ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಐಪಿಎಲ್ 2025ರ 28ನೇ ಪಂದ್ಯ ಇಂದು ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.
ಈ ರಾಶಿಯವರು ಎಷ್ಟೇ ಪ್ರಯತ್ನಿಸಿದರು ಮದುವೆ ವಿಳಂಬವಾಗುತ್ತಿದೆ ಏಕೆ?ಭಾನುವಾರದ ರಾಶಿ ಭವಿಷ್ಯ 13 ಏಪ್ರಿಲ್ 2025!
ತವರಿನ ಹೊರಗೆ ಆಡಿದ ಮೂರು ಪಂದ್ಯಗಳನ್ನು ಗೆದ್ದಿರುವ ರಜತ್ ಪಡೆ ತವರಿನಲ್ಲಿ ನಡೆದಿರುವ ಎರಡು ಪಂದ್ಯಗಳಲ್ಲಿ ಸೋತಿದೆ. ಕಳೆದ ಪಂದ್ಯದಲ್ಲಿ ಆರ್‌ಸಿಬಿ ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತಮ್ಮ ತವರು ಮೈದಾನ ಎಂ ಚಿನ್ನಸ್ವಾಮಿಯಲ್ಲಿ ಸೋಲು ಅನುಭವಿಸಿತ್ತು. ಹೀಗಾಗಿ ಸೋಲಿನ ಆಘಾತದಲ್ಲಿರುವ ಆರ್‌ಸಿಬಿ ಇದೀಗ ರಾಜಸ್ಥಾನ್ ರಾಯಲ್ಸ್ ತಂಡವನ್ನು ಅವರ ತವರು ಮೈದಾನದಲ್ಲಿ ಎದುರಿಸಲು ಸಜ್ಜಾಗಿದೆ. ಈ ಪಂದ್ಯವನ್ನು ಆರ್‌ಸಿಬಿ, ರಾಜಸ್ಥಾನ್ ತಂಡದ ತವರು ಮೈದಾನದಲ್ಲಿ ಆಡುತ್ತಿರುವ ಕಾರಣ, ಗೆಲುವಿನ ಫೇವರೇಟ್ ಎನಿಸಿಕೊಂಡಿದೆ.
ಈಗಾಗಲೇ ಐದು ಪಂದ್ಯಗಳನ್ನು ಆಡಿರುವ ಬೆಂಗಳೂರು ಪಡೆ 3ರಲ್ಲಿ ಗೆದ್ದು ಎರಡರಲ್ಲಿ ಸೋಲು ಕಂಡಿದೆ. ಅದರಲ್ಲೂ ಬುಧವಾರ ನಡೆದಿದ್ದ ತವರು ಮೈದಾನದಲ್ಲಿ ಡೆಲ್ಲಿ ವಿರುದ್ಧ ಸೋಲನ್ನು ಕಂಡಿರುವ ಆರ್‌ಸಿಬಿ ಇದೀಗ ರಾಜಸ್ಥಾನ ಮಣಿಸಿ ಮೂರನೇ ಸ್ಥಾನಕ್ಕೆರಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ಬಲಿಷ್ಠ ತಂಡದೊಂದಿಗೆ ಮೈದಾನಕ್ಕಿಳಿಯಲು ಸಜ್ಜಾಗಿದೆ.
ಇಂದಿನ ಪಂದ್ಯಕ್ಕಾಗಿ ಆರ್‌ಸಿಬಿ ತಂಡ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಇದೆ. ಹೌದು, ಸತತ ಎರಡು ಪಂದ್ಯಗಳಲ್ಲಿ ಫ್ಲಾಪ್ ಆಗಿರುವ ಸ್ಟಾರ್ ಆಟಗಾರನನ್ನು ಈ ಪಂದ್ಯದಿಂದ ಹೊರಗಿಡುವ ಸಾಧ್ಯತೆ ದಟ್ಟವಾಗಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿರುವ ಲಿವಿಂಗ್ಸ್ಟೋನ್ ಮುಂಬೈ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಶೂನ್ಯಕ್ಕೆ ಪೆವಿಲಿಯನ್ ಸೇರಿ ನಿರಾಸೆ ಮೂಡಿಸಿದ್ದರು.
ಬುಧವಾರ ತವರು ಮೈದಾನದಲ್ಲಿ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಾದರೂ ತಂಡಕ್ಕೆ ಆಸರೆ ಆಗುತ್ತಾರೆ ಎಂದುಕೊಂಡಿದ್ದ ಫ್ಯಾನ್ಸ್ಗಳಿಗೆ ಮತ್ತೆ ನಿರಾಸೆ ಮೂಡಿಸಿದ್ದರು. ಸಂಕಷ್ಟದಲ್ಲಿದ್ದ ತಂಡಕ್ಕೆ ಕೈ ಹಿಡಿಯದ ಲಿವಿಂಗ್ಸ್ಟೋನ್ 6 ಎಸೆತಗಳನ್ನು ಆಡಿ ಕೇವಲ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇದರಿಂದಾಗಿ ತಂಡ ಅಲ್ಪಮೊತ್ತಕ್ಕೆ ಕುಸಿಯಿವುದರ ಜೊತೆಗೆ ಸೋಲು ಕಂಡಿತು.
ಇದೀಗ ಮುಂದಿನ ಪಂದ್ಯಕ್ಕೆ ಲಿವಿಂಗ್ಸ್ಟೋನ್ ಅವರನ್ನು ಹೊರಗಿಡುವ ಸಾಧ್ಯತೆ ಇದೆ. ಇವರ ಸ್ಥಾನಕ್ಕೆ ಜೇಕಬ್ ಬೆಥೆಲ್ ಅವರನ್ನು ಆಡಿಸುವು ಬಗ್ಗೆ ಚಿಂತಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಆರ್‌ಸಿಬಿ ಹಾಗೂ ರಾಜಸ್ಥಾನ್ ನಡುವಿನ ಐಪಿಎಲ್ 28ನೇ ಪಂದ್ಯ ಮಧ್ಯಾಹ್ನ 3:30 ಕ್ಕೆ ಆರಂಭವಾಗಲಿದೆ. ಟಾಸ್ 3 ಗಂಟೆಗೆ ನಡೆಯಲಿದೆ. ಆರ್‌ಸಿಬಿ ಇದುವರೆಗೆ ಆಡಿರುವ 5 ಪಂದ್ಯಗಳು ರಾತ್ರಿ ಪಂದ್ಯಗಳಾಗಿದ್ದವು. ಆದರೆ ಇದೇ ಮೊದಲ ಬಾರಿಗೆ ಆರ್‌ಸಿಬಿ ಮಧ್ಯಾಹ್ನದ ಪಂದ್ಯವನ್ನು ಆಡಲಿದೆ.
ಆರ್‌ಸಿಬಿ ಹಾಗೂ ರಾಜಸ್ಥಾನ್ ನಡುವಿನ ಐಪಿಎಲ್ 28ನೇ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಹಾಗೂ ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಿಸಬಹುದಾಗಿದೆ.