IPL 2025ರ ಟೂರ್ನಿ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯ ಆಗಲಿದೆ. ಈಗಾಗಲೇ ಮೂರು ತಂಡಗಳು ಪ್ಲೇ ಆಫ್ ಗೆ ಕಾಲಿಟ್ಟಿದ್ದು, ನಾಲ್ಕನೇ ಸ್ಥಾನಕ್ಕಾಗಿ ಎರಡು ತಂಡಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ.
ನಮ್ಮ ಸಶಸ್ತ್ರ ಪಡೆಗಳ ಧೈರ್ಯಕ್ಕೆ ಖರ್ಗೆ ಅವಮಾನ ಮಾಡಿದ್ದಾರೆ: ವಿಜಯೇಂದ್ರ ವಾಗ್ದಾಳಿ!
ಐಪಿಎಲ್ 2025 ಫೈನಲ್ ಪಂದ್ಯ ನಡೆಯುವ ಸ್ಥಳವನ್ನು ಘೋಷಿಸಲಾಗಿದೆ. ಅಂತಿಮ ಪ್ರಶಸ್ತಿ ಕಾದಾಟ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಲ್ಲಿಯೇ ಕ್ವಾಲಿಫೈಯರ್ 2 ಪಂದ್ಯವನ್ನು ಆಯೋಜಿಸಲಿದೆ. ಮತ್ತೊಂದೆಡೆ ಕೆಟ್ಟ ಹವಾಮಾನದಿಂದಾಗಿ, ಆರ್‌ಸಿಬಿ ಮತ್ತು ಸನ್‌ರೈಸರ್ಸ್ ನಡುವಿನ ಪಂದ್ಯವನ್ನು ಲಕ್ನೋಗೆ ಸ್ಥಳಾಂತರಿಸಲಾಗಿದೆ. ಇಂದಿನಿಂದ ಉಳಿದ ಎಲ್ಲ ಪಂದ್ಯಗಳಿಗೆ ಒಂದು ಗಂಟೆ ಹೆಚ್ಚುವರಿ ಸಮಯ ನೀಡಲಾಗುವುದು ಎಂದುಕೂಡ ಬಿಸಿಸಿಐ ಹೇಳಿದೆ. ಲೀಗ್ ಹಂತದ 70 ಪಂದ್ಯಗಳ ನಂತರ ಪ್ಲೇಆಫ್ ನಡೆಯಲಿದೆ. ಮೊದಲ ಅರ್ಹತಾ ಪಂದ್ಯವು ಮೇ 29 ರಂದು ನ್ಯೂ ಚಂಡೀಗಢದ ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಅಗ್ರ ಎರಡು ತಂಡಗಳ ನಡುವೆ ನಡೆಯಲಿದೆ. ಇದರ ನಂತರ, ಮೇ 30 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು ಎರಡನೇ ಕ್ವಾಲಿಫೈಯರ್ ಮತ್ತು ಅಂತಿಮ ಪಂದ್ಯವನ್ನು ಆಯೋಜಿಸಲಿದೆ. ಜೂನ್ 1 ರಂದು ಕ್ವಾಲಿಫೈಯರ್ 2 ನಡೆಯಲಿದೆ. ಈ ಪಂದ್ಯವು ಕ್ವಾಲಿಫೈಯರ್ 1 ರಲ್ಲಿ ಸೋತ ತಂಡ ಮತ್ತು ಎಲಿಮಿನೇಟರ್ ಗೆದ್ದ ತಂಡದ ನಡುವೆ ನಡೆಯಲಿದೆ. ಜೂನ್ 3 ರಂದು ಅಂತಿಮ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಐಪಿಎಲ್ 18 ನೇ ಸೀಸನ್‌ನ ವಿಜೇತರು ಯಾರು ಎಂಬುದು ನಿರ್ಧಾರ ಆಗಲಿದೆ.