ಬೆಂಗಳೂರು: ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಗ್ಸಾಮಿನೇಷನ್ (CISCE) ಐಸಿಎಸ್‌ಇ ಮತ್ತು 10ನೇ ಮತ್ತು ಐಎಸ್ಸಿ 12ನೇ ತರಗತಿಯ ಪರೀಕ್ಷಾ ಫಲಿತಾಂಶಗಳನ್ನು ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ ಇಂದು ಪ್ರಕಟಿಸಿದೆ. ಸದ್ಯ ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷಾ ಮಂಡಳಿ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಟಾಪರ್‌ಗಳ ಹೆಸರನ್ನು ಪ್ರಕಟಿಸಲಿದೆ.
kshaya Tritiya 2025: ಅಕ್ಷಯ ತೃತೀಯದಂದೇ ಚಿನ್ನ ಖರೀದಿಸಲು ಕಾರಣವೇನು..? ಇಲ್ಲಿದೆ ಮಾಹಿತಿ
12ನೇ ತರಗತಿಯ ಐಎಸ್‌ಸಿ ಪರೀಕ್ಷೆಗಳು ಫೆಬ್ರವರಿ 13 ರಿಂದ ಏಪ್ರಿಲ್ 5 ರವರೆಗೆ ನಡೆದರೆ, 10ನೇ ತರಗತಿಯ ಐಸಿಎಸ್‌ಇ ಪರೀಕ್ಷೆಗಳು ಫೆಬ್ರವರಿ 18 ರಿಂದ ಮಾರ್ಚ್ 27 ರವರೆಗೆ ನಡೆದಿದ್ದವು. ಈ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಫಲಿತಾಂಶ ನೋಡುವುದು ಹೇಗೆ?
- ಮೊದಲಿಗೆ ಅಧಿಕೃತ ವೆಬ್ಸೈಟ್ಗಳಾದ cisce.org ಅಥವಾ results.cisce.org ಗೆ ಭೇಟಿ ನೀಡಬೇಕು.
- ಐಸಿಎಸ್‌ಇ 10ನೇ ಫಲಿತಾಂಶ 2025 ಅಥವಾ ಐಎಸ್ಸಿ 12ನೇ ಫಲಿತಾಂಶ 2025 ಮೇಲೆ ಕ್ಲಿಕ್ ಮಾಡಬೇಕು.
- ಶಾಲೆ ವತಿಯಿಂದ ನೀಡಿರು ವಿಶಿಷ್ಟ ಐ.ಡಿ, ನೋಂದಣಿ ಸಂಖ್ಯೆ ಮತ್ತು ಕ್ಯಾಪ್ಚಾವನ್ನು ನಮೂದಿಸಬೇಕು.
- ಬಳಿಕ ನಿಮ್ಮ ಫಲಿತಾಂಶ ಪರದೆಯ ಮೇಲೆ ಕಾಣಿಸುತ್ತದೆ.
- ಅಲ್ಲಿಯೇ ವೀಕ್ಷಿಸಬಹುದು ಅಥವಾ ಡೌನ್‌ಲೋಡ್ ಮಾಡಿಕೊಳ್ಳಬಹುದು.
ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕನಿಷ್ಠ 33% ಮತ್ತು ಪ್ರತಿ ವಿಷಯದಲ್ಲಿ ಕನಿಷ್ಠ 35% ಅಂಕಗಳನ್ನು ಗಳಿಸಬೇಕು. ಮರುಪರಿಶೀಲನಾ ಫಲಿತಾಂಶಗಳಿಂದ ತೃಪ್ತರಾಗದ ವಿದ್ಯಾರ್ಥಿಗಳು ಮೇ 4 ರ ನಂತರ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.