ಬೆಂಗಳೂರು:– ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಗೆ ಇಡೀ ಭಾರತ ಬೆಚ್ಚಿಬಿದ್ದಿದೆ. ಉಗ್ರರ ಬೇರನ್ನು ಬುಡಸಮೇತ ಕಿತ್ತು ಹಾಕಬೇಕು ಎಂದು ಸಮಸ್ತ ಭಾರತೀಯರು ಅವುಡುಗಚ್ಚಿ ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಮತ್ತೊಂದೆಡೆ ಕೇಂದ್ರದ ಘಟಾಘಟಿ ನಾಯಕರು ಪ್ರತಿಕಾರದ ಮಾತುಗಳನ್ನು ಆಡುತ್ತಿದ್ದಾರೆ. ಇದರಿಂದ ಯುದ್ಧದ ಕಾರ್ಮೋಡ ಆವರಿಸಿದೆ. ಅಷ್ಟೇ ಯಾಕೆ ಪಾಕ್ ಮೇಲೆ ಕೇಂದ್ರ ಹಲವು ಕಟ್ಟುನಿಟ್ಟಾದ ಕ್ರಮ ಕೈಗೊಂಡಿದ್ದು, ಅದರಲ್ಲಿ ಸಿಂಧೂ ಕೂಡ ಒಂದು.
ಸಿದ್ದರಾಮಯ್ಯ ಈಗ World ಫೇಮಸ್: ಪಾಕ್ ಮಾಧ್ಯಮಗಳಲ್ಲಿ ಮಿಂಚಿದ ಕರ್ನಾಟಕ ಸಿಎಂ!
ಹಾಗಿದ್ರೆ ಪಾಕಿಸ್ತಾನಕ್ಕೆ ನೀರು ನಿಲ್ಲಿಸೋದು ನಿಜಕ್ಕೂ ಸುಲಭನಾ? ಸಾವಿರಾರು ಕಿ.ಮೀ ಹರಿಯೋ ಸಿಂಧೂ ತಡೆಯೋ ಸಾಮಾರ್ಥ್ಯ ಭಾರತಕ್ಕಿದೀಯಾ? ಪಾಕಿಸ್ತಾನ ವಿರುದ್ಧ ನೀರಿನ ಯುದ್ಧ ಹೇಗೆ? ಇದೆಲ್ಲದರ ವಾಸ್ತವತೆಯನ್ನು ನೀರಾವರಿ ತಜ್ಞ ಕ್ಯಾಪ್ಟನ್ ರಾಜಾರಾವ್ ಬಿಚ್ಚಿಟ್ಟಿದ್ದಾರೆ.
ಅಷ್ಟು ದೊಡ್ಡ ನದಿ ನೀರು ನಿಲ್ಲಿಸಲು ಇರುವ ಆಯ್ಕೆಗಳೇನು? ಸವಾಲುಗಳೇನು ಎಂಬ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ 1960ರ ಸಿಂಧೂ ನದಿ ಒಪ್ಪಂದದ ಪ್ರಕಾರ, 35 ಮಿಲಿಯನ್ ಎಕರ್ ಫೀಟ್ ನೀರು ಭಾರತಕ್ಕೆ, 135 ಎಕರ್ ಫೀಟ್ ನೀರು ಪಾಕಿಸ್ತಾನಕ್ಕೆ ಹಂಚಿಕೆಯಾಗಿದೆ. ಸದ್ಯದ ಸಮಸ್ಯೆಗಳ ನಡುವೆ ಜನಸಂಖ್ಯೆ ಹೆಚ್ಚಳ ಇರುವ ಕಾರಣ ಪಾಕಿಸ್ತಾನದ 135 ಎಕರ್ ಫೀಟ್ ನೀರಲ್ಲಿ ಭಾರತ 20 ಮಿಲಿಯನ್ ಎಕರ್ ಫೀಟ್ ನೀರನ್ನ ಬಳಸಿಕೊಳ್ಳಬಹುದು.
ಪಾಕಿಸ್ತಾನ್ ಡೆಲ್ಟಾ ಪ್ರದೇಶದ ಹಿಂದೆಯೇ ಇರುವ ಸುಕುರ್ ವ್ಯಾಲಿಯಲ್ಲಿ ಇಷ್ಟು ನೀರು ವ್ಯರ್ಥವಾಗುತ್ತಿದೆ. ಹೀಗಾಗಿ ಜನಸಂಖ್ಯೆ ಹೆಚ್ಚಳ, ಅಭಿವೃದ್ಧಿ ಹೆಸರಲ್ಲಿ ಹೆಚ್ಚಿನ ನೀರು ಬಳಸಿಕೊಳ್ಳುವ ಕಾರಣಕ್ಕೆ ಒಪ್ಪಂದ ಮುರಿಯಬಹುದು. ಇದನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ಕೂಡ ಒಪ್ಪಲಿದೆ. ಈ ವಾದವನ್ನ ಮುಂದಿಟ್ಟು, ಅಲ್ಪ ಪ್ರಮಾಣದ ನೀರು ತಡೆಯಲು ಸಾಧ್ಯವಿದೆ. ಆದರೆ ಪೂರ್ಣ ಪ್ರಮಾಣದಲ್ಲಿ ಸಂಪೂರ್ಣ ನೀರು ತಡೆಯೋದು ಅಸಾಧ್ಯ. ದೇಶದ ಆ ಭಾಗದಲ್ಲಿ ಅಷ್ಟು ನೀರನ್ನ ತಡೆಯುವ ದೊಡ್ಡ ಡ್ಯಾಂಗಳಿಲ್ಲ. ಈ ನದಿಯಲ್ಲಿ ಮಳೆ ನೀರು ಮಾತ್ರ ಅಲ್ಲದೇ ಭಾರೀ ಪ್ರಮಾಣದಲ್ಲಿ ಹಿಮ ಕೂಡ ನೀರಾಗಿ ಪರಿವರ್ತನೆಯಾಗಿ ಹರಿಯಲಿದೆ. ಹಾಗಾಗಿ ನೀರು ಸಂಪೂರ್ಣ ತಡೆಯಲು ಸಾಧ್ಯವಿಲ್ಲ.
ಡ್ಯಾಂಗಳ ನಿರ್ಮಾಣ ಆಗಬೇಕು. ಡೈವರ್ಷನ್ ಮಾಡಬೇಕು. ಅಷ್ಟು ವೇಗವಾಗಿ ಡ್ಯಾಂ ನಿರ್ಮಾಣ, ಡೈವರ್ಷನ್ ಮಾಡಲು ಸಾಧ್ಯ ಇಲ್ಲ. ಅಷ್ಟು ಪ್ರಮಾಣದ ನೀರು ತಡೆಯುವುದರಿಂದ ದೇಶದ ಒಳಭಾಗದ ಪ್ರದೇಶದ ಜನರಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂದರು.