ಹುಬ್ಬಳ್ಳಿ:- ಜನಗಣತಿ ವರದಿ ಜಾರಿಗಾಗಿ ಮತ್ತೇ ಸಚಿವ ಸಂಪುಟದ ಕರೆದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಮಹೇಶ್ ಟೆಂಗಿನಕಾಯಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಜನಗಣತಿ ವರದಿ ಜಾರಿಗಾಗಿ ಸಾಕಷ್ಟು ಚರ್ಚೆ ನಡೆದಿದೆ. ಸರಕಾರದ ನಿರ್ಧಾರ ಬಗ್ಗೆ ಒಪ್ಪಿಕೊಳ್ಳುವ ವಿಚಾರ ಇಲ್ಲ. ಜನಗಣತಿ ವರದಿ ಬಗ್ಗೆ ಜನರಿಗೆ ಯಾವುದೇ ರೀತಿಯ ವಿಶ್ವಾಸ ಇಲ್ಲ. ಯಾವುದೇ ಕಾರಣಕ್ಕೋ ಜಾತಿಗಣತಿ ಜಾರಿ ಆಗಲ್ಲ. ಈಗಾಗಲೇ ಸಚಿವ ಸಂಪುಟದಲ್ಲಿ ಸಾಕಷ್ಟು ಚರ್ಚೆ ಆಗಿದೆ. ಸಚಿವ ಸಂಪುಟದಲ್ಲಿ ಅವರದೇ ಸಚಿವರು ವಿರೋಧ ಮಾಡಿದ್ದಾರೆ. ಇನ್ನೊಂದು ಸಚಿವ ಸಂಪುಟದ ಸಭೆ ಕರೆಯುವ ಕುರಿತು ಸಿಎಂ ಹೇಳಿದ್ದಾರೆ. ಆ ಸಚಿವ ಸಂಪುಟದಲ್ಲಿ ಯಾವುದೇ ತೀರ್ಮಾನ ಆಗಲ್ಲ ಇನ್ನೊಂದು ಸಲ ಜಾತಿ ಗಣತಿ ಆಗಬೇಕು ಎಂದರು
ಇನ್ನೂ ಎಐಸಿಸಿ ನಾಯಕ, ಸಂಸದ ರಾಹುಲ್ ಗಾಂಧಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. USA ದಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಕುರಿತು ಕೇವಲವಾಗಿ ಮಾತನಾಡಿದ್ದನ್ನ ವಿರೋಧ ಮಾಡುವೆ. ಭಾರತದ ಪ್ರಜೆಯಾಗಿ , ಜವಾಬ್ದಾ ರಿಯತ ಜನಪ್ರತಿನಿಧಿ ಆಗಿ ನಡೆದುಕೊಂಡಿದ್ದು ಒಳ್ಳೆಯ ಬೆಳವಣಿಗೆ ಅಲ್ಲ. ಭಾರತೀಯ ಪ್ರಜೆ ಆಗಿ ವಿದೇಶಿಕ್ಕೆ ಹೋಗಿ ದೇಶದ ಬಗ್ಗೆ ಒಳ್ಳೆಯ ವಿಚಾರ ಮಾತನಾಡಬೇಕು. ಈ ಹಿಂದೆ ಅಂದಿನ ಪಿಎಂ ಆಗಿದ್ದ ಇಂದಿರಾ ಗಾಂಧಿ ಅವರು ಬಾಂಗ್ಲಾದೇಶ ಮೇಲೆ ಯುದ್ಧ ಸಾರಿದ್ದರು. ಅಂದು ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಮುಕ್ತ ಕಂಠದಿಂದ ಸ್ವಾಗತ ಮಾಡಿದ್ದರು. ಇಂದಿರಾ ಗಾಂಧಿ ಅವರು ದುರ್ಗೆಯ ಸ್ವರೂಪ ಆಗಿದ್ದಾರೆ ಎಂದಿದ್ದರು. ಯಾವಾಗಲೂ ವಿದೇಶಕ್ಕೆ ಹೋದಾಗ ಭಾರತದ ಘನತೆ ಗೌರವ ತಂದು ಕೊಡುವ ರೀತಿಯಲ್ಲಿ ಮಾತನಾಡಬೇಕು. ಇಡೀ ಜಗತ್ತು ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನ ಕೊಂಡಾಡತಾ ಇದೆ. ಮೋದಿ ಅವರ ನಾಯಕತ್ವ ಮೆಚ್ಚುಕೊಂಡಿದೆ. ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿ ಎಚ್ಚರಿಕೆಯಿಂದ ಮಾತನಾಡಬೇಕು ಎಂದರು.