ಭಾರತ ಮತ್ತ ಪಾಕ್ ನಡುವೆ ಯುದ್ಧದ ಭೀತಿ ಮುಂದುವರೆದಿದೆ. ಪಾಪಿ ಪಾಕಿಸ್ತಾನಕ್ಕೆ ಭಾರತೀಯ ಸೇನೆ ದಿಟ್ಟ ಉತ್ತರ ಕೊಡುತ್ತಿದೆ. ಪಾಕ್ ಬುಡವನ್ನೇ ಅಲುಗಾಡಿಸುತ್ತಿದೆ. ಇಂಡೋ-ಪಾಕ್ ನಡುವೆ ಪರಿಸ್ಥಿತಿ ಉದ್ವಿಗ್ನ ಸ್ಥಿತಿಯಲ್ಲಿರುವುದರಿಂದ ಐಪಿಎಲ್ ಸೀಸನ್1-18ನ್ನು ಬಿಸಿಸಿಐ, ಅನಿರ್ದಿಷ್ಟಾವಧಿಗೆ ರದ್ದು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.
ಐಪಿಎಲ್ ಸೀಸನ್-18 ಈಗಾಗಲೇ ಕೊನೆ ಹಂತಕ್ಕೆ ತಲುಪಿತ್ತು. ಆದರೆ ಅಷ್ಟರಲ್ಲಿ ಭಾರತ-ಪಾಕಿಸ್ತಾನ ನಡುವೆ ಸಂಘರ್ಷ ಆರಂಭವಾಯಿತು. ಗಡಿಯಲ್ಲಿ ಪರಿಸ್ಥಿತಿ ಇರುವಾಗ ಪಂದ್ಯಾವಳಿ ಮುನ್ನಡೆಸುವುದು ಸೂಕ್ತವಲ್ಲ ಎಂಬ ಮಾತು ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಇಡೀ ಪಂದ್ಯಾವಳಿಯನ್ನೇ ಅನಿರ್ದಿಷ್ಟಾವಧಿಗೆ ರದ್ದುಗೊಳಿಸಿ ಬಿಸಿಸಿಐ ನಿರ್ಣಯ ಪ್ರಕಟಿಸಿದೆ.
ಸೇನೆಗೆ ಕೊಹ್ಲಿ ಜೈ ಹಿಂದ್!
ಐಪಿಎಲ್ ಟೂರ್ನಮೆಂಟ್ ಸ್ಥಗಿತಗೊಂಡ ಬೆನ್ನಲ್ಲೆ ವಿರಾಟ್ ಕೊಹ್ಲಿ ಭಾರತೀಯ ಸೇನೆಗೆ ಜೈ ಹಿಂದ್ ಎಂದಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅವರು, ಈ ಕಷ್ಟದ ಸಮಯದಲ್ಲಿ ನಮ್ಮ ದೇಶವನ್ನು ಉಗ್ರರಿಂದ ರಕ್ಷಿಸಿದ್ದಕ್ಕಾಗಿ ನಾವು ನಮ್ಮ ಸಶಸ್ತ್ರ ಪಡೆಗಳೊಂದಿಗೆ ಒಗ್ಗಟ್ಟಿನಿಂದ ನಿಲ್ಲುತ್ತೇವೆ ಮತ್ತು ಅವರಿಗೆ ನಮಸ್ಕರಿಸುತ್ತೇವೆ. ನಮ್ಮ ವೀರರ ಅಚಲ ಧೈರ್ಯ ಮತ್ತು ಅವರು ಮತ್ತು ಅವರ ಕುಟುಂಬಗಳು ನಮ್ಮ ಮಹಾನ್ ರಾಷ್ಟ್ರಕ್ಕಾಗಿ ಮಾಡುವ ತ್ಯಾಗಗಳಿಗೆ ನಾವು ಸದಾ ಕೃತಜ್ಞರಾಗಿರುತ್ತೇವೆ ಜೈ ಹಿಂದ್ ಬರೆದುಕೊಂಡಿದ್ದಾರೆ.
ಇಂದು ನಡೆಯಬೇಕಿದ್ದ ಆರ್‌ಸಿಬಿ-ಲಕ್ನೋ ಮ್ಯಾಚ್!
ಇಂದು ಲಕ್ನೋದಲ್ಲಿ ಆರ್‌ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಪಂದ್ಯ ನಡೆಯಬೇಕಿತ್ತು. ಆದರೆ ಭಾರತ-ಪಾಕ್ ಸಂಘರ್ಷದ ಮಧ್ಯೆ IPL ಟೂರ್ನಿಯನ್ನು ಬಿಸಿಸಿಐ ಅಮಾನತುಗೊಳಿಸಿದೆ. ಉಳಿದ ಐಪಿಎಲ್ ಪಂದ್ಯಗಳ ದಿನಾಂಕವನ್ನು ಸದ್ಯದಲ್ಲೇ ಘೋಷಣೆ ಮಾಡುವ ಸಾಧ್ಯತೆ ಇದೆ. ಆದರೆ ಸದ್ಯಕ್ಕೆ ದೇಶದ ಭದ್ರತೆ ಹಾಗೂ ಸೇನೆಗೆ ಗೌರವ ನೀಡುವ ಅನಿವಾರ್ಯ ಪರಿಸ್ಥಿತಿಯಲ್ಲಿ ಐಪಿಎಲ್ ಹಾಗೂ ಆರ್‌ಸಿಬಿ ಅಭಿಮಾನಿಗಳಿಗೆ ನಿರಾಸೆ ಕಾದಿದೆ.