ಕನ್ನಡದ ನಟಿ ಅರ್ಚನಾ ಕೊಟ್ಟಿಗೆ ಹಾಗೂ ಕ್ರಿಕೆಟರ್ ಶರತ್ ಬಿಆರ್ ತಮ್ಮ ಎಂಟು ವರ್ಷದ ಪ್ರೀತಿಗೆ ಮದುವೆ ಮುದ್ರೆ ಒತ್ತಿದ್ದಾರೆ. ಇಂದು ಈ ಜೋಡಿ ಅದ್ಧೂರಿಯಾಗಿ ಖಾಸಗಿ ರೆಸಾರ್ಟ್ ನಲ್ಲಿ ಹೊಸ ಬಾಳಿಗೆ ಕಾಲಿಟ್ಟಿದೆ. ಅರ್ಚನಾ ಕೊಟ್ಟಿಗೆ ಹಾಗೂ ಶರತ್ ವಿವಾಹೋತ್ಸವಕ್ಕೆ ಸ್ಯಾಂಡಲ್ ವುಡ್ ಸ್ಟಾರ್ಸ್ ಹಾಗೂ ಕ್ರಿಕೆಟರ್ಸ್ ಭಾಗಿಯಾಗಿ ಶುಭ ಹಾರೈಸಿದ್ದಾರೆ.
ನಿನ್ನೆ ನಡೆದ ಅದ್ಧೂರಿ ಆರತಕ್ಷತೆಯಲ್ಲಿ ಆರ್ ಬಿಸಿಯಲ್ಲಿ ಮಿಂಚುತ್ತಿರುವ ದೇವದತ್ ಪಡಿಕಲ್, ಗುಜರಾತ್ ಟೈಟನಲ್ಲಿ ಅಬ್ಬರಿಸುತ್ತಿರುವ ಪ್ರಸಿದ್ಧ್ ಕೃಷ್ಣ, ಕ್ರಿಕೆಟರ್ ಶುಭಮನ್ ಹೆಗ್ಡೆ, ವೈಶಾಕ್ ವಿಜಯ್ ಕುಮಾರ್, ಆರ್ ಸಮರ್ಥ್, ಎಸ್ ವಿ ಸಿದ್ದಾರ್ಥ್ ಸೇರಿದಂತೆ ಹಲವರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.
2018ರ ‘ಅರಣ್ಯಕಾಂಡ’ ಸಿನಿಮಾ ಅರ್ಚನಾ ಕೊಟ್ಟಿಗೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ‘ವಾಸು ನಾನ್ ಪಕ್ಕಾ ಕಮರ್ಷಿಯಲ್’, ‘ಡಿಯರ್ ಸತ್ಯ’, ‘ತ್ರಿಬಲ್ ರೈಡಿಂಗ್’ ರೀತಿಯ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದಾರೆ.
ಕ್ರಿಕೆಟರ್ ಶರತ್ 2024ರಲ್ಲಿ ಅವರು ಜಿಟಿ ಪರ ಆಡಿದರು. ಇದು ಅವರ ಮೊದಲ ಐಪಿಎಲ್ ಸೀಸನ್. ಶರತ್ ಹಾಗೂ ಅರ್ಚನಾ ಒಂದೇ ಕಾಲೇಜ್ನಲ್ಲಿ ಓದಿದ್ದರು. ಆ ಬಳಿಕ ಸ್ನೇಹ ಬೆಳೆಯಿತು. ಸ್ನೇಹ ಪ್ರೀತಿಯಾಗಿ ಇಂದು ಈ ಜೋಡಿ ಏಳು ಹೆಜ್ಜೆ ಇಟ್ಟು ಸತಿ ಪತಿಗಳಾಗಿದ್ದಾರೆ.