Close Menu
Ain Live News
    Facebook X (Twitter) Instagram YouTube
    Monday, June 16
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    IPL 2025: ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಮುಂಬೈ: ಡೆಲ್ಲಿಗೆ ಮೊದಲ ಸೋಲು!

    By AIN AuthorApril 14, 2025
    Share
    Facebook Twitter LinkedIn Pinterest Email
    Demo

    ನವದೆಹಲಿ:- ಡೆಲ್ಲಿ ವಿರುದ್ಧದ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಗೆದ್ದು ಬೀಗಿದೆ. ದೆಹಲಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ 20 ಓವರ್‌ಗೆ 5 ವಿಕೆಟ್‌ ನಷ್ಟಕ್ಕೆ 205 ರನ್‌ ಗಳಿಸಿತು. 206 ರನ್‌ ಗುರಿ ಬೆನ್ನತ್ತಿದ ಡೆಲ್ಲಿ 19 ಓವರ್‌ಗೆ 193ಕ್ಕೆ ಆಲೌಟ್‌ ಆಗಿ ಮೊದಲ ಸೋಲೊಪ್ಪಿಕೊಂಡಿತು.

    ಈ ರಾಶಿಯವರು ಎಲೆಕ್ಟ್ರಿಕಲ್ ಕೆಲಸ ಹೊಂದಿದವರು ನಿರೀಕ್ಷೆಗೂ ಮೀರಿದ ಸಂಪಾದನೆ: ಸೋಮವಾರದ ರಾಶಿ ಭವಿಷ್ಯ14 ಏಪ್ರಿಲ್ 2025! 

    ಮುಂಬೈ ಪರ ತಿಲಕ್‌ ವರ್ಮಾ ಅರ್ಧಶತಕ ಗಳಿಸಿ (59 ರನ್‌, 33 ಬಾಲ್‌, 6 ಫೋರ್‌, 3 ಸಿಕ್ಸರ್)‌ ಗಮನ ಸೆಳೆದರು. ರಯಾನ್ ರಿಕೆಲ್ಟನ್ 41, ಸೂರ್ಯಕುಮಾರ್‌ ಯಾದವ್‌ 40, ನಮನ್ ಧೀರ್ 38 (ಔಟಾಗದೇ) ರನ್‌ ಗಳಿಸಿದರು. ರೋಹಿತ್‌ ಶರ್ಮಾ (18 ರನ್) ಎಂದಿನಂತೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ‌ಹಾರ್ದಿಕ್‌ ಪಾಂಡ್ಯ ಕೂಡ ಕೇವಲ 2 ರನ್‌ ಗಳಿಸಿ ಕೈಕೊಟ್ಟರು. ಅಂತಿಮವಾಗಿ ಮುಂಬೈ 5 ವಿಕೆಟ್‌ ಕಳೆದುಕೊಂಡು 205 ರನ್‌ ಗಳಿಸಿತು

    206 ರನ್‌ ಗುರಿ ಬೆನ್ನತ್ತಿದ ಡೆಲ್ಲಿಗೆ ಆರಂಭಿಕ ಆಘಾತ ಎದುರಾಯಿತು. ಮೊದಲ ಎಸೆತಕ್ಕೆ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಶೂನ್ಯ ಸುತ್ತಿ ಔಟಾಗಿ ಹೊರ ನಡೆದಿದ್ದು, ಅಭಿಮಾನಿಗಳಲ್ಲಿ ಶಾಕ್‌ ಮೂಡಿಸಿತು. ನಂತರ ಅಭಿಷೇಕ್ ಪೊರೆಲ್ ಮತ್ತು ಕರುಣ್ ನಾಯರ್ ಜೊತೆಯಾಟ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿತ್ತು. ಈ ಜೋಡಿ 61 ಬಾಲ್‌ಗೆ 119 ರನ್‌ ಗಳಿಸಿ ಉತ್ತಮ ಪ್ರದರ್ಶನ ನೀಡಿತು.

    ತಂಡದ ಮೊತ್ತ 119 ಇದ್ದಾಗ ಪೊರೆಲ್‌ (33) ಔಟಾಗಿ ಹೊರ ನಡೆದರು. ಈ ಮಧ್ಯೆ ಕರುಣ್‌ ನಾಯರ್‌ ಏಕಾಂಗಿ ಹೋರಾಟ ನಡೆಸಿದರು. 40 ಬಾಲ್‌ಗೆ 12 ಫೋರ್‌, 5 ಸಿಕ್ಸರ್‌ನೊಂದಿಗೆ 89 ರನ್‌ ಸಿಡಿಸಿ ಮಿಂಚಿದರು. ಈ ಮಧ್ಯೆ ಮಿಚೆಲ್‌ ಸ್ಯಾಂಟ್ನರ್‌ಗೆ ಕ್ಲೀನ್‌ ಬೌಲ್ಡ್‌ ಆಗಿ ಹೊರ ನಡೆದರು. ಫಿನಿಷರ್‌ ಕೆ.ಎಲ್‌.ರಾಹುಲ್‌ ಕೂಡ ಕೇವಲ 15 ರನ್‌ಗೆ ಔಟಾಗಿದ್ದು, ಡೆಲ್ಲಿ ಫ್ಯಾನ್ಸ್‌ಗೆ ಮತ್ತಷ್ಟು ಶಾಕ್‌ ನೀಡಿತು.

    ಇದಾದ ಮೇಲೆ ಯಾವೊಬ್ಬ ಬ್ಯಾಟರ್‌ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಸಾಲು ಸಾಲು ರನ್‌ ಔಟ್‌ಗಳು ಡೆಲ್ಲಿ ತಂಡಕ್ಕೆ ಸೋಲಿನ ಹಾದಿ ತೋರಿಸಿತು. ಬೌಲಿಂಗ್‌ ಮತ್ತು ಫೀಲ್ಡಿಂಗ್‌ನಲ್ಲಿ ಹಾರ್ದಿಕ್‌ ಪಾಂಡ್ಯ ಪಡೆ ಗಮನ ಸೆಳೆಯಿತು.

    Demo
    Share. Facebook Twitter LinkedIn Email WhatsApp

    Related Posts

    ಕೊಹ್ಲಿ ನನ್ನ ಜೊತೆ ಕೆಲವು ತಿಂಗಳು ಮಾತನಾಡಲಿಲ್ಲ.. ಏಕೆಂದರೆ..! ಹೀಗೆ ಹೇಳಿದ್ದು ಯಾರು ಗೊತ್ತಾ..?

    June 16, 2025

    ಗುಂಡಿಯಲ್ಲಿ ಮೊಸಳೆ ಪತ್ತೆ: ಜನರಲ್ಲಿ ಹೆಚ್ಚಿದ ಆತಂಕ!

    June 16, 2025

    ICC 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ವೇಳಾಪಟ್ಟಿ ಬಿಡುಗಡೆ: ಯಾರ ವಿರುದ್ಧ ಎಷ್ಟು ಪಂದ್ಯ ಆಡಲಿದೆ ಟೀಂ ಇಂಡಿಯಾ?

    June 15, 2025

    ಭಾರತಕ್ಕೆ ಮರಳಿರುವ ಗೌತಮ್ ಗಂಭೀರ್: ಟೀಮ್ ಇಂಡಿಯಾಗೆ ಹೊಸ ಕೋಚ್ ನೇಮಕ?

    June 15, 2025

    ಬೆಂಗಳೂರು| ಬ್ಯಾಡ್ಮಿಂಟನ್ ಕೋರ್ಟ್ ಹಾಗೂ ವಿಕ್ಟರ್ ಬ್ರ್ಯಾಂಡ್ ಸ್ಟೋರ್ ಉದ್ಘಾಟನೆ!

    June 14, 2025

    WTC Final: 27 ವರ್ಷಗಳ ಕನಸು ಕೊನೆಗೂ ನನಸು: ಚಾಂಪಿಯನ್ ​ಶಿಪ್​ ಟ್ರೋಫಿಗೆ ಮುತ್ತಿಕ್ಕಿದ ದಕ್ಷಿಣ ಆಫ್ರಿಕಾ

    June 14, 2025

    ಸೂಪರ್‌ ಸ್ಟಾರ್ ರಜನಿಕಾಂತ್‌ ಸಂಬಂಧಿ ಜೊತೆ ಎಸ್ಆರ್‌ಎಚ್‌ ಓನರ್ ಕಾವ್ಯಾ ಮಾರನ್ ಕಲ್ಯಾಣ? ‌‌

    June 14, 2025

    Cricket: ಇನ್ನುಂದೆ ಇಂತಹ ಕ್ಯಾಚ್’ಗಳಿಗೆ ಬೆಲೆ ಇಲ್ವಾ..!? ಆಟಗಾರರಿಗೆ ಬಿಗ್ ಶಾಕ್ ಕೊಟ್ಟ ICC

    June 14, 2025

    ಬೆಂಗಳೂರಿನ ಕ್ರಿಕೆಟ್ ವ್ಯವಸ್ಥೆ ಮೇಲೆ ಕೆಟ್ಟ ಹೆಸರು ಬಂದಿದೆ: ಕಾಲ್ತುಳಿತಕ್ಕೆ ಮೊಯ್ಲಿ ಅಸಮಾಧಾನ!

    June 13, 2025

    WTC Final: ವಿಮಾನ ದುರಂತ ಸಂತ್ರಸ್ಥರಿಗೆ ಕಪ್ಪು ಪಟ್ಟಿ ಧರಿಸಿ ಕ್ರಿಕೆಟಿಗರ ಸಂತಾಪ..!

    June 13, 2025

    India vs England: ತಾಯಿಗೆ ಹೃದಯಾಘಾತ: ಭಾರತಕ್ಕೆ ಮರಳಿದ ಗೌತಮ್ ಗಂಭೀರ್!

    June 13, 2025

    ENG vs IND: ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್: ಟೀಂ ಇಂಡಿಯಾ ಪ್ಲೇಯಿಂಗ್ XI.. ಕಿಂಗ್ ಕೊಹ್ಲಿ ಬದಲಿಗೆ ಯಾರು?

    June 13, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.