ಐಪಿಎಲ್ 2025 ರ 42 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಮುಖಾಮುಖಿಯಾಗಿವೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯವು ಆತಿಥೇಯ ತಂಡ ಆರ್‌ಸಿಬಿಗೆ ಅತ್ಯಂತ ಮಹತ್ವದ್ದಾಗಿದೆ ಏಕೆಂದರೆ ಈ ಸೀಸನ್‌ನಲ್ಲಿ ತವರಿನ ಹೊರಗೆ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ಈ ತಂಡವು ತನ್ನದೇ ಆದ ನೆಲದಲ್ಲಿ ಪದೇ ಪದೇ ವಿಫಲವಾಗುತ್ತಿದೆ. ಬೆಂಗಳೂರು ತಂಡ ತವರಿನಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋತಿದ್ದು, ಈ ಆವೃತ್ತಿಯಲ್ಲಿ ಇನ್ನೂ ತವರಿನಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಪಂದ್ಯ ರಜತ್ ಪಡೆಗೆ ಮುಖ್ಯವಾಗಿದೆ.
ಮೊದಲಿಗೆ ತವರಲ್ಲೇ ಟಾಸ್ ಸೋಲುತ್ತಿರುವ ರಜತ್ ಅವರು ಇಂದು ಕೂಡ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಸಜ್ಜಾಗಿದ್ದಾರೆ. ಅದರಂತೆ ಟಾಸ್ ಗೆದ್ದಿರುವ ರಾಜಸ್ಥಾನ್ ಮೊದಲು ಬೌಲಿಂಗ್ ಮಾಡಲಿದ್ದಾರೆ.
2025ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಆದರೆ ಆರ್ ಸಿಬಿಗೆ ತವರು ಮೈದಾನ ಅಂದ್ರೆ ಚಿನ್ನಸ್ವಾಮಿ ಕ್ರೀಡಾಂಗಣ ಯಾಕೋ ಸವಾಲಾಗಿ ಪರಿಣಮಿಸಿದಂತೆ ಕಾಣುತ್ತಿದೆ. ಬೇರೆ ರಾಜ್ಯಕ್ಕೆ ಹೋಗಿ ಅಲ್ಲಿ ಗೆದ್ದು ಬರುವ ಆರ್ ಸಿಬಿಗೆ ಚಿನ್ನಸ್ವಾಮಿ ಸ್ಟೇಡಿಯಂ ಮಾತ್ರ ಕಬ್ಬಿಣದ ಕಡಲೆಯಾಗಿದೆ.
ಎಸ್, ಇದುವರೆಗೂ 8 ಪಂದ್ಯಗಳನ್ನು ಆಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು, 5 ರಲ್ಲಿ ಗೆಲುವು ದಾಖಲಿಸಿ ಮೂರರಲ್ಲಿ ಸೋಲು ಕಂಡಿದೆ. ಸೋತಿರುವ ಪಂದ್ಯಗಳೆಲ್ಲವೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಂಬುವುದು ಗಮನಾರ್ಹ. ಹೀಗಾಗಿ ಇದುವರೆಗೂ ಚಿನ್ನಸ್ವಾಮಿಯಲ್ಲಿ ಗೆಲುವನ್ನೇ ಕಾಣದ ಆರ್‌ಸಿಬಿಗೆ ಇಂದು ಆರ್ಆರ್ ವಿರುದ್ಧ ಗೆಲ್ಲೋದು ಕೂಡ ಟಫ್ ಚಾಲೆಂಜ್ ಆಗಿದೆ.
ಎಸ್, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಸಂಜೆ 7.30ಕ್ಕೆ ಬೆಂಗಳೂರು ಮತ್ತು ರಾಜಸ್ಥಾನ್ ತಂಡಗಳು ಸೆಣಸಾಟ ನಡೆಸಲಿವೆ. ಎರಡೂ ತಂಡಗಳು ಪ್ಲೇ-ಆಫ್ ಕನಸು ಕಾಣುತ್ತಿದ್ದು, ಗೆಲುವು ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ. ಪ್ಲೇ-ಆಫ್ಗೆ ಹೋಗಬೇಕು ಅಂದ್ರೆ ಆರ್ಸಿಬಿ ಇವತ್ತಿನ ಪಂದ್ಯ ಗೆಲ್ಲಲೇಬೇಕಿದೆ. ಈಗಾಗಲೇ 8 ಪಂದ್ಯಗಳಲ್ಲಿ ಐದು ಗೆದ್ದಿರುವ ಆರ್ಸಿಬಿ, ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
ಚಿನ್ನಸ್ವಾಮಿಯಲ್ಲಿ ಮೂರು ಪಂದ್ಯಗಳಲ್ಲಿ ಸೋತಿರುವ ಆರ್ಸಿಬಿ ಮೇಲೆ ಫ್ಯಾನ್ಸ್ ಕೊಂಚ ಬೇಸರಗೊಂಡಿದ್ದಾರೆ. ತವರು ಮೈದಾನದಲ್ಲಿ ಸಂಪೂರ್ಣ ಬೆಂಬಲ ಸಿಕ್ಕರೂ, ಹೋಂ ಅಡ್ವಾಂಟೇಜ್ ಪಡೆದುಕೊಳ್ಳುವಲ್ಲಿ ಆಟಗಾರರು ಫೇಲ್ ಆಗ್ತಿದ್ದಾರೆ. ಕಠಿಣ ಪರಿಸ್ಥಿಯಲ್ಲೂ ಹೋರಾಡುವ ವಿರಾಟ್ ಕೊಹ್ಲಿ ಮೇಲೆ ಅಭಿಮಾನಿಗಳು ಭರವಸೆ ಇಟ್ಟಿದ್ದು, ಇಂದಾದರೂ ಗೆಲುವು ತಂದುಕೊಡ್ತಾರಾ ಕಾದು ನೋಡಬೇಕಿದೆ.