಪಂದ್ಯಗಳಲ್ಲಿ 8.44 ಸರಾಸರಿ ರನ್ ನೀಡಿ, 18 ವಿಕೆಟ್ ಪಡೆದುಕೊಂಡಿದ್ದಾರೆ. ಸದ್ಯ ಅವರು ಪರ್ಪಲ್ ಕ್ಯಾಪ್ನ ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಲೀಗ್ ಹಂತದಲ್ಲಿ ಆರ್ಸಿಬಿ ಇನ್ನೂ ಎರಡು ಪಂದ್ಯಗಳು ಬಾಕಿ ಇವೆ. ಎರಡೂ ಮ್ಯಾಚ್ಗಳು ಮಳೆಯಿಂದಾಗಿ ಲಕ್ನೋದಲ್ಲೇ ನಡೆಯಲಿವೆ.