ಮುಂಬೈ ಇಂಡಿಯನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ರೋಚಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಈ ಪಂದ್ಯ ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿತ್ತು.
ಈ ರಾಶಿಯವರಿಗೆ ಅಡಚಣೆಗಳೇ ಸಂಭವ: ಸೋಮವಾರದ ರಾಶಿ ಭವಿಷ್ಯ 02 ಜೂನ್ 2025!
ಮುಂಬೈ ನೀಡಿದ್ದ 204 ರನ್ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್, ನಾಯಕ ಶ್ರೇಯಸ್ ಅಯ್ಯರ್ (87) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ ಗುರಿ ತಲುಪಿತು. ಈ ಮೂಲಕ 2014 ರ ನಂತರ ಎರಡನೇ ಬಾರಿಗೆ ಐಪಿಎಲ್ ಫೈನಲ್ಗೇರಿದೆ.
Qualifier 2 ಪಂದ್ಯದಲ್ಲಿ ಮುಂಬೈ ನೀಡಿದ್ದ 204 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ತಂಡ 19 ಓವರ್ ನಲ್ಲೇ 5 ವಿಕೆಟ್ ಕಳೆದುಕೊಂಡು 207 ರನ್ ಗಳಿಸಿ 5 ವಿಕೆಟ್ ಅಂತರದ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಹಾಲಿ ಐಪಿಎಲ್ ಟೂರ್ನಿಯ ಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು.
ಇನ್ನು ಈ ಪಂದ್ಯದಲ್ಲಿ ಪಂಜಾಬ್ ಪರ ನಾಯಕ ಶ್ರೇಯಸ್ ಅಯ್ಯರ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಕೇವಲ 41 ಎಸೆತಗಳನ್ನು ಎದುರಿಸಿದ ಶ್ರೇಯಸ್ ಅಯ್ಯರ್ ಬರೊಬ್ಬರಿ 8 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ ಬರೊಬ್ಬರಿ ಅಜೇಯ 87 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಇನ್ನು ಈ ಪಂದ್ಯದಲ್ಲಿ ಐಪಿಎಲ್ ಇತಿಹಾಸದ ಹಲವು ದಾಖಲೆಗಳು ಪತನವಾಗಿದ್ದು, ಐಪಿಎಲ್ ಇತಿಹಾಸದ ಪ್ಲೇಆಫ್ ನಲ್ಲಿ ಗರಿಷ್ಟ ರನ್ ಚೇಸ್, ಗರಿಷ್ಠ ಸಿಕ್ಸರ್ ಗಳು ಸೇರಿದಂತೆ ಹಲವು ದಾಖಲೆಗಳು ಪತನವಾಗಿದೆ.
ಇನ್ನು 6 ಬಾರಿ ಐಪಿಎಲ್ ಟ್ರೋಫಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಐಪಿಎಲ್ ಇತಿಹಾಸದಲ್ಲೇ 200+ ರನ್ ಗಳಿಸಿದ್ದಾಗ ಸೋತೇ ಇರಲಿಲ್ಲ. ಆದರೆ ಇದೀಗ ಈ ದಾಖಲೆಯನ್ನೂ ಪಂಜಾಬ್ ಪತನ ಮಾಡಿದ್ದು ಮುಂಬೈ 200+ ಗಳಿಸಿದ್ದ ಪಂದ್ಯದಲ್ಲಿ ಗೆಲುವು ಸಾಧಿಸಿದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ.
ಅಂತೆಯೇ ಇದು ಐಪಿಎಲ್ ಇತಿಹಾಸದಲ್ಲೇ ಪ್ಲೇಆಫ್ ನಲ್ಲಿ ತಂಡವೊಂದರ ಗರಿಷ್ಟ ಯಶಸ್ವಿ ಚೇಸ್ ಆಗಿದೆ. ಪಂಜಾಬ್ ತಂಡ ಪ್ಲೇಆಫ್ ನಲ್ಲಿ ಗರಿಷ್ಛ ರನ್ ಚೇಸ್ ಮಾಡಿದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. ಐಪಿಎಲ್ ಇತಿಹಾಸದ ಪ್ಲೇ ಆಫ್ ಅಥವಾ ನಾಕೌಟ್ ಹಂತದ ಗರಿಷ್ಠ ರನ್ ಚೇಸ್ ಇದಾಗಿದೆ.
ಇದೇ ವೇಳೆ ಪಂಜಾಬ್ ಕಿಂಗ್ಸ್ ಐಪಿಎಲ್ ನಲ್ಲಿ ಅತೀ ಹೆಚ್ಚು ಬಾರಿ 200+ ರನ್ ಚೇಸ್ ಮಾಡಿದ ಮೊದಲ ತಂಡ ಎಂಬ ಕೀರ್ತಿಗೆ ಭಾಜನವಾಗಿದ್ದು, ಇಂದಿನ ಪಂದ್ಯವೂ ಸೇರಿದಂತೆ ಪಂಜಾಬ್ ಐಪಿಎಲ್ ನಲ್ಲಿ ಈ ವರೆಗೂ 8 ಬಾರಿ 200+ ರನ್ ಚೇಸ್ ಮಾಡಿದೆ. ಅಂತೆಯೇ ಹಾಲಿ ಐಪಿಎಲ್ 2025 ಟೂರ್ನಿಯಲ್ಲಿ 9ನೇ ಬಾರಿಗೆ 200+ ರನ್ ಚೇಸ್ ಮಾಡಿದಂತಾಗಿದೆ. ಐಪಿಎಲ್ ಇತಿಹಾಸದಲ್ಲೇ ಒಂದೇ ಸೀಸನ್ ನಲ್ಲಿ ಅತೀ ಹೆಚ್ಚು ಬಾರಿ 200+ ರನ್ ಚೇಸ್ ಆದಂತಾಗಿದೆ.