ಬೆಂಗಳೂರು: Nandini ತನ್ನ ಕಡೆ ತಪ್ಪು ಇಟ್ಕೊಂಡು Amul ಮೇಲೆ ಆರೋಪ ಮಾಡೋದು ಸರಿ ಅಲ್ಲ ಎಂದು ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕೆಎಂಎಫ್ ಟೆಂಡರ್ನಲ್ಲಿ ಭಾಗಿಯಾಗಬೇಕಿತ್ತು. ಆದರೆ ಯಾಕೆ ಭಾಗಿಯಾಗಿಲ್ಲ ಎಂದು ಗೊತ್ತಿಲ್ಲ.
ಟೆಂಡರ್ನಲ್ಲಿ ಭಾಗಿಯಾಗದೇ ಇರುವುದು ತಪ್ಪು. ನಮ್ಮ ಲೋಪ ಇದೆ. ಮೊದಲೇ ಸಿಎಂ, ಡಿಸಿಎಂ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತಾಡಬೇಕಿತ್ತು. ಮಾಹಿತಿ ಕೊರತೆಯಿಂದಾಗಿ ಹೀಗೆ ಆಗಿರಬಹುದು ಎಂದು ತಿಳಿಸಿದ್ದಾರೆ.
ಡಯೆಟ್ ಗೆ ಹೇಳಿ ಗುಡ್ ಬಾಯ್: ಬೆಳಗ್ಗೆ ದೋಸೆ-ಇಡ್ಲಿ ತಿಂದೇ ಸ್ಲಿಮ್ ಆಗಬಹುದು! ಹೇಗೆ ಅಂತೀರಾ?
ಕೆಎಂಎಫ್ ಕಡೆಯಿಂದ ನಿರ್ಲಕ್ಷ್ಯ ಆಗಿರಬಹುದು. ನಾನು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಈಗ ನಂದಿನಿಗೆ ಅವಕಾಶ ಕೊಡಲಾಗುತ್ತದೆ ಎಂದು ಮಾತುಕತೆ ನಡೆಯುತ್ತಿದೆ. ಮುಂದೆ ಏನಾಗುತ್ತದೆ ಎಂದು ಕಾದುನೋಡಬೇಕು ಎಂದಿದ್ದಾರೆ.