ಹೊಟ್ಟೆಯ ಭಾಗದ ಕೊಬ್ಬು ಒಂದು ರೀತಿ ಹಠಮಾರಿ ಕೊಬ್ಬಾಗಿದ್ದು ಇದನ್ನು ಕರಗಿಸುವುದು ಅಸಾಧ್ಯ ಎಂದೇ ಜನರು ಅಂದುಕೊಳ್ಳುತ್ತಾರೆ. ಹೊಟ್ಟೆಯ ಕೊಬ್ಬು ಕರಗಿಸಿ ಸ್ನಾಯುಗಳಿಂದ ನಿರ್ಮಿತ ಆರೋಗ್ಯಕರ ದೇಹ ಭಂಗಿ ನಿಮ್ಮದಾಗಬೇಕು ಎಂದಾದರೆ ಈ ಟಿಪ್ಸ್ ಗಳನ್ನು ತಪ್ಪದೇ ಫಾಲೋ ಮಾಡಿ.
ಈ ರಾಶಿಯವರಿಗೆ ಗುರು ಬಲ ಬಂದಿದೆ ಮದುವೆ ಮಾಡಿಿ: ಬುಧವಾರದ ರಾಶಿ ಭವಿಷ್ಯ 14 ಮೇ 2025
ವಿಶ್ವ ಆರೋಗ್ಯ ಸಂಸ್ಥೆಯು ಮದ್ಯಪಾನ ಎಂದೆಂದಿಗೂ ಅನಾರೋಗ್ಯಕರ ಎಂದೇ ಹೇಳುತ್ತದೆ. ಮದ್ಯಪಾನದಿಂದ ಅನೇಕ ಅನಾರೋಗ್ಯಗಳು ಉಂಟಾಗುತ್ತದೆ. ಇದರೊಂದಿಗೆ ದೇಹದ ಕೊಬ್ಬು, ತೂಕ ಹೆಚ್ಚಳಕ್ಕೂ ಇದು ಕಾರಣವಾಗಿದೆ.
ಮದ್ಯಪಾನಕ್ಕೆ ನೀವು ದಾಸರಾಗಿದ್ದರೆ ಮೊದಲು ಅದನ್ನು ನಿಲ್ಲಿಸಿ. ಇದು ಹಸಿವು ಹಾಗೂ ಒತ್ತಡ ನಿಯಂತ್ರಿಸುವ ಹಾರ್ಮೋನ್ಗಳ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ.
ಇದರಲ್ಲಿ ಕ್ಯಾಲೊರಿಗಳು ಹೆಚ್ಚಿದ್ದು ಇದರಿಂದ ಹೊಟ್ಟೆಯ ಕೊಬ್ಬು ಅಧಿಕವಾಗುತ್ತದೆ. ನಿಮಗೆ ಸಪಾಟಾದ ಅಂದವಾದ ಹೊಟ್ಟೆ ಬೇಕು ಎಂದಾದರೆ ಮದ್ಯಪಾನವನ್ನು ನಿಲ್ಲಿಸಿ ಎಂದು ಗೋ ಸಲಹೆ ನೀಡುತ್ತಾರೆ.
ಜನರು ಹೆಚ್ಚಾಗಿ ವೇಟ್ ಲಾಸ್ ಪ್ರಕ್ರಿಯೆಯಲ್ಲಿ ಕಾರ್ಬ್ಸ್ ಕಡಿಮೆ ಮಾಡುತ್ತಾರೆ ಆದರೆ ಇದು ವೇಟ್ ಲಾಸ್ಗೆ ಒಳ್ಳೆಯದಲ್ಲ ಎಂಬುದು ಗೇ ಮಾತಾಗಿದೆ
ನಿಮ್ಮ ಚಟುವಟಿಕೆಯ ಮಟ್ಟವನ್ನು ಆಧರಿಸಿ ನಿಮ್ಮ ಕಾರ್ಬೋಹೈಡ್ರೇಟ್ ಸೇವನೆಯನ್ನು ಹೊಂದಿಸಲು ಡಾನ್ ಹೇಳುತ್ತಾರೆ. ಹೆಚ್ಚು ಕೆಲಸ ಮಾಡದಿದ್ದರೆ ಕಾರ್ಬೋಹೈಡ್ರೇಟ್ಸ್ ಕಡಿಮೆ ಮಾಡಿ.
ಹೆಚ್ಚಿನ ಚಟುವಟಿಕೆಯ ವ್ಯಕ್ತಿ ನೀವಾಗಿದ್ದರೆ ಅದರ ಪ್ರಮಾಣವನ್ನು ಅದಕ್ಕೆ ತಕ್ಕಂತೆ ಹೊಂದಿಸಿ. ಕಾರ್ಬೋಹೈಡ್ರೇಟ್ಸ್ ಶಕ್ತಿಯ ಮೂಲವಾಗಿದೆ ಹಾಗಾಗಿ ನಿಮ್ಮ ಜೀವನ ಶೈಲಿಗೆ ಬೇಕಾದಂತೆ ಅದನ್ನು ಹೊಂದಿಸಿ ಎಂದಿದ್ದಾರೆ.
ನಿಮ್ಮ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ನೀರು ಅತ್ಯಗತ್ಯ ಎಂಬ ಅಂಶದ ಬಗ್ಗೆ ಯಾವುದೇ ಚರ್ಚೆಯಿಲ್ಲ. ನಿಮ್ಮ ತೂಕ ಇಳಿಸುವ ಕ್ರಮದಲ್ಲಿ ನೀರು ಕೂಡ ಪ್ರಮುಖ ಪಾತ್ರ ವಹಿಸುತ್ತದೆ.
ಹಾಗಾಗಿ ಬೆಳಗ್ಗೆದ್ದೊಡನೆ ನೀರು ಸೇವಿಸಿ ಇದರಿಂದ ದೇಹದ ವ್ಯವಸ್ಥೆ ಚುರುಕಾಗುತ್ತದೆ ಹಾಗೂ ಚಯಾಪಚಯ ಕ್ರಿಯೆಯ ಮೇಲೆ ಇದು ಧನಾತ್ಮಕ ಪರಿಣಾಮ ಬೀರುತ್ತದೆ ಎನ್ನುತ್ತಾರೆ. ಊಟದ ಮೊದಲು ಮತ್ತು ನಂತರ ಊಟದ ಬದಲು ನೀರು ಕುಡಿಯಲು ಡಾನ್ ಗೋ ಸಲಹೆ ನೀಡುತ್ತಾರೆ
ಪ್ರೊಟೀನ್ ಭರಿತ ಊಟ, ತಿಂಡಿಗೆ ಆದ್ಯತೆ ನೀಡಿ ಎಂದು ಗೋ ಸೂಚಿಸುತ್ತಾರೆ. “ದೇಹದ ತೂಕದ ಪ್ರತಿ ಪೌಂಡ್ಗೆ 0.8 ರಿಂದ 1 ಗ್ರಾಂ ಪ್ರೋಟೀನ್ ಸೇವಿಸಿ.
ಇನ್ನು 90% ಕ್ಯಾಲೊರಿಯನ್ನು ಸಂಪೂರ್ಣ, ಸಂಸ್ಕರಿಸದೇ ಇರುವ ಆಹಾರ ಮೂಲಗಳಿಂದ ಪಡೆಯಿರಿ ಎಂದು ಗೋ ಹೇಳುತ್ತಾರೆ. ಸಂಸ್ಕರಿಸದ ಆಹಾರವು ರಕ್ತದಲ್ಲಿನ ಸಕ್ಕರೆಯನ್ನು ಕಾಪಾಡಿಕೊಳ್ಳುವುದು ಮತ್ತು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಸೇರಿದಂತೆ ಅನೇಕ ಆರೋಗ್ಯ ಪ್ರಯೋಜನಗಳೊಂದಿಗೆ ಸಂಬಂಧ ಹೊಂದಿದೆ.
ಒತ್ತಡವು ಯಾವುದೇ ಫಿಟ್ನೆಸ್ಗೆ ಅಡ್ಡಿಯನ್ನುಂಟು ಮಾಡುತ್ತದೆ. ನೀವು ಹೆಚ್ಚು ಒತ್ತಡಕ್ಕೊಳಗಾಗಿದ್ದಷ್ಟೂ, ನಿಮ್ಮ ದೇಹವು ಬದಲಾವಣೆಗಳನ್ನು ವಿರೋಧಿಸುತ್ತದೆ.
ಹೆಚ್ಚಿನ ಒತ್ತಡಕ್ಕೆ ಒಳಗಾದಾಗ ದೇಹವು ಹೆಚ್ಚು ಕಾರ್ಟಿಸೋಲ್ ಅನ್ನು ಉತ್ಪಾದಿಸುತ್ತದೆ. ಇದು ನಿಮ್ಮ ಹಸಿವನ್ನು ಹೆಚ್ಚಿಸುವ ಮೂಲಕ ನಿಮ್ಮ ಹೊಟ್ಟೆಯ ಸುತ್ತಲೂ ಕೊಬ್ಬಿನ ಶೇಖರಣೆಯನ್ನು ಹೆಚ್ಚಿಸುತ್ತದೆ.
ಇದರಿಂದಾಗಿ ನೀವು ಹೆಚ್ಚು ತಿನ್ನುತ್ತೀರಿ ಎಂದು ಫಿಟ್ನೆಸ್ ಗೈಡ್ ತಿಳಿಸುತ್ತಾರೆ. ಹಾಗಾಗಿ ಒತ್ತಡ ನಿರ್ವಹಣೆಗೆ ವಾಕಿಂಗ್ ಮಾಡಿ, ಪ್ರಕೃತಿಯೊಂದಿಗೆ ಆದಷ್ಟು ಸಮಯ ಕಳೆಯಿರಿ
ನಿದ್ದೆಗೂ ಗಮನ ಹರಿಸುವುದು ಮುಖ್ಯವಾಗಿದೆ ಎಂದು ಗೋ ಹೇಳುತ್ತಾರೆ. ಗುಣಮಟ್ಟದ ನಿದ್ರೆ ಪಡೆಯಲು ಆದ್ಯತೆ ನೀಡಿ. ನಿದ್ರೆಯ ಕೊರತೆಯು ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ, ನಿಮ್ಮ ಶಕ್ತಿಯ ಮಟ್ಟವನ್ನು ಹಾಳು ಮಾಡುತ್ತದೆ ಮತ್ತು ಹಸಿವನ್ನು ಹೆಚ್ಚಿಸುತ್ತದೆ