ಮಂಡ್ಯ:- ಚಲುವರಾಯಸ್ವಾಮಿ ಕ್ಷೇತ್ರ ಬದಲಾವಣೆ ಕುರಿತು ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ. ಈ ಮೂಲಕ ನಾಗಮಂಗಲ ಕ್ಷೇತ್ರಕ್ಕೆ ಸಚಿವ ಚಲುವರಾಯಸ್ವಾಮಿ ಗುಡ್ ಬೈ ಹೇಳ್ತಾರಾ ಎಂಬ ಪ್ರಶ್ನೆ ಮೂಡಿದೆ.
ಚಲುವರಾಯಸ್ವಾಮಿ ಕ್ಷೇತ್ರ ಬದಲಾವಣೆ ಕುರಿತು ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಚಲುವರಾಯಸ್ವಾಮಿಯವರೆ ನೀವೇನು 30,50 ಸಾವಿರ ಅಂತರದಲ್ಲಿ ಗೆದ್ದಿಲ್ಲ. ಮುಂದಿನ ಚುನಾವಣೆಯಲ್ಲಿ ನೀವು ಈ ಕ್ಷೇತ್ರದಿಂದ ಮರೆ ಮಾಚಿಕೊಂಡ್ರು ಆಶ್ಚರ್ಯ ಪಡುವಂತಿಲ್ಲ. ನಿಮ್ಮ ಕಣ್ಣು ಬೇರೆ ಕ್ಷೇತ್ರದ ಮೇಲೆ ಬಿದ್ದಿದೆ ಎಂದು ಗೊತ್ತಿದೆ. ನಾಗಮಂಗಲ ಜನ್ರ ವಿಶ್ವಾಸ ಇಷ್ಟು ಬೇಗ ಕಳೆದುಕೊಂಡ್ರ. ಅಂಗೊ ಹಿಂಗೊ 3 ಸಾವಿರದಲ್ಲಿ ಗೆದ್ದಿದ್ದಾರೆ. ಅದೆಂಗೆ 3 ಸಾವಿರ ಓಟಲ್ಲಿ ಗೆದ್ದೆ ಅಂತ ದಿನ ಗಿಂಡುಕೊಂಡು ನೋಡ್ಕಳ್ತಾರಂತೆ. ನಿಮ್ಮ ದರ್ಪ, ದುರಾಂಕಾರಕ್ಕೆ ನಾಗಮಂಗಲ ಜನ ಮನೆಗೆ ಕಳಿಸ್ತಾರೆ ಎಂದರು.
Crime News: ಡಿಜೆ ಸೌಂಡ್ ಗೆ ಡ್ಯಾನ್ಸ್ ಮಾಡುತ್ತಿದ್ದ ಯುವಕನಿಗೆ ಚಾಕು ಇರಿತ!
ಡಿಸಿಎಂ ಹಿನ್ನೆಲೆ ಬಿಚ್ಚಿ ನೋಡಿದಾಗ ನಿಮ್ಮ ಹಿನ್ನೆಲೆ, ಸಂಸ್ಕೃತಿ ಎಂತದ್ದು ಅಂತ ಗೊತ್ತಾಗತ್ತೆ ಎಂದು ನಾಗಮಂಗಲದಲ್ಲಿ ಡಿಕೆ ಹಿನ್ನೆಲೆಯನ್ನು ನಿಖಿಲ್ ಕುಮಾರಸ್ವಾಮಿ ಕೆದುಕಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಕಾರ್ಯಕರ್ತರನ್ನ ಬೆದರಿಸುವ ಕೆಲಸ ಮಾಡ್ತಿದ್ದಾರೆ. ಡಿಸಿಎಂ ಹಿನ್ನೆಲೆ ನೋಡಿದ್ಮೇಲೆ ನಿಮ್ಮ ಸಂಸ್ಕೃತಿ ಎಂತದ್ದು ಅಂತ ಗೊತ್ತಾಗತ್ತೆ. ಹೀಗಿದ್ಮೇಲೆ ನಿಮ್ಮಿಂದ ಏನ್ ನಿರೀಕ್ಷೆ ಮಾಡಲು ಸಾಧ್ಯ. ಕುಮಾರಣ್ಣ ಎಂದು ಅಧಿಕಾರ ದುರುಪಯೋಗ ಮಾಡಿಕೊಳ್ಳಲಿಲ್ಲ. ನಿಮ್ಮದೆ ಪಕ್ಷದ ಮಂತ್ರಿಗಳು ಸದಸನದಲ್ಲಿ ನಿಂತು ಹನಿಟ್ರಾಪ್ ಬಗ್ಗೆ ಆತಂಕ ತೋಡ್ಕಳ್ತಾರೆ. ನಿಮ್ಮದು ಹನಿಟ್ರ್ಯಾಪು, ಮನಿ ಟ್ರ್ಯಾಪು, ಜನಗಳಿಗೆ ತೆರಿಗೆ ಟ್ರ್ಯಾಪು. ಉಸಿರಾಡದಂತೆ ಎಲ್ಲರನ್ನ ಟ್ರ್ಯಾಪಿನಲ್ಲಿ ಇಟ್ಟಿದ್ದಾರೆ. ರಾಜ್ಯಕ್ಕೆ ಕಪ್ಪು ಚುಕ್ಕೆ ತರುವ ಕೆಲಸ ಮಾಡ್ತಿದ್ದೀರಲ್ಲ ಡಿಸಿಎಂ ನಿಮಗೆ ನಾಚಿಕೆ ಆಗಲ್ವಾ? ಎಂದು ಡಿಸಿಎಂ ಡಿಕೆ, ಸಚಿವ ಚಲುವರಾಯಸ್ವಾಮಿ ವಿರುದ್ದ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.