ಇಂಡಿಯನ್ ಪ್ರೀಮಿಯರ್ ಲೀಗ್ನ ಮಹಾಸಮರಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇಂದು ನಡೆಯಲಿರುವ ಐಪಿಎಲ್ ಸೀಸನ್-18ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆ.
ಆರ್ಸಿಬಿಯ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ ಪಂಜಾಬ್ ಫ್ರಾಂಚೈಸಿ ವಿರುದ್ಧ ಪ್ರಶಸ್ತಿ ಹಣಾಹಣಿಯಲ್ಲಿ ಆಡೋದು ಅನುಮಾನವಿದೆ. ಏಕೆಂದರೆ ಅವರು ತಮ್ಮ ಮಗುವಿನ ಜನನದ ನಿರೀಕ್ಷೆಯಲ್ಲಿದ್ದಾರೆ. ಅಂತಿಮ ಪಂದ್ಯದ ಮುನ್ನಾದಿನದಂದು RCB ಯ ತರಬೇತಿ ಅವಧಿಯಲ್ಲಿ ಫಿಲ್ ಸಾಲ್ಟ್ ಕಾಣಿಸದೆ ಇರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.
ದೇಹಕ್ಕೆ ಒಳ್ಳೆಯದು ಅಂತ ಹೆಚ್ಚು ಖರ್ಜೂರ ತಿನ್ನೋ ಮುನ್ನ ಹುಷಾರ್! ಈ ಭಾಗಕ್ಕೆ ಹಾನಿಕಾರಕ!
ಅಹಮದಾಬಾದ್ನ ಅಂತರಾಷ್ಟ್ರೀಯ ಮೈದಾನದಲ್ಲಿ ಆರ್ಸಿಬಿ ಆಟಗಾರರು ಈಗಾಗಲೇ ಪ್ರಾಕ್ಟೀಸ್ ಮಾಡಿದ್ದಾರೆ. ಫೈನಲ್ ಪಂದ್ಯ ಆರಂಭಕ್ಕೂ ಎರಡು ದಿನ ಆಟಗಾರರೆಲ್ಲಾ ಅಭ್ಯಾಸ ಮಾಡಿದ್ದಾರೆ. ಆರ್ಸಿಬಿ ಆಟಗಾರರು ಅಭ್ಯಾಸ ಮಾಡುವಾಗ ಫಿಲ್ ಸಾಲ್ಟ್ ಅವರು ಕಾಣಿಸಿಲ್ಲ ಎಂದು ಹೇಳಲಾಗಿದೆ. ತಂಡದ ಜೊತೆಗೆ ಅವರು ಇಲ್ಲ, ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಎಲ್ಲಿಯೋ ಅಧಿಕೃತ ಮಾಹಿತಿ ಇಲ್ಲ.