ದಿನಾ ಮನೆಯನ್ನು ಗುಡಿಸಿ, ಒರೆಸಿ, ಸ್ವಚ್ಛವಾಗಿ ಇಟ್ಟುಕೊಂಡರೂ ಕೂಡ, ಜಿರಳೆ, ಸೊಳ್ಳೆ ಹಾಗೂ ಇರುವೆಗಳ ಕಾಟವನ್ನು ಮಾತ್ರ ತಡೆಯಲು ಸಾಧ್ಯವಿಲ್ಲ! ಇವು ಮೂವರೂ ಕೂಡ ಮನೆಗೆ ಕರೆಯದೇ ಬರುವ ಅತಿಥಿಗಳು! ಯಾವ ಸಮಯದಲ್ಲಿ ಹೇಗೆ ಮನೆಯೊಳಗೆ ಬಂದು ಬಿಡುತ್ತವೆ ಎಂದು ಹೇಳಲು ಸಾಧ್ಯವಿಲ್ಲ
ಇರುವೆಗಳು ಮನೆಗೆ ಬರಲು ಮೊದಲ ಕಾರಣವೆಂದರೆ ಆಹಾರ. ಯಾವುದೇ ಆಹಾರವನ್ನೇ ಆಗಲಿ ಇರುವೆಗಳು ಗುಂಪಾಗಿಯೇ ತೆಗೆದುಕೊಂಡು ಹೋಗುತ್ತವೆ. ಹೆಣ್ಣು ಇರುವೆಗಳನ್ನು ರಾಣಿ ಮತ್ತು ಗಂಡು ಇರುವೆಗಳನ್ನು ಡ್ರೋನ್ ಎಂದು ಕರೆಯಲಾಗುತ್ತದೆ. ಅಲ್ಲದೇ ಇವೆರಡೂ ಸಹ ಒಟ್ಟಾಗಿ ಕೆಲಸ ಮಾಡುತ್ತವೆ. ಇವು ನಿರಂತರವಾಗಿ ಆಹಾರ ಮತ್ತು ನೀರನ್ನು ಹುಡುಕುತ್ತಿರುತ್ತವೆ.,
ಇಂತಹ ವೇಳೆ ಇರುವೆ ದೊಡ್ಡ ಪ್ರಮಾಣದ ಆಹಾರ ಪದಾರ್ಥ ಅಥವಾ ಸಿಹಿ ಪದಾರ್ಥವನ್ನು ಕಂಡುಕೊಂಡಾಗ, ಅವು ವಿಶೇಷ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ, ಅದು ಇತರ ಇರುವೆಗಳಿಗೆ ಸಂಕೇತ ನೀಡುತ್ತದೆ. ಇವುಗಳನ್ನು ಅನುಸರಿಸಿ ಇತರ ಇರುವೆಗಳು ಸಹ ಅದೇ ಮಾರ್ಗವನ್ನು ಅನುಸರಿಸುತ್ತವೆ ಮತ್ತು ಆಹಾರವನ್ನು ತೆಗೆದುಕೊಂಡು ಸಾಲಾಗಿ ಬರುತ್ತವೆ. ಹೀಗೆ ಇರುವೆಗಳು ಸಾಲಾಗಿ ಓಡಾಡುತ್ತದೆ.
ಗೆಲ್ಲುವ ಪಂದ್ಯ ಕೈಚೆಲ್ಲಿದ ರಾಜಸ್ಥಾನ್: RR ಕ್ಯಾಪ್ಟನ್ ರಿಯಾನ್ ಪರಾಗ್ ಹೇಳಿದ್ದೇನು?
ಇರುವೆಗಳ ಪಾದಗಳ ಮೇಲಿನ ಸೂಕ್ಷ್ಮವಾದ ಪ್ಯಾಡ್‌ಗಳು ಮತ್ತು ಪಾದಗಳ ಮೇಲಿನ ಸೂಕ್ಷ್ಮ ಕೂದಲುಗಳು ಮೃದುವಾದ ಮೇಲ್ಮೈಗಳಲ್ಲಿಯೂ ನಡೆಯಲು ಅನುವು ಮಾಡಿಕೊಡುತ್ತದೆ. ಇದರಿಂದ ಅವು ಎಲ್ಲಿ ಬೇಕಾದರೂ ಹೋಗಬಹುದು. ಇರುವೆಗಳ ಹಾವಳಿ ತಡೆಗಟ್ಟಲು ಕೆಲವು ಟಿಪ್ಸ್ ಅನುಸರಿಸಬೇಕು ಎಂದು ತಜ್ಞರು ಹೇಳುತ್ತಾರೆ.
ಇರುವೆಗಳು ಬರದಿರಲು ಯಾವಾಗಲೂ ಆಹಾರವನ್ನು ಗಾಳಿಯಾಡದ ಪಾತ್ರೆಗಳಲ್ಲಿ ಸಂಗ್ರಹಿಸಿಡಬೇಕು. ಇದಲ್ಲದೆ, ಕಸದ ಬುಟ್ಟಿಯ ಮುಚ್ಚಳಗಳನ್ನು ಬಿಗಿಯಾಗಿ ಮುಚ್ಚಬೇಕು. ಇರುವೆಗಳು ಹಾದಿಯಲ್ಲಿ ನಡೆದುಕೊಂಡು ಹೋಗುವುದನ್ನು ನೀವು ಗಮನಿಸಿದರೆ, ಅವುಗಳ ರಾಸಾಯನಿಕ ಗುರುತುಗಳನ್ನು ಅಳಿಸಲು ವಿನೆಗರ್ ಅಥವಾ ಬ್ಲೀಚಿಂಗ್ ಪೌಡರ್ ಸಿಂಪಡಿಸಿ. ಇದು ಅವುಗಳ ದಾರಿಯನ್ನು ತಪ್ಪಿಸುತ್ತದೆ
ಸರಿಯಾಗಿ ಹೊಂದಿಕೊಳ್ಳುವ ಬಾಗಿಲು ಮತ್ತು ಕಿಟಕಿಗಳನ್ನು ಅಳವಡಿಸುವುದು ಮತ್ತು ಅಲ್ಲಿ ತೇವಾಂಶವಿಲ್ಲವೇ ಎಂದು ಖಚಿತಪಡಿಸಿಕೊಳ್ಳುವುದರಿಂದ ಇರುವೆಗಳನ್ನು ತಡೆಗಟ್ಟಬಹುದು. ಇರುವೆಗಳು ತೊಂದರೆ ಕೊಡಬಹುದಾದರೂ, ಅವು ಪರಿಸರ ವೈವಿಧ್ಯತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.
ಇದಲ್ಲದೇ, ಅನೇಕ ಜಾತಿಯ ಇರುವೆಗಳು ಯಾವುದೇ ಹಾನಿ ಮಾಡುವುದಿಲ್ಲ. ಆದ್ದರಿಂದ, ಇರುವೆಗಳನ್ನು ಕೊಲ್ಲುವ ಮುನ್ನ, ಅವು ಉಂಟು ಮಾಡುವ ಸಮಸ್ಯೆಗಳ ಬಗ್ಗೆ ಯೋಚಿಸಬೇಕು. ಇರುವೆಗಳಿಂದ ನಿಮಗೆ ಗಂಭೀರ ಸಮಸ್ಯೆ ಇದ್ದರೆ, ಇರುವೆ ನಾಶಕಗಳಿಂದ ಬಳಸುವುದರಿಂದ ತಾತ್ಕಾಲಿಕವಾಗಿ ಅವುಗಳನ್ನು ತೊಡೆದುಹಾಕಬಹುದು.