ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಸೀಸನ್ 18ರ 32ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 188 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ 188 ರನ್ ಬಾರಿಸಿ ಪಂದ್ಯವನ್ನು ಟೈ ಮಾಡಿದ್ದರು. ಆ ಬಳಿಕ ನಡೆದ ಸೂಪರ್ ಓವರ್ನಲ್ಲಿ ರಾಜಸ್ಥಾನ್ ರಾಯಲ್ಸ್ 11 ರನ್ ಗಳಿಸಿದರೆ, ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 4 ಎಸೆತಗಳಲ್ಲಿ 13 ರನ್ ಬಾರಿಸಿ ಗೆಲುವು ದಾಖಲಿಸಿತು.
ದೆಹಲಿ ವಿರುದ್ಧದ ಈ ನಿರಾಶಾದಾಯಕ ಸೋಲಿನ ನಂತರ, ನಾಯಕ ಸಂಜು ಸ್ಯಾಮ್ಸನ್ ಇದು ಖಂಡಿತವಾಗಿಯೂ ಗುರಿ ಮುಟ್ಟಬಹುದಾಗ ಟಾರ್ಗೆಟ್ ಎಂದು ಹೇಳಿ ಬ್ಯಾಟಿಂಗ್ ವಿಭಾಗದ ಬಗ್ಗೆ ಕೆಂಡಕಾರಿದ್ದಾರೆ.
‘‘ನಮ್ಮ ಬ್ಯಾಟಿಂಗ್ ಲೈನ್ಅಪ್ಗೆ ಈ ಸ್ಕೋರ್ ಅನ್ನು ಬೆನ್ನಟ್ಟುವುದು ಸುಲಭ ಎಂದು ನಾನು ಭಾವಿಸಿದೆ. ಪವರ್ಪ್ಲೇನಲ್ಲಿ ನಮಗೆ ಉತ್ತಮ ಆರಂಭ ಸಿಕ್ಕಿತು. ಇದು ಖಂಡಿತವಾಗಿಯೂ ಗುರಿ ಮುಟ್ಟಬಹುದಾಗ ಟಾರ್ಗೆಟ್ ಎಂದು ನಾನು ಭಾವಿಸಿದೆ. ಆದರೆ, ಮಿಚೆಲ್ ಸ್ಟಾರ್ಕ್ ದೆಹಲಿ ಪರ ಅದ್ಭುತ ಬೌಲಿಂಗ್ ಮಾಡಿ ಪಂದ್ಯವನ್ನು ನಮ್ಮಿಂದ ಕಸಿದುಕೊಂಡರು’’ ಎಂದು ಹೇಳಿಕೊಂಡಿದ್ದಾರೆ.
ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ದಿಕ್ಕಿನಲ್ಲಿ ಪೊರಕೆಯನ್ನು ಇಡಬಾರದು..! ಏನಾಗುತ್ತೆ ಗೊತ್ತಾ..?
ಮಾತು ಮುಂದೆವರೆಸಿದ ಸಂಜು ಸ್ಯಾಮ್ಸನ್, ‘‘ನಾವು ಬ್ಯಾಟಿಂಗ್ನಲ್ಲಿ ಖಂಡಿತವಾಗಿಯೂ ಹಿಂದುಳಿದಿದ್ದೇವೆ. ನಾವೆಲ್ಲರೂ ಮಿಚೆಲ್ ಸ್ಟಾರ್ಕ್ ಅವರ ಅದ್ಭುತ ಬೌಲಿಂಗ್ ಅನ್ನು ನೋಡಿದ್ದೇವೆ. ದೆಹಲಿಯ ಗೆಲುವಿನ ಸಂಪೂರ್ಣ ಕ್ರೆಡಿಟ್ ಅನ್ನು ನಾನು ಮಿಚೆಲ್ ಸ್ಟಾರ್ಕ್ಗೆ ನೀಡುತ್ತೇನೆ. 20 ನೇ ಓವರ್ನಲ್ಲಿ ಅವರು ಬೌಲಿಂಗ್ ಮಾಡಿದ ರೀತಿ, ಅವರು ಅಲ್ಲಿಯೇ ಪಂದ್ಯವನ್ನು ಗೆದ್ದರು. ನಾವು ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದೆವು. ನಮ್ಮ ಬೌಲರ್ಗಳು ಮತ್ತು ಫೀಲ್ಡರ್ಗಳಿಗೆ ನಾನು ಕ್ರೆಡಿಟ್ ನೀಡಲು ಬಯಸುತ್ತೇನೆ. ಮೈದಾನದಲ್ಲಿ ನಮ್ಮ ಬೌಲಿಂಗ್ ಪಡೆ ಉತ್ತಮ ಆಟ ಆಡಿದೆ’’ ಎಂದು ಹೇಳಿದರು.
ಸೂಪರ್ ಓವರ್ನಲ್ಲಿ ಸಂದೀಪ್ ಬೌಲಿಂಗ್ ಮಾಡಿದ ಬಗ್ಗೆ ಮಾತನಾಡಿದ ಸಂಜು, ‘‘ಕಳೆದ ಕೆಲವು ಬಾರಿ ಸಂದೀಪ್ ನಮಗಾಗಿ ಹಲವು ಕಷ್ಟಕರ ಓವರ್ಗಳನ್ನು ಬೌಲಿಂಗ್ ಮಾಡಿದ್ದಾರೆ ಮತ್ತು ಅವರು ಯಶಸ್ಸನ್ನು ಸಹ ಪಡೆದರು, ಆದರೆ ಈ ಪಂದ್ಯದಲ್ಲಿ ಅವರು ಪರಿಣಾಮಕಾರಿಯಾಗಿರಲಿಲ್ಲ. ಕ್ರಿಕೆಟ್ನಲ್ಲಿ ಇದು ಸಂಭವಿಸುತ್ತದೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಕಠಿಣ ಓವರ್ಗಳಲ್ಲಿ ಮಿಚೆಲ್ ಸ್ಟಾರ್ಕ್ ಉತ್ತಮ ಪ್ರದರ್ಶನ ನೀಡಿ ಪಂದ್ಯವನ್ನು ನಮ್ಮಿಂದ ಕಸಿದುಕೊಂಡರು’’ ಎಂದು ಹೇಳಿದ್ದಾರೆ.