ಹಸಿರು ಚಹಾವು( ಗ್ರೀನ್ ಟೀ) ಶತಮಾ ನಗಳಿಂದ ಅನೇಕ ಸಂಸ್ಕೃತಿಗಳಲ್ಲಿ ಪ್ರಧಾನವಾಗಿದೆ. ಅದರ ರಿಫ್ರೆಶ್ ರುಚಿ ಮತ್ತು ಸಂಭಾವ್ಯ ಆರೋಗ್ಯ ಪ್ರಯೋಜನಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದೆ. ಆದರೆ ರುಚಿಯನ್ನು ಮೀರಿ, ಗ್ರೀನ್ ಟೀ ಕುಡಿಯುವುದರಿಂದ ನಿಮಗೆ ತಿಳಿದಿರದ ಹಲವಾರು ಆಶ್ಚರ್ಯಕರ ಪ್ರಯೋಜನಗಳಿವೆ.
ಅದರಂತೆ ಆರೋಗ್ಯದ ವಿಷಯದಲ್ಲಿ ಗ್ರೀನ್ ಟೀ ಅತಿ ಆರೋಗ್ಯಕರ ಎಂದು ಈಗಾಗಲೇ ಸಾಬೀತುಪಟ್ಟಿದೆ. ಅದರಲ್ಲೂ ಈ ಟೀಯ ವಿಶೇಷ ಏನಪ್ಪ ಅಂದ್ರೆ, ಈ ಟೀಯನ್ನು ರಾತ್ರಿ ಕುಡಿದರೆ, ಇನ್ನಷ್ಟು ಆರೋಗ್ಯ ಪ್ರಯೋಜನಗಳು ಸಿಗುತ್ತದೆಯಂತೆ
ಗ್ರೀನ್ ಟೀಯನ್ನು ಕುಡಿಯಲು ಸರಿಯಾದ ಸಮಯ ಯಾವುದು? ಹಸಿರು ಚಹಾವನ್ನು ಕುಡಿಯಲು ಸರಿಯಾದ ಸಮಯದ ಬಗ್ಗೆ ನಿಖರವಾಗಿ ಹೇಳಲಾಗದಿದ್ದರೂ ಕೆಫೀನ್ ಇರುವ ಈ ಗ್ರೀನ್ ಟೀಯನ್ನು ಮಲಗುವ ವೇಳೆಗೆ ಕುಡಿಯುವುದು ಒಳ್ಳೆಯದಲ್ಲ. ಕೆಫೀನ್ ವ್ಯಕ್ತಿಯ ನಿದ್ರೆಯ ಮೇಲೆ ಪರಿಣಾಮ ಬೀರಬಹುದು ಮತ್ತು ನಿದ್ರಾಹೀನತೆಯನ್ನು ಉಂಟು ಮಾಡಬಹುದು.
ಬೆಳಿಗ್ಗೆ ಎದ್ದಾಕ್ಷಣ ಈ ರೀತಿಯ ಲಕ್ಷಣ ಕಂಡುಬಂದ್ರೆ ಇದು ಥೈರಾಯ್ಡ್ ಸಮಸ್ಯೆ ಎಂದರ್ಥ
ಏಕೆಂದರೆ ಇದು ಮೆದುಳಿನ ಜಾಗರೂಕತೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ವ್ಯಕ್ತಿಗಳು ಮಲಗುವ ಮುನ್ನ ಹಸಿರು ಚಹಾ ಕುಡಿಯುವುದನ್ನು ನಿಲ್ಲಿಸುವುದು ಉತ್ತಮ. ನೀವೇನಾದರೂ ರಾತ್ರಿ ಗ್ರೀನ್ ಟೀ ಕುಡಿಯುವುದಾದರೆ ಮಲಗುವ ಮುನ್ನ ಕನಿಷ್ಠ 2ರಿಂದ 3 ಗಂಟೆಗಳ ಮೊದಲು ಕುಡಿಯಬಹುದು.
ದಿನವಿಡೀ 2ರಿಂದ 3 ಕಪ್ ಹಸಿರು ಚಹಾವನ್ನು ಸೇವಿಸಿದರೆ ಸಾಕಷ್ಟು ಲಾಭಗಳನ್ನು ಪಡೆಯಬಹುದು. ಆದರೆ, 3 ಕಪ್ಗಿಂತ ಹೆಚ್ಚು ಗ್ರೀನ್ ಟೀ ಕುಡಿದರೆ ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. ಇದರಿಂದ ರಕ್ತಹೀನತೆ, ವಾಕರಿಕೆ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಎದುರಾಗಬಹುದು.
ತೂಕ ಇಳಿಕೆಗೆ ಗ್ರೀನ್ ಟೀ ಅತ್ಯುತ್ತಮ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಇದು ನಮ್ಮನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಗ್ರೀನ್ ಟೀಯಲ್ಲಿ ಪಾಲಿಫಿನಾಲ್ಗಳು ಮತ್ತು ಕೆಫೀನ್ ಇರುತ್ತದೆ. ದಿನದಲ್ಲಿ 3 ಕಪ್ ಗಿಂತ ಹೆಚ್ಚು ಕಪ್ ಗ್ರೀನ್ ಟೀ ಕುಡಿಯಬೇಡಿ. ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಅತಿಯಾದ ಕೆಫೀನ್ ವಾಂತಿ, ಅತಿಸಾರ,
ಹೊಟ್ಟೆ ನೋವಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಊಟಕ್ಕೆ ಮುಂಚೆ ಗ್ರೀನ್ ಟೀಯನ್ನು ಸೇವಿಸುವುದರಿಂದ ಮಲಬದ್ಧತೆ, ಹೊಟ್ಟೆ ನೋವು ಅಥವಾ ವಾಕರಿಕೆ ಉಂಟಾಗಬಹುದು. ಮಲಗುವ ಮುನ್ನ ಗ್ರೀನ್ ಟೀ ಕುಡಿಯುವುದರಿಂದ ನಿದ್ದೆ ಕೂಡ ಬರುವುದಿಲ್ಲ. ಆದ್ದರಿಂದ, ದಿನಕ್ಕೆ ಒಂದು ಅಥವಾ ಎರಡು ಕಪ್ ಗ್ರೀನ್ ಟೀ ಮಾತ್ರ ಕುಡಿಯುವುದು ಒಳ್ಳೆಯದು.