ಕೋಲಾರ: ಗುಜರಾತ್ನ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮಧ್ಯೆ ಫೈನಲ್ ಹಣಾಹಣಿ ನಡೆಯಲಿದೆ.
ಕಪ್ ಗೆಲ್ಲುವ ನಿಚ್ಚಿನ ತಂಡವಾಗಿರುವ ಆರ್‌ಸಿಬಿಗೆ ಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ. ಅದರಂತೆ ಕೋಲಾರದಲ್ಲಿ Rcb ಗೆಲುವಿಗಾಗಿ ಅಭಿಮಾನಿಗಳಿಂದ ಕೋಲಾರ ನಗರದ ಶಕ್ತಿ ದೇವತೆ ಕೋಲಾರಮ್ಮಗೆ ವಿಶೇಷ ಪೂಜೆ ಮಾಡಲಾಯಿತು.
ಕೋಲಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಶುಭ ಹಾರೈಸಿದ್ದು, ಈ ಸಲ ಕಪ್ ನಮ್ದೆ ಎಂದು ಘೋಷಣೆ ಕೂಗಿ, ಗೆದ್ದು ಬಾ ಆರ್ ಸಿಬಿ ಎಂದು ಶುಭ ಹಾರೈಸಿದ್ದಾರೆ.