ಹೈದರಾಬಾದ್ ವಿರುದ್ಧ ಲಕ್ನೋ 5 ವಿಕೆಟ್ಗಳ ಜಯ ಸಾಧಿಸಿದೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಐಪಿಎಲ್ನ 7ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದ್ರಾಬಾದ್ 20 ಓವರ್ಗಳಲ್ಲಿ 9 ವಿಕೆಟ್ಗೆ 190 ರನ್ಗಳ ಟಾರ್ಗೆಟ್ ನೀಡಿದೆ. ಲಕ್ನೋ ಪರ ಪೇಸ್ ಬೌಲರ್ ಶಾರ್ದೂಲ್ ಠಾಕೂರ್ ಬೌಲಿಂಗ್ಗೆ ಹೈದ್ರಾಬಾದ್ ಬ್ಯಾಟ್ಸ್ಮನ್ಸ್ ಪತರುಗುಟ್ಟಿದರು.
IPL 2025: ಇಂದು ಸಿಎಸ್ಕೆ vs ಆರ್ಸಿಬಿ ಹೈವೋಲ್ಟೇಜ್ ಪಂದ್ಯ: ಉಭಯ ತಂಡಗಳ ಹೆಡ್ ಟು ಹೆಡ್ ದಾಖಲೆ ಹೇಗಿದೆ?
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ 20 ಓವರ್ಗೆ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತು. ಲಕ್ನೋ ಸೂಪರ್ ಜೈಂಟ್ಸ್ 16.1 ಓವರ್ಗೆ 5 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಗೆದ್ದು ಬೀಗಿತು.
ಪ್ಯಾಟ್ ಕಮ್ಮಿನ್ಸ್ ಪಡೆ ಬ್ಯಾಟಿಂಗ್ನಲ್ಲಿ ಅಷ್ಟಾಗಿ ಅಬ್ಬರಿಸಿದಂತೆ ಕಾಣಲಿಲ್ಲ. ಉತ್ತಮ ಫಾರ್ಮ್ನಲ್ಲಿರುವ ಟ್ರಾವಿಸ್ ಹೆಡ್ ಆರಂಭಿಕ ಆಟ ಭರವಸೆ ಮೂಡಿಸಿತ್ತು. ಆದರೆ, ಅವರಿಗೆ ಸಾಥ್ ನೀಡುವಲ್ಲಿ ಇತರೆ ಬ್ಯಾಟರ್ಗಳು ವಿಫಲರಾದರು. ಹೆಡ್ 28 ಬಾಲ್ಗೆ 5 ಫೋರ್, 3 ಸಿಕ್ಸರ್ಗಳೊಂದಿಗೆ 47 ರನ್ ಗಳಿಸಿ ಔಟಾದರು. ಇದಕ್ಕೂ ಮುನ್ನ ಅಭಿಷೇಕ್ ಶರ್ಮಾ (6), ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ಇಶಾನ್ ಕಿಶನ್ ಸೊನ್ನೆ ಸುತ್ತಿ ನಿರ್ಗಮಿಸಿದ್ದು, ನಿರಾಸೆ ಮೂಡಿಸಿತು.
ನಿತೀಶ್ ಕುಮಾರ್ ರೆಡ್ಡಿ 32, ಹೆನ್ರಿಕ್ ಕ್ಲಾಸೆನ್ 26, ಅನಿಕೇತ್ ವರ್ಮಾ 36, ಪ್ಯಾಟ್ ಕಮ್ಮಿನ್ಸ್ 18, ಹರ್ಷಲ್ ಪಟೇಲ್ 12 ರನ್ ಗಳಿಸಿದರು. ಲಕ್ನೋ ಪರ ಶಾರ್ದೂಲ್ ಠಾಕೂರ್ 4 ವಿಕೆಟ್ ಕಿತ್ತು ಗಮನ ಸೆಳೆದರು.