Close Menu
Ain Live News
    Facebook X (Twitter) Instagram YouTube
    Tuesday, July 1
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಅಡುಗೆ ಮನೆಯಲ್ಲಿ ಜಿರಳೆಗಳ ಕಾಟ ಹೆಚ್ಚಾಗಿದ್ಯಾ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ!

    By AIN AuthorJuly 1, 2025
    Share
    Facebook Twitter LinkedIn Pinterest Email
    Demo

    ಮನೆಯಲ್ಲಿ ಜಿರಳೆ ಅತ್ತಿಂದಿತ್ತ ಓಡಾಡುತ್ತಿದ್ದರೆ ನಿಮಗೆ ಒಂಥರಾ ಅನಿಸೋದಿಲ್ಲವೇ? . ಅದರಲ್ಲೂ ನೀವು ನಿಮ್ಮ ಮನೆಯನ್ನು ಅಡುಗೆ ಮನೆಯನ್ನು ಎಷ್ಟೇ ಶುಚಿಯಾಗಿಟ್ಟರೂ ಜಿರಳೆಗಳ ಕಾಟ ತಪ್ಪಿದ್ದಲ್ಲ. ಈ ಜಿರಳೆಗಳ ಕಾಟದಿಂದ ಮುಕ್ತಿ ಪಡೆಯಲು ಹಲವಾರು ಸ್ಪ್ರೇಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ಅದರ ಘಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದಕ್ಕಾಗಿ ನಾವಿಂದು ಕೆಲವೊಂದು ಮನೆಮದ್ದನ್ನು ತಿಳಿಸಲಿದ್ದೇವೆ. ಇವುಗಳನ್ನು ಬಳಸಿ ಮನೆಯಿಂದ ಜಿರಳೆಗಳನ್ನು ಓಡಿಸಬಹುದು.

    ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಜ. 5ರವರೆಗೆ ಭಾರೀ ಮಳೆ!

    ಮನೆಯನ್ನು ಎಷ್ಟೇ ಶುಚಿಯಾಗಿಟ್ಟರೂ ಜಿರಳೆಗಳು ವಿವಿಧೆಡೆ ಓಡಾಡುವುದು ಕಂಡು ಬರುತ್ತದೆ. ಈ ಸಮಸ್ಯೆಯಂತೂ ಅಡುಗೆಮನೆಯಲ್ಲಿ ಹೆಚ್ಚು ಗೋಚರಿಸುತ್ತದೆ. ಕಿಚನ್ ಸಿಂಕ್, ಸ್ವಿಚ್ ಬೋರ್ಡ್, ಪ್ಲಾಸ್ಟಿಕ್ ಡಬ್ಬಗಳು, ಕಪಾಟುಗಳು ಸೇರಿದಂತೆ ಅಡುಗೆ ಮನೆಯನ್ನು ಆಕ್ರಮಿಸಿಕೊಳ್ಳುತ್ತವೆ. ಜಿರಳೆಗಳನ್ನು ಹಿಮ್ಮೆಟ್ಟಿಸಲು ವಿವಿಧ ಸ್ಪ್ರೇಗಳನ್ನು ಬಳಸುತ್ತಾರೆ. ಇದರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಅವುಗಳನ್ನು ತೊಡೆದುಹಾಕಲು ಕೆಲವು ನೈಸರ್ಗಿಕ ಸಲಹೆಗಳನ್ನು ಅನುಸರಿಸಲು ತಜ್ಞರು ಸೂಚಿಸುತ್ತಾರೆ. ಜಿರಳೆಗಳನ್ನು ಹೋಗಲಾಡಿಸಲು ತಜ್ಞರು ನೀಡಿರುವ ಸಲಹೆಗಳು ಹೀಗಿವೆ.

    ಕಿತ್ತಳೆಸಿಪ್ಪೆಗಳು:ಜಿರಳೆಗಳನ್ನು ಮನೆಯಿಂದ ಓಡಿಸಲು ಕಿತ್ತಳೆ ಸಿಪ್ಪೆಗಳು ಉತ್ತಮ ಪರಿಹಾರ. ಏಕೆಂದರೆ ಕಿತ್ತಳೆ ಸಿಪ್ಪೆಯಲ್ಲಿ ಲಿಮೋನೆನ್ ಎಂಬ ರಾಸಾಯನಿಕ ಇರುತ್ತದೆ. ಜಿರಳೆಗಳು ಈ ವಾಸನೆಯನ್ನು ಇಷ್ಟಪಡುವುದಿಲ್ಲ. ಇದಕ್ಕಾಗಿ ಕಿತ್ತಳೆ ಸಿಪ್ಪೆಯನ್ನು ಸಂಪೂರ್ಣವಾಗಿ ಬಿಸಿಲಿನಲ್ಲಿ ಒಣಗಿಸಬೇಕು. ನಂತರ ಅವುಗಳನ್ನು ಅಡುಗೆಮನೆ ಸೇರಿದಂತೆ ಮನೆಯ ಎಲ್ಲಾ ಮೂಲೆಗಳಲ್ಲಿ ಜಿರಳೆಗಳು ಹೆಚ್ಚಾಗಿ ಬರುವ ಸ್ಥಳಗಳಲ್ಲಿ ಇಡಬೇಕು. ಸಾಧ್ಯವಾದರೆ ಅವುಗಳನ್ನು ಒಣಗಿಸಿ ಜಿರಳೆಗಳು ಸಂಚರಿಸುವ ಸ್ಥಳಗಳಲ್ಲಿ ಇಡಬೇಕಾಗುತ್ತದೆ.

    ಲವಂಗ ಮತ್ತು ಬಿರಿಯಾನಿ ಎಲೆ:ಜಿರಳೆಗಳು ಲವಂಗದ ಕಟುವಾದ ವಾಸನೆಯನ್ನೂ ಸಹ ಇಷ್ಟಪಡುವುದಿಲ್ಲ. ಲವಂಗವು ಜಿರಳೆಗಳನ್ನು ಸುಲಭವಾಗಿ ಓಡಿಸಲು ಸಹಾಯ ಮಾಡುತ್ತದೆ. ಮೊದಲು ಸ್ವಲ್ಪ ಲವಂಗವನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಬೆಕಾಗುತ್ತದೆ. ನಂತರ ಒಂದು ಲೋಟ ನೀರನ್ನು ಕುದಿಸಿ ಹಾಗೂ ಅದರಲ್ಲಿ ಈ ಪುಡಿಯನ್ನು ಮಿಶ್ರಣ ಮಾಡಿ. ಮನೆ ಹಾಗೂ ಅಡುಗೆ ಮನೆಗಳನ್ನು ಸ್ವಚ್ಛಗೊಳಿಸುವಾಗ, ಒಂದು ಬಕೆಟ್ ನೀರಿನಲ್ಲಿ ಲವಂಗ ನೀರನ್ನು ಬೆರೆಸಿ ಒರೆಸಿ. ಮತ್ತು ಅಡುಗೆ ಮನೆಯ ಮೂಲೆಗಳಲ್ಲಿ ಲವಂಗವನ್ನು ಹಾಕಿದರೂ ಅವು ಓಡಿಹೋಗುತ್ತವೆ. ಇಲ್ಲಿ ನೀವು ಲವಂಗದ ಬದಲಿಗೆ ಬಿರಿಯಾನಿ ಎಲೆಗಳನ್ನು ಸಹ ಬಳಸಬಹುದು ಎಂದು ತಜ್ಞರು ತಿಳಿಸುತ್ತಾರೆ.

    ಅಡುಗೆ ಸೋಡಾ:ಜಿರಳೆಗಳನ್ನು ತಡೆಯಲು ಅಡುಗೆ ಸೋಡಾ ತುಂಬಾ ಸಹಕಾರಿಯಾಗಿದೆ. ಇದಕ್ಕಾಗಿ ಮೊದಲು ಸಣ್ಣ ಬಟ್ಟಲಿನಲ್ಲಿ ಅಡುಗೆ ಸೋಡಾ ಹಾಗೂ ಸಕ್ಕರೆಯನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಮಿಶ್ರಣ ಮಾಡಿ. ನಂತರ ಅದನ್ನು ಜಿರಳೆ ಸಮಸ್ಯೆ ಇರುವ ಜಾಗದಲ್ಲಿ ಸಿಂಪಡಿಸಿ. ಇದರಲ್ಲಿರುವ ಸಕ್ಕರೆ ಜಿರಳೆಗಳನ್ನು ಆಕರ್ಷಿಸುತ್ತದೆ. ನಂತರ ಮಿಶ್ರಣವನ್ನು ತಿನ್ನುವ ಜಿರಳೆಗಳು ಸಾಯುತ್ತವೆ ಎಂದು ತಜ್ಞರು ಹೇಳುತ್ತಾರೆ.

    ಬಿಳಿ ವಿನೆಗರ್:ಜಿರಳೆಗಳನ್ನು ಹಿಮ್ಮೆಟ್ಟಿಸಲು ಬಿಳಿ ವಿನೆಗರ್ ಪರಿಣಾಮಕಾರಿಯಾಗಿದೆ. ಇದಕ್ಕಾಗಿ, ಒಂದು ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ಬಿಳಿ ವಿನೆಗರ್ ಅನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣ ಮಾಡಿ. ನಂತರ ಜಿರಳೆಗಳು ಓಡಾಡುವ ಸ್ಥಳದಲ್ಲಿ ಮಿಶ್ರಣವನ್ನು ಸಿಂಪಡಿಸಿ ಎಂದು ತಜ್ಞರು ಸಲಹೆ ಕೊಡುತ್ತಾರೆ.

    ಸ್ವಚ್ಛತೆಯು ಮುಖ್ಯ:ಜಿರಳೆಗಳು ಬರದಂತೆ ನೋಡಿಕೊಳ್ಳಲು ಮನೆಯನ್ನು ಕಾಲಕಾಲಕ್ಕೆ ಸ್ವಚ್ಛವಾಗಿಟ್ಟುಕೊಳ್ಳಬೇಕು. ಅದರಲ್ಲೂ ಅಡುಗೆ ಮನೆಯನ್ನು ಅಸ್ತವ್ಯಸ್ತವಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಪ್ಲಾಸ್ಟಿಕ್ ಕವರ್ ಹಾಗೂ ಬಾಕ್ಸ್‌ಗಳನ್ನು ಹೊರಗೆ ಎಸೆಯಿರಿ. ಇವು ಅಡುಗೆ ಮನೆಯಲ್ಲಿದ್ದರೆ ಜಿರಳೆಗಳು ವಿಪರೀತವಾಗಿ ಬೆಳೆಯುತ್ತವೆ. ಹಾಗಾಗಿ ಇವು ಬೆಳೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಜ್ಞರು ಹೇಳುತ್ತಾರೆ.

    Demo
    Share. Facebook Twitter LinkedIn Email WhatsApp

    Related Posts

    ಹೈ ಬಿಪಿ ಕಡಿಮೆ ಆಗ್ಬೇಕಾ? ಹಾಗಿದ್ರೆ ಕೂಡಲೇ ಈ ಆಹಾರ ತಿನ್ನುವುದನ್ನ ತಕ್ಷಣವೇ ನಿಲ್ಲಿಸಿ!

    July 1, 2025

    ಗಂಡ ಹೆಂಡತಿ ನಡುವಿನ ಅಂತರ ಹೆಚ್ಚಿಸುತ್ತಿರುವ ಕಾರಣಗಳು ಇವೇ ನೋಡಿ..! ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಿ

    July 1, 2025

    Diabetes Control : ಮಧುಮೇಹಿಗಳ ಗಮನಕ್ಕೆ : ಈ 5 ವಿಷಯಗಳನ್ನು ನೀವು ನೆನಪಿನಲ್ಲಿಡಬೇಕು!

    June 30, 2025

    Heart Attack: ಹೃದಯಾಘಾತಕ್ಕೆ ಅಸಲಿ ಕಾರಣ..? ಮೊಬೈಲ್, ಜಂಕ್’ಫುಡ್ ಹೃದಯದ ವಿಲನ್..!

    June 30, 2025

    ಬೊಜ್ಜಿಗೆ ಮತ್ತೊಂದು ಹೊಸ ಮೆಡಿಸನ್.. ಒಂದೇ ಇಂಜೆಕ್ಷನ್’ನಿಂದ 100 ಕೆಜಿ ತೂಕ ಇಳಿಸಬಹುದು..! ಇದರ ಬೆಲೆ ಎಷ್ಟು?

    June 30, 2025

    ಸಂಜೆ ವಾಕಿಂಗ್ ಮಾಡೋದು ಆರೋಗ್ಯಕ್ಕೆ ಬೆಸ್ಟ್: ಬೆಳಗ್ಗೆ ಟೈಂ ಇಲ್ಲದವರು ಹೀಗೆ ಮಾಡಿ!

    June 29, 2025

    ನಿಮಗಿದು ಗೊತ್ತಾ!? ಹೆಣ್ಣು ಮಕ್ಕಳಿಗೆ ಎಡಭಾಗದಲ್ಲಿ ಏಕೆ ಮೂಗು ಚುಚ್ಚುತ್ತಾರೆ?

    June 29, 2025

    ದಿನಕ್ಕೆ ಎಷ್ಟು ಬಾರಿ ಮೊಬೈಲ್ ಚಾರ್ಜ್ ಮಾಡಬೇಕು ಗೊತ್ತಾ!? ಮೊಬೈಲ್ ಪ್ರಿಯರು ತಿಳಿಯಬೇಕು!

    June 29, 2025

    ಅತಿಯಾದ ಮೊಬೈಲ್ ಬಳಕೆ ಅನೇಕ ರೋಗಗಳಿಗೆ ಕಾರಣವಾಗುತ್ತಂತೆ!

    June 28, 2025

    ಆನೆಗಳ ಕಿವಿ ಏಕೆ ದೊಡ್ಡದಾಗಿರುತ್ತವೆ? ಇದನ್ನು ನೀವು ತಿಳಿಯಲೇಬೇಕು!

    June 28, 2025

    ಅಲೋವೆರಾ ಗಿಡವನ್ನು ಮನೆಯ ಈ ದಿಕ್ಕಿನಲ್ಲಿ ನೆಟ್ಟರೆ ಹಣದ ಕೊರತೆಯೇ ಇರುವುದಿಲ್ಲ!

    June 28, 2025

    ನಿಮ್ಮ ಹತ್ತಿರ ಇರುವ ಬೆಳ್ಳಿ ಅಸಲಿನಾ? ನಕಲಿನಾ? ತಿಳಿಯಲು ಹೀಗೆ ಮಾಡಿ!

    June 28, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.