ಬೆಂಗಳೂರು: ಟ್ರಂಪ್ ಹೇಳಿದ್ದು, ಪಾಕಿಸ್ತಾನ ಪ್ರಧಾನಿ ಹೇಳಿದ್ದೇ ನಿಜನಾ? ಮೋದಿ ಹೇಳೋದು ನಂಬೊಲ್ಲವಾ? ಎಂದು ವಿಧಾನ ಪರಿಷತ್ ವಿಪಕ್ಷ ಸಚೇತಕ ರವಿಕುಮಾರ್ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು,
ಕಾಂಗ್ರೆಸ್ ಹೈಕಮಾಂಡ್ ಇದ್ದರೆ ಸೇನೆ ಬಗ್ಗೆ ಮಾತಾಡಿರೋದರ ಬಗ್ಗೆ ತನಿಖೆ ಮಾಡಲಿ. ಯಾವ ರೋಗ ಬಂದಿದೆ ಅಂತ ತನಿಖೆ ಮಾಡಲಿ. ಟ್ರಂಪ್ ಹೇಳಿದ್ದು, ಪಾಕಿಸ್ತಾನ ಪ್ರಧಾನಿ ಹೇಳಿದ್ದೇ ನಿಜನಾ? ಮೋದಿ ಹೇಳೋದು ನಂಬೊಲ್ಲವಾ? ನಾಚಿಕೆ ಆಗ್ಬೇಕು ಕಾಂಗ್ರೆಸ್‌ಗೆ. ಕಾಂಗ್ರೆಸ್‌ನ ದಡ್ಡತನದ ವರ್ತನೆ ಇದು. ಕಾಂಗ್ರೆಸ್‌ಗೆ ರೋಗ ಬಂದಿದೆ.
ಗರ್ಭಿಣಿಯರು ಪಾನೀಪುರಿ ತಿನ್ನುವುದು ಒಳ್ಳೆಯದೋ, ಕೆಟ್ಟದ್ದೋ..? ಇಲ್ಲಿದೆ ಮಾಹಿತಿ
ಬಿಜೆಪಿಯನ್ನು ಟೀಕೆ ಮಾಡೋ ಭರದಲ್ಲಿ ಸೇನೆಯನ್ನ ಹೀಯಾಳಿಸೋದು, ಸೈನಿಕರನ್ನ ಕುಗ್ಗಿಸೋದು ಸರಿಯಲ್ಲ. ರಾಹುಲ್ ಗಾಂಧಿ ಭಾರತದ ಬಗ್ಗೆ ಟೀಕೆ ಮಾಡ್ತಿದ್ದಾರೆ. ಕಾಂಗ್ರೆಸ್‌ನವರು ಹೀಗೆ ಮಾತಾಡೋದು ನೋಡಿದ್ರೆ ಕಾಂಗ್ರೆಸ್ ಪಾಕಿಸ್ತಾನದ ರೂಲಿಂಗ್ ಪಾರ್ಟಿ ಏಜೆಂಟ್ ಆಗಿದೆ. ಮಿತ್ರ ಪಕ್ಷ ಆಗಿದೆ ಅಥವಾ ಪಾಕಿಸ್ತಾನದ ರೂಲಿಂಗ್ ಪಾರ್ಟಿ ಜೊತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆಯೇ ಎಂದು ಪ್ರಶ್ನಿಸಿದ್ದಾರೆ.