ಕಳೆದ ಐದು ದಶಕಗಳಿಂದಲೂ ಬಣ್ಣದ ಲೋಕದಲ್ಲಿ ಮಿಂಚುತ್ತಿರುವ ಸೂಪರ್ ಸ್ಟಾರ್ ರಜನಿಕಾಂತ್ ಚಿತ್ರರಂಗಕ್ಕೆ ವಿದಾಯ ಹೇಳ್ತಾರಾ? ಹೀಗೊಂದು ಸುದ್ದಿ ಹರಿದಾಡ್ತಿದೆ. 70ರ ಈ ವಯಸ್ಸಿನಲ್ಲೂ ತಲೈವರ್ ಚಾರ್ಮ್ ಚೂರು ಹಾಗೇಯೇ ಇದೆ. ಅವರ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಭರ್ಜರಿ ಕಮಾಯಿ ಮಾಡುತ್ತವೆ. ಹೀಗಿರುವಾಗ ರಜನಿ ಚಿತ್ರಕ್ಕೆ ಗುಡ್ ಬಾಯ್ ಹೇಳಿದ್ದಾರೆ ಎನ್ನಲಾಗುತ್ತಿದೆ.
ಇತ್ತೀಚೆಗೆ ರಜನಿಕಾಂತ್ ಪತ್ನಿ ಲತಾ ಅವರಿಗೆ ಮಾಧ್ಯಮಗಳು ಪಡೆಯಪ್ಪನ ವಿದಾಯದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅವರು, “ನನಗೆ ಉತ್ತರ ತಿಳಿದಿರಬೇಕೆಂದು ನಾನು ಬಯಸುತ್ತೇನೆ. ನನಗೆ ತಿಳಿದಿದ್ದರೆ, ನಾನು ನಿಮಗೆ ಹೇಳುತ್ತಿದ್ದೆ” ಎಂದಿದ್ದಾರೆ. ಲತಾ ರಜನಿಕಾಂತ್ ಅವರಿಗೂ ರಜನಿ ಸಿನಿಮಾ ನಿವೃತ್ತಿ ಬಗ್ಗೆ ಗೊತ್ತಿಲ್ಲವಂತೆ. ಗೊತ್ತಿದ್ದರೆ ಅವರು ಹೇಳುತ್ತಿದ್ದರು ಅನ್ನೋದು ಅವರ ಮಾತಿನ ಅರ್ಥ.
ರಜನಿಕಾಂತ್ ಸದ್ಯ ಜೈಲರ್ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಲೋಕೇಶ್ ಕನಗರಾಜ್ ನಿರ್ದೇಶನದ ಕೂಲಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದಾದ ಬಳಿಕ ತಲೈವ ಯಾವುದೇ ಸಿನಿಮಾ ಒಪ್ಪಿಕೊಂಡಂತಿಲ್ಲ. ಹೀಗಾಗಿ ಚಿತ್ರರಂಗದಿಂದ ಸೂಪರ್ ಸ್ಟಾರ್ ದೂರ ಸರಿತಾರೆ ಅನ್ನೋ ಚರ್ಚೆ ಇದೆ.