ಬೆಳ್ಳಿ ಉಂಗುರವನ್ನು ಬೆರಳಿಗೆ ಧರಿಸುವುದರಿಂದ ಆಗುವ ಪ್ರಯೋಜನಗಳೇನು ಗೊತ್ತಾ? ಅವು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಚಂದ್ರ ಮತ್ತು ಇತರ ಗ್ರಹಗಳ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವಲ್ಲಿ ಬೆಳ್ಳಿ ಉಂಗುರವು ತುಂಬಾ ಪರಿಣಾಮಕಾರಿಯಾಗಿರುತ್ತದೆ. ಇದನ್ನು ಸರಿಯಾದ ಆಚರಣೆಗಳೊಂದಿಗೆ ಹೆಬ್ಬೆರಳಿನ ಮೇಲೆ ಧರಿಸಿದರೆ, ಒಬ್ಬರ ಜೀವನದಲ್ಲಿ ಅನೇಕ ಅದ್ಭುತ ಬದಲಾವಣೆಗಳನ್ನು ಕಾಣಬಹುದು.
ಪ್ರಾಚೀನ ಭಾರತೀಯ ಜ್ಯೋತಿಷ್ಯ ಮತ್ತು ಆಯುರ್ವೇದವು ಲೋಹಗಳು ನಮ್ಮ ದೇಹದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಮಾತನಾಡುತ್ತವೆ. ಬೆಳ್ಳಿಯನ್ನು ತಂಪಾದ, ಶಾಂತಗೊಳಿಸುವ ಲೋಹವೆಂದು ಪರಿಗಣಿಸಲಾಗುತ್ತದೆ. ಇದನ್ನು ಧರಿಸುವುದರಿಂದ ಮಾನಸಿಕ, ದೈಹಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳಿವೆ.
ಮದುವೆ ಮನೆಯಲ್ಲಿ ಬೆಳ್ಳಿ ತಟ್ಟೆ ಊಟ ಇರಬೇಕು, ಹಬ್ಬಕ್ಕೆ ಬೆಳ್ಳಿ ಲೋಟದಲ್ಲಿ ನೀರು ಕುಡಿಬೇಕು, ಹೆಂಗಸರಿಗೆ ಬೆಳ್ಳಿ ಆಭರಣ ಅಂದ್ರೆ ಎಲ್ಲಿಲ್ಲದ ಪ್ರೀತಿ. ಆದ್ರೆ ಇತ್ತೀಚಿನ ದಿನಗಳಲ್ಲಿ ಬೆಳ್ಳಿ ಹೆಸರಲ್ಲಿ ಮಂಗ್ಯಾ ಮಾಡೋರು ಜಾಸ್ತಿಯಾಗಿದ್ದಾರೆ. ಮಾರ್ಕೆಟ್ನಲ್ಲಿ ನೋಡಿದ್ರೆ ಸಾಕು, ಬೆಳ್ಳಿದಂತೆ ಕಾಣೋ ನಕಲಿ ವಸ್ತುಗಳು ತುಂಬಿ ತುಳುಕುತ್ತಿರುತ್ತವೆ. ಇದರಿಂದ ಎಷ್ಟೋ ಜನ ಮೋಸ ಹೋಗಿದ್ದಾರೆ.
ಹಂಗಾಗಿ, ನೀವು ಕಷ್ಟಪಟ್ಟು ದುಡಿದಿರೋ ದುಡ್ಡು ಕೊಟ್ಟು ಬೆಳ್ಳಿ ಅಂತ ತಗೊಂಡು ಬರ್ತೀರಲ್ಲ, ಅದು ಅಸಲಿಯೋ ನಕಲಿಯೋ ಅಂತ ತಿಳ್ಕೊಳ್ಳೋದು ತುಂಬಾನೇ ಮುಖ್ಯ. ಚಿನ್ನದ ಬಗ್ಗೆ ಎಷ್ಟೋ ಜನಕ್ಕೆ ಗೊತ್ತಿರುತ್ತೆ, ಆದ್ರೆ ಬೆಳ್ಳಿ ಅಂದ್ರೆ ಸುಮ್ನೆ ತಗೊಂಡು ಬಂದು ಬಿಡ್ತಾರೆ. ಆಮೇಲೆ ಮೋಸ ಹೋದ ಮೇಲೆ ಬೇಜಾರಾಗ್ತಾರೆ. ಅದಕ್ಕೆ ಸ್ವಲ್ಪ ಹುಷಾರಾಗಿರಿ. ನೀವು ಶುದ್ಧ ಬೆಳ್ಳಿ ಕೊಳ್ಳಬೇಕು ಅಂದ್ರೆ, ಇಲ್ಲಿದೆ ನೋಡಿ ಒಂದ್ಸಲ ಟ್ರೈ ಮಾಡಿ.
ನೋಡಿ, ನೂರಕ್ಕೆ ನೂರು ಪಾಲು ಶುದ್ಧ ಬೆಳ್ಳಿ ಇದೆಯಲ್ಲ, ಅದು ಮೃದು ಇರುತ್ತೆ. ಅದಕ್ಕೆ ದಿನಾ ಯೂಸ್ ಮಾಡೋಕೆ ಗಟ್ಟಿ ಇರಲ್ಲ. ಅದಕ್ಕೆ ಬೇರೆ ಲೋಹಗಳನ್ನ ಮಿಕ್ಸ್ ಮಾಡ್ತಾರೆ. ಸಾಮಾನ್ಯವಾಗಿ ಶೇ.92.5 ರಷ್ಟು ಶುದ್ಧ ಬೆಳ್ಳಿ ಇದ್ರೆ ಅದನ್ನ ಸ್ಟರ್ಲಿಂಗ್ ಸಿಲ್ವರ್ ಅಂತ ಕರೀತಾರೆ. ಇದರಲ್ಲಿ ಶೇ.7.5 ರಷ್ಟು ತಾಮ್ರ ಇಲ್ಲಾಂದ್ರೆ ಬೇರೆ ಲೋಹ ಮಿಕ್ಸ್ ಆಗಿರುತ್ತೆ.
ನಮ್ಮ ಇಂಡಿಯಾದಲ್ಲಿ ಬೆಳ್ಳಿ ಶುದ್ಧ ಇದ್ಯಾ ಇಲ್ವಾ ಅಂತ ಚೆಕ್ ಮಾಡೋಕೆ ಅಂತಾನೆ “ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್” ಅಂತ ಒಂದು ಸಂಸ್ಥೆ ಇದೆ. ಇವರು ಬೆಳ್ಳಿಗೆ ಹಾಲ್ಮಾರ್ಕ್ ಹಾಕ್ತಾರೆ. ನೀವು ಅಸಲಿ ಬೆಳ್ಳಿ ತಗೊಂಡ್ರೆ ಅದರ ಮೇಲೆ ಈ ಕೆಳಗಿನ ಗುರುತುಗಳೆಲ್ಲಾ ಇರ್ಬೇಕು.
BIS ಲೋಗೋ
ಶುದ್ಧತೆ ನಂಬರ್ (ಉದಾಹರಣೆಗೆ 925 ಅಂದ್ರೆ 92.5% ಶುದ್ಧ ಅಂತ)
ಟೆಸ್ಟ್ ಮಾಡಿರೋ ಸೆಂಟರ್ ಮತ್ತೆ ತಯಾರಕರ ಕೋಡ್ಇ
ವೆಲ್ಲಾ ಕರೆಕ್ಟಾಗಿ ಬೆಳ್ಳಿ ಮೇಲೆ ಇದ್ರೆ, ನೀವು ಮೋಸ ಹೋಗೋ ಚಾನ್ಸೇ ಇಲ್ಲ.
ಮನೆಯಲ್ಲೇ ಬೆಳ್ಳಿ ಶುದ್ಧತೆ ಚೆಕ್ ಮಾಡೋದು ಹೇಗೆ?
ಒಂದು ವೇಳೆ ನಿಮ್ಮ ಹತ್ರ ಹಾಲ್ಮಾರ್ಕ್ ಇಲ್ಲದ ಬೆಳ್ಳಿ ಇದ್ರೆ ಚಿಂತೆ ಮಾಡ್ಬೇಡಿ. ಮನೆಯಲ್ಲೇ ಒಂದ್ಸಲ ಟ್ರೈ ಮಾಡಿ ನೋಡಬಹುದು:
ಮ್ಯಾಗ್ನೆಟ್ ಟ್ರಿಕ್: ಅಪ್ಪಟ ಬೆಳ್ಳಿ ಯಾವತ್ತೂ ಮ್ಯಾಗ್ನೆಟ್ಗೆ ಅಂಟಿಕೊಳ್ಳಲ್ಲ. ಒಂದು ವೇಳೆ ಅಂಟಿಕೊಂಡ್ರೆ ಅದು ಕಲಬೆರಕೆ ಬೆಳ್ಳಿ ಅಂತ ತಿಳ್ಕೊಳ್ಳಿ.
ಐಸ್ ಟೆಸ್ಟ್: ಬೆಳ್ಳಿ ಬೇಗನೆ ಶಾಖನ ಹೀರಿಕೊಳ್ಳುತ್ತೆ. ಬೆಳ್ಳಿ ಮೇಲೆ ಐಸ್ ಇಟ್ಟರೆ ಅದು ಬೇಗ ಕರಗಿದ್ರೆ, ನಿಮ್ಮ ಬೆಳ್ಳಿ ಅಸಲಿ ಅಂತ ಅರ್ಥ.
ಇಲ್ಲಪ್ಪಾ, ನನಗೆ ಮನೆಯಲ್ಲಿ ಮಾಡುವ ಟ್ರಿಕ್ ಎಲ್ಲಾ ಸರಿ ಬರುತ್ತಿಲ್ಲ ಅಂದ್ರೆ, ನೀವು ನೇರವಾಗಿ ಆಭರಣ ಅಂಗಡಿಗೆ ಹೋಗಿ ಅಲ್ಲಿರುವ ಆಸಿಡ್ ಟೆಸ್ಟ್ ಅಥವಾ ಎಲೆಕ್ಟ್ರಾನಿಕ್ ಟೆಸ್ಟಿಂಗ್ ಮೆಷಿನ್ ಬಳಸಿಕೊಂಡು ಚೆಕ್ ಮಾಡಿಸಿಕೊಳ್ಳಬಹುದು. ಆಸಿಡ್ ಟೆಸ್ಟ್ನಲ್ಲಿ ಒಂದು ವಿಶೇಷ ಕೆಮಿಕಲ್ ಹಾಕಿ ಟೆಸ್ಟ್ ಮಾಡುತ್ತಾರೆ, ಇದರಿಂದ ಬೆಳ್ಳಿಯ ಶುದ್ಧತೆ ಗೊತ್ತಾಗುತ್ತದೆ. ಆದರೆ ಎಲೆಕ್ಟ್ರಾನಿಕ್ ಮೆಷಿನ್ ಟೆಸ್ಟ್ ತುಂಬಾ ಸರಿಯಾಗಿಯೇ ಫಲಿತಾಂಶ ಕೊಡುತ್ತದೆ ಅಂತಾರೆ.