ಹಲ್ಲುನೋವು ಎದುರಾಗಲು ಕೆಲವಾರು ಕಾರಣಗಳಿವೆ. ಸಾಮಾನ್ಯ ಕಾರಣಗಳೆಂದರೆ ಹಲ್ಲು ಮತ್ತು ಒಸಡುಗಳ ಸಂಧುಗಳಲ್ಲಿ ಎದುರಾಗಿರುವ ಸೋಂಕು. ಪರಿಣಾಮವಾಗಿ ಉರಿಯೂತ ಮತ್ತು ಒಸಡುಗಳಲ್ಲಿ ರಕ್ತ ಒಸರುವುದು ಕಂಡುಬರುತ್ತದೆ
ಈ ಹಣ್ಣುಗಳನ್ನು ಬೇಸಿಗೆಯಲ್ಲಿ ತಪ್ಪದೇ ಸೇವಿಸಿ.. ಈ ಸಮಸ್ಯೆಗಳು ನಿಮ್ಮ ಬಳಿ ಸುಳಿಯಲ್ಲ!
ಎರಡು ಹಲ್ಲುಗಳ ನಡುವಿನ ಸಂಧು ಹಾಗೂ ಹಲ್ಲು ಮತ್ತು ಒಸಡುಗಳ ಸಂಧುಗಳಲ್ಲಿ ಸಿಲುಕಿಕೊಂಡ ಆಹಾರಕಣಗಳನ್ನು ಬ್ಯಾಕ್ಟೀರಿ ಯಾಗಳು ಕೊಳೆಸುವ ಕಾರಣದಿಂದ ಈ ಭಾಗದಲ್ಲಿ ಸೋಂಕು ಎದುರಾಗುತ್ತದೆ.ಇದು ಹಲ್ಲುನೋವು ಮತ್ತು ಬಾಯಿಯ ದುರ್ವಾಸನೆಗೂ ಕಾರಣವಾಗುತ್ತದೆ. ಈ ಸೋಂಕು ಎದುರಾದಾಗ ನೀವಾಗಿ ಇದಕ್ಕೆ ಚಿಕಿತ್ಸೆ ನೀಡಲು ಯತ್ನಿಸದಿರಿ ಹಾಗೂ ಆದಷ್ಟೂ ಬೇಗನೇ ದಂತ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಿ.
ಹಿಪ್ಪಲಿ ದೇಹಕ್ಕೆ ತುಂಬಾ ಆರೋಗ್ಯಕರ ಗಿಡಮೂಲಿಕೆ ಎಂದು ಪರಿಗಣಿಸಲಾಗಿದೆ. ಇದನ್ನು ಹೆಚ್ಚಾಗಿ ಹಲ್ಲುನೋವು ಗುಣಪಡಿಸಲು ಬಳಸಲಾಗುತ್ತದೆ. ಜೊತೆಗೆ ಮಲೆನಾಡಿನ ಅನೇಕ ಮನೆಮದ್ದುಗಳಲ್ಲಿಯೂ ಬಳಸಲಾಗುತ್ತದೆ. ಇದರ ಪುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಒಸಡುಗಳು ಮತ್ತು ಹಲ್ಲುಗಳ ಮೇಲೆ ಉಜ್ಜಿದರೇ ಹಲ್ಲು ನೋವು ಮತ್ತು ಊತ ಕಡಿಮೆಯಾಗುತ್ತದೆ.
ಈ ಹಣ್ಣುಗಳನ್ನು ಬೇಸಿಗೆಯಲ್ಲಿ ತಪ್ಪದೇ ಸೇವಿಸಿ.. ಈ ಸಮಸ್ಯೆಗಳು ನಿಮ್ಮ ಬಳಿ ಸುಳಿಯಲ್ಲ!
ಇದು ಮುಟ್ಟಿಗೂ ಪ್ರಯೋಜನಕಾರಿ: ಹಿಪ್ಪಲಿ ಮಹಿಳೆಯರಿಗೆ ಸಹ ಪ್ರಯೋಜನಕಾರಿಯಾಗಿದೆ. ಇದು ಮುಟ್ಟಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಒಂದು ರೀತಿಯ ಮಸಾಲೆ. ಹಿಪ್ಪಲಿಯು ಔಷಧಿ ಅಥವಾ ಗಿಡಮೂಲಿಕೆಯಾಗಿಯೂ ಕೆಲಸ ಮಾಡುತ್ತದೆ. ಜೊತೆಗೆ ಇದನ್ನು ಭಾರತೀಯ ಉದ್ದನೆಯ ಮೆಣಸು ಎಂದೂ ಕರೆಯುತ್ತಾರೆ.
ಹಿಪ್ಪಲಿಯನ್ನು ಮುಖ್ಯವಾಗಿ ಮೇಘಾಲಯದ ಚಿರಾಪುಂಜಿಯಲ್ಲಿ ಬೆಳೆಯಲಾಗುತ್ತದೆ.. ಇದು ಉತ್ತರಾಖಂಡ, ಅಸ್ಸಾಂ, ಪಶ್ಚಿಮ ಬಂಗಾಳ, ನೇಪಾಳ ಮತ್ತು ಉತ್ತರ ಪ್ರದೇಶಗಳಲ್ಲಿಯೂ ಕಂಡುಬರುತ್ತದೆ. ಇದರ ಬಳ್ಳಿಗಳು ಮರಗಳ ನೆರಳಿನಲ್ಲಿ ಚೆನ್ನಾಗಿ ಬೆಳೆಯುತ್ತವೆ. ಇದರ ಕೃಷಿಗೆ ಸುಣ್ಣದಕಲ್ಲಿನ ಮಣ್ಣು ಸೂಕ್ತವಾಗಿದೆ.
ಹಿಪ್ಪಾಲಿಯನ್ನು ಇಂಗ್ಲಿಷ್‌ನಲ್ಲಿ ಲಾಂಗ್ ಪೆಪ್ಪರ್ ಮತ್ತು ಪೈಪರ್ ಲಾಂಗಮ್ ಎಂದು ಕರೆಯಲಾಗುತ್ತದೆ. ಹಿಪ್ಪಲಿ ಒಂದು ಔಷಧೀಯ ಸಸ್ಯ. ಇದನ್ನು ಆಯುರ್ವೇದ ಔಷಧಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಪೈಪರೇಸಿ ಕುಟುಂಬಕ್ಕೆ ಸೇರಿದ ಹೂಬಿಡುವ ಬಳ್ಳಿಯಾಗಿದೆ.
ಹಿಪ್ಪಾಲಿಯನ್ನು ಇಂಗ್ಲಿಷ್‌ನಲ್ಲಿ ಲಾಂಗ್ ಪೆಪ್ಪರ್ ಮತ್ತು ಪೈಪರ್ ಲಾಂಗಮ್ ಎಂದು ಕರೆಯಲಾಗುತ್ತದೆ. ಹಿಪ್ಪಲಿ ಒಂದು ಔಷಧೀಯ ಸಸ್ಯ. ಇದನ್ನು ಆಯುರ್ವೇದ ಔಷಧಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಪೈಪರೇಸಿ ಕುಟುಂಬಕ್ಕೆ ಸೇರಿದ ಹೂಬಿಡುವ ಬಳ್ಳಿಯಾಗಿದೆ.
ಇದರ ಹಣ್ಣು ಗಸಗಸೆ ಬೀಜಗಳಂತೆ ಇರುತ್ತವೆ.. ಹಿಪ್ಪಲಿಯನ್ನು ಆಯುರ್ವೇದದಲ್ಲಿ ಔಷಧಿಯಾಗಿ ಮತ್ತು ಅಡುಗೆಯಲ್ಲಿ ಮಸಾಲೆ ಪದಾರ್ಥವಾಗಿ ಬಳಸಲಾಗುತ್ತದೆ. ಇದರ ಕಾಂಡಗಳು ಮತ್ತು ಹಣ್ಣುಗಳನ್ನು ಎಲೆಗಳ ಜೊತೆಗೆ ಬಳಸಲಾಗುತ್ತದೆ. ಹಿಪ್ಪಲಿಯಲ್ಲಿ ಹಲವು ಔಷಧೀಯ ಗುಣಗಳಿವೆ. ಇದು ಹಲ್ಲುನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.