ಪಹಲ್ಗಾಮ್ ದಾಳಿಯ ನಂತರ ಭಾರತ-ಪಾಕಿಸ್ತಾನದ ನಡುವೆ ಉದ್ವಿಗ್ನತೆ ಸ್ಥಿತಿ ನಿರ್ಮಾಣವಾಗಿದೆ. ಇದರೊಂದಿಗೆ ಉಭಯ ದೇಶಗಳ ಕ್ರಿಕೆಟ್ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಾವಳಿಯ ಕನಸು ಭಗ್ನವಾಗಿದೆ. ಆದರೆ ಇದೆಲ್ಲದರ ನಡುವೆ ಪಾಕಿಸ್ತಾನದ ವೇಗಿ ಮೊಹಮ್ಮದ್ ಆಮಿರ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.
ಭಯೋತ್ಪಾದಕರ ವಿರುದ್ಧ ಕೇಂದ್ರ ಸರ್ಕಾರ ಮುಲಾಜಿಲ್ಲದ ಕ್ರಮ ಕೈಗೊಳ್ಳಲಿ – ಶಾಸಕ ಕೆ.ಎಂ.ಉದಯ್
ಎಸ್, ಪಾಕಿಸ್ತಾನದ ವೇಗಿ ಮೊಹಮ್ಮದ್ ಆಮಿರ್ ಅವರು ಮುಂದಿನ ವರ್ಷದಿಂದ IPL ಆಡುತ್ತೇನೆ ಎಂದು ಹೇಳಿಕೆ ಕೊಟ್ಟಿದ್ದಾರೆ. ನಾನು ಬ್ರಿಟಿಷ್ ಪೌರತ್ವವನ್ನು ಹೊಂದಿರುವುದರಿಂದ ಮುಂದಿನ ವರ್ಷ ಐಪಿಎಲ್ ಆಡಬಹುದು ಎಂದು ಅಮಿರ್ ಹೇಳಿದ್ದಾರೆ. ಅಲ್ಲದೆ ಪಿಎಸ್ಎಲ್ ಅಥವಾ ಐಪಿಎಲ್ ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಅವಕಾಶ ಸಿಕ್ಕರೆ, ನಾನು ನಿಸ್ಸಂಶಯವಾಗಿ ಐಪಿಎಲ್ ಅನ್ನು ಆಯ್ಕೆ ಮಾಡುತ್ತೇನೆ ಎಂದು ಆಮಿರ್ ಹೇಳಿಕೊಂಡಿದ್ದಾರೆ.
ಮುಂದಿನ ವರ್ಷ ಪಿಎಸ್‌ಎಲ್ ಮತ್ತು ಐಪಿಎಲ್ ವೇಳಾಪಟ್ಟಿಯಲ್ಲಿ ಘರ್ಷಣೆ ಇರುತ್ತದೆ ಎಂದು ನಾನು ಭಾವಿಸುವುದಿಲ್ಲ. ಏಕೆಂದರೆ ಈ ಬಾರಿ ಚಾಂಪಿಯನ್ಸ್ ಟ್ರೋಫಿ ಮತ್ತು ಇತರ ವಿಷಯಗಳು ಇದ್ದವು. ಆದರೆ ನಾನು ಪಿಎಸ್‌ಎಲ್‌ನಲ್ಲಿ ಮೊದಲು ಆಯ್ಕೆಯಾದರೆ ನನ್ನ ಹೆಸರನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಐಪಿಎಲ್, ಪಿಎಸ್ಎಲ್ಗಿಂತ ಬೇಗ ನಡೆದರೆ ನಾನು ಆ ಪಂದ್ಯಾವಳಿಯಲ್ಲಿ ಆಡುತ್ತೇನೆ. ಒಟ್ಟಾರೆಯಾಗಿ, ನನಗೆ ಎಲ್ಲಿ ಅವಕಾಶ ಸಿಕ್ಕಿತೋ ಅಲ್ಲಿ ಮೊದಲು ಆಡುತ್ತೇನೆ ಎಂದಿದ್ದಾರೆ.
ಪ್ರಸ್ತುತ PSL 2025 ರಲ್ಲಿ ಆಡುತ್ತಿರುವ ಮೊಹಮ್ಮದ್ ಅಮೀರ್ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಭಾಗವಾಗಿದ್ದಾರೆ. ಈ ನಡುವೆ ಜಿಯೋ ನ್ಯೂಸ್ ಜೊತೆಗಿನ ಸಂಭಾಷಣೆಯಲ್ಲಿ, ಆಮಿರ್ ಅವರನ್ನು ಪಿಎಸ್ಎಲ್ ಅಥವಾ ಐಪಿಎಲ್‌ನಲ್ಲಿ ಆಡಲು ಬಯಸುತ್ತೀರಾ ಎಂದು ಕೇಳಲಾಯಿತು. ಈ ಎರಡೂ ಪಂದ್ಯಾವಳಿಗಳು ಒಂದೇ ಸಮಯದಲ್ಲಿ ನಡೆದರೆ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ? ಎಂಬ ಪ್ರಶ್ನೆ ಕೇಳಲಾಯಿತು. ಈ ಬಗ್ಗೆ ಉತ್ತರಿಸಿದ ಆಮಿರ್, ಐಪಿಎಲ್‌ನಲ್ಲಿ ಮಾತ್ರ ಆಡುವುದಾಗಿ ಹೇಳಿದರು. ‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಐಪಿಎಲ್‌ನಲ್ಲಿ ಅವಕಾಶ ಸಿಕ್ಕರೆ, ನಾನು ಅಲ್ಲಿ ಆಡುತ್ತೇನೆ’ ಎಂದು ಆಮಿರ್ ಹೇಳಿದರು. ನಾನು ಇದನ್ನು ಬಹಿರಂಗವಾಗಿ ಹೇಳುತ್ತಿದ್ದೇನೆ ಆದರೆ ಅವಕಾಶ ಸಿಗದಿದ್ದರೆ ಪಿಎಸ್‌ಎಲ್‌ನಲ್ಲಿ ಆಡುತ್ತೇನೆ ಎಂದರು